ರಾಜ್ಯ

ಕೂದಲೆಳೆ ಅಂತರದಲ್ಲಿ ನಾಗರಹಾವು ಕಡಿತದಿಂದ ಮಗು ಎಸ್ಕೇಪ್, ತಾಯಿಯ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ

ಮನೆಯ ಮುಂದೆಯೇ ನಾಗರಹಾವಿನ ಕಡಿತದಿಂದ ತನ್ನ ಮಗುವನ್ನು ತಾಯಿಯೊಬ್ಬಳು ರಕ್ಷಿಸಿದ ವಿಡಿಯೋವೊಂದು ವೈರಲ್ ಆಗಿದ್ದು, ತಾಯಿಯ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕೂದಲೆಳೆ ಅಂತರದಲ್ಲಿ ನಾಗರಹಾವು ಕಡಿತದಿಂದ ಮಗು ಎಸ್ಕೇಪ್, ತಾಯಿಯ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ
ಹಾವಿನಿಂದ ಮಗು ರಕ್ಷಿಸಿದ ತಾಯಿ
Published On :

ಮಂಡ್ಯ: ಮನೆಯ ಮುಂದೆಯೇ ನಾಗರಹಾವಿನ ಕಡಿತದಿಂದ ತನ್ನ ಮಗುವನ್ನು ತಾಯಿಯೊಬ್ಬಳು ರಕ್ಷಿಸಿದ ವಿಡಿಯೋವೊಂದು ವೈರಲ್ ಆಗಿದ್ದು, ತಾಯಿಯ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹೌದು..ಮಂಡ್ಯದಲ್ಲಿ ಈ ಘಟನೆ ನಡೆದಿದ್ದು, ಮಗುವೊಂದು ನಾಗರಹಾವು (Cobra) ಕಡಿತದಿಂದ ಜಸ್ಟ್ ಮಿಸ್ ಆಗಿದೆ. ತಾಯಿಯೂ (Mother) ಕ್ಷಣಾರ್ಧದಲ್ಲಿ ತನ್ನ ಮಗುವನ್ನು (Son) ಹಾವಿನಿಂದ ರಕ್ಷಣೆ ಮಾಡಿದ್ದಾಳೆ. ಇಲ್ಲದಿದ್ದರೆ ಆ ಆವು ಮಗುವನ್ನು ಕಚ್ಚಿ ಬಿಡುತ್ತಿತ್ತು. ತಾಯಿ ಮಗುವನ್ನು ರಕ್ಷಿಸುತ್ತಿರುವ ವಿಡಿಯೋ (Video) ಎಲ್ಲೆಡೆ ವೈರಲ್ (Viral) ಆಗಿದೆ.

CCTVಯಲ್ಲಿ ಸೆರೆಯಾಯ್ತು ಎದೆ ಝಲ್ ಎನಿಸುವ ದೃಶ್ಯ
ಬಾಲಕನೊಬ್ಬ ಮನೆಯಿಂದ ಹೊರಗೆ ಹೋಗೋಕೆ ರೆಡಿಯಾಗಿರುತ್ತಾನೆ. ಹಿಂದೆಯೇ ಅವನ ತಾಯಿ ಇರುತ್ತಾಳೆ. ಮಗು ಒಂದು ಹೆಜ್ಜೆಯನ್ನು ಮೆಟ್ಟಿಲಿನಿಂದ ಕೆಳಗೆ ಇಡುತ್ತಾನೆ. ಇನ್ನೇನು ಹಾವಿನ ಮೇಲೆ ಕಾಲಿಡಬೇಕಿತ್ತು, ಅಷ್ಟರಲ್ಲಿ ನಾಗರಹಾವು ಹಿಂದಕ್ಕೆ ಸರಿಯುತ್ತೆ. ಮಗುವಿನತ್ತ ತನ್ನ ತಲೆಯೆತ್ತಿ ಬುಸ್‍ಗುಟ್ಟುತ್ತಾ ಬರುತ್ತೆ. ಅಷ್ಟರಲ್ಲಿ ತಾಯಿ ಓಡಿ ಬಂದು ಮಗುವನ್ನು ಎತ್ತಿಕೊಂಡು, ಹಾವು ಕಚ್ಚುವುದನ್ನು ತಪ್ಪಿಸುತ್ತಾಳೆ. ಅಲ್ಲದೆ ಹಾವಿನಿಂದ ಮಗುವನ್ನು ದೂರಕೆ ಕರೆದೊಯ್ಯುತ್ತಾರೆ.

ಸುಮಾರು 11 ಸೆಕೆಂಡ್ ಗಳ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಮಂಡ್ಯದ ಮದ್ದೂರಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಇನ್ನು ಕೂದಲೆಳೆ ಅಂತರದಲ್ಲಿ ಮಗುವನ್ನು ಹಾವಿನ ಕಡಿತದಿಂದ ರಕ್ಷಿಸಿದ ತಾಯಿಯ ಧೈರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.