ಬಿಡಿಎ ಒಂದ್ಸಲ ಸಂಪೂರ್ಣ ಸ್ವಚ್ಛವಾಗಬೇಕು: ಸಿಎಂ ಬೊಮ್ಮಾಯಿ
ಬಿಡಿಎ ಒಂದ್ಸಲ ಸಂಪೂರ್ಣ ಸ್ವಚ್ಛ ಮಾಡಿ ಅದನ್ನು ಮುಖ್ಯವಾಹಿನಿಗೆ ತರುವ ವ್ಯವಸ್ಥೆ ಮಾಡುವ ಮೂಲಕ ನಾಗರೀಕರಿಗೆ ಸೇವೆ ಸಮರ್ಪಕವಾಗಿ ಸಿಗುವ ಕೆಲಸ ಮಾಡುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರು: ಬಿಡಿಎ ಒಂದ್ಸಲ ಸಂಪೂರ್ಣ ಸ್ವಚ್ಛ ಮಾಡಿ ಅದನ್ನು ಮುಖ್ಯವಾಹಿನಿಗೆ ತರುವ ವ್ಯವಸ್ಥೆ ಮಾಡುವ ಮೂಲಕ ನಾಗರೀಕರಿಗೆ ಸೇವೆ ಸಮರ್ಪಕವಾಗಿ ಸಿಗುವ ಕೆಲಸ ಮಾಡುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಆರ್.ಟಿ.ನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ ಅವರು, ಬಿಡಿಎ ದಾಳಿ ಬಗ್ಗೆ ಎಸಿಬಿ ವರದಿ ಶಿಫಾರಸು ಮೇರೆಗೆ ಸರ್ಕಾರ ಮುಂದಿನ ಕ್ರಮ ತೆಗೆದುಕೊಳ್ಳಲಿದೆ .ನಮ್ಮ ಸರ್ಕಾರ ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹಿಂದೆಯೇ ಹೇಳಿದ್ದೇನೆ. ಬಿಡಿಎನಲ್ಲಿ ಯಾರನ್ನೂ ರಕ್ಷಿಸುವ ಕೆಲಸ ಮಾಡುವುದಿಲ್ಲ. ಬಿಡಿಎ ಭ್ರಷ್ಟಾಚಾರಗಳ ಬಗ್ಗೆ ವಿಶ್ವನಾಥ್ ತಮಗೆ ಮಾಹಿತಿ ನೀಡಿದ್ದರು.ಯಾವುದೇ ಅಧಿಕಾರಿ ತಪ್ಪಿತಸ್ಥ ಇದ್ದರೂ ಅಂತವರ ವಿರುದ್ಧ ಕ್ರಮ ಖಚಿತ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರಿನ ಮೇಲೆ ನಮಗೆ ವಿಶೇಷ ಕಾಳಜಿ ಇದೆ. ನಾನೂ ಕೂಡಾ ಹಲವು ಕಡೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದೆ. ಮುಂದೆಯೂ ಹೋಗ್ತೇನೆ. ಮಳೆ ಮುಗಿದ ಮೇಲೆ ದುರಸ್ತಿ ಕಾಮಗಾರಿಗಳನ್ನು ನಡೆಸುತ್ತೇವೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


