ಅನ್ಯಕೋಮಿನ ಇಬ್ಬರು ಯುವಕರೊಂದಿಗೆ ಯುವತಿ ಪ್ರವಾಸ; ಪ್ರವಾಸಿಗರ ಮೇಲೆ ಹಿಂದೂ ಯುವಕರ ದಾಳಿ
ಕೊಡಗಿಗೆ ಆಗಮಿಸಿದ್ದ, ಪ್ರವಾಸಿಗರ ಮೇಲೆ ಹಿಂದೂ ಯುವಕರಿದ್ದ ಗುಂಪು ದಾಳಿ ನಡೆಸಿದೆ. ಮಡಿಕೇರಿಯ ಮಂಡಲಪಟ್ಟಿ ಪ್ರವಾಸ ತಾಣದಲ್ಲಿ ಈ ಘಟನೆ ನಡೆದಿದೆ.

ನವದೆಹಲಿ: ಕೊಡಗಿಗೆ ಆಗಮಿಸಿದ್ದ, ಪ್ರವಾಸಿಗರ ಮೇಲೆ ಹಿಂದೂ ಯುವಕರಿದ್ದ ಗುಂಪು ದಾಳಿ ನಡೆಸಿದೆ. ಮಡಿಕೇರಿಯ ಮಂಡಲಪಟ್ಟಿ ಪ್ರವಾಸ ತಾಣದಲ್ಲಿ ಈ ಘಟನೆ ನಡೆದಿದೆ.
ಅನಾಮಿಕ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ನಂದಾ ಕಿಶನ್, ಸಮನ್ ಸಾಜಿದ್, ಶಂಶೀರ್ ಹಾಗೂ ಇಬ್ಬರು ಯುವತಿಯರು ಓರ್ವ ಹಿಂದೂ ಯುವತಿ ಮಡಿಕೇರಿಯ ಪ್ರವಾಸಕ್ಕೆ ಹೋಗಿದ್ದರು. ಯುವಕರು ಪ್ರವಾಸಕ್ಕೆ ತೆರಳಲು ಪೋಷಕರಿಂದಲೂ ಅನುಮತಿ ಪಡೆದಿದ್ದರು. ಪ್ರವಾಸ ಮುಗಿಸಿ ವಾಪಸ್ಸಾಗಲು ಕಾರಿನ ಬಳಿ ಬಂದಾಗ ಅವರನ್ನು ಐವರು ಯುವಕರ ಗುಂಪು ತಡೆದಿದೆ.
ಹಿಂದೂ ಯುವತಿಯೊಬ್ಬರು ಇಬ್ಬರು ಮುಸ್ಲಿಮ್ ಯುವಕರೊಂದಿಗೆ ಪ್ರವಾಸಕ್ಕೆ ಬಂದಿದ್ದರ ವಿರುದ್ಧ ಯುವಕರ ಗುಂಪು ಆಕ್ಷೇಪ ವ್ಯಕ್ತಪಡಿಸಿದೆ. ತಕ್ಷಣವೇ 5 ಯುವಕರೊಂದಿಗೆ ಇನ್ನೂ ಒಂದಷ್ಟು ಮಂದಿ ಸೇರಿಕೊಂಡು ಸಮನ್, ಶಂಶೀರ್ ವಿರುದ್ಧ ದಾಳಿ ನಡೆಸಿದ್ದಾರೆ, ಇಬ್ಬರು ಯುವತಿಯರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿದ್ದು ದಾಳಿಯ ಘಟನೆಯನ್ನು ಹೆಮ್ಮೆಯಿಂದ ಸಾಮಾಜಿಕ ಜಾಲತಾಣದಲ್ಲಿ ವಿವರಿಸಲಾಗಿದೆ.
ನಂದಾ ಕಿಶನ್ ಅವರು ಅನಾಮಿಕ ದುಷ್ಕರ್ಮಿಗಳ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


