'ಅಪಾಯದಲ್ಲಿಲ್ಲದ' ರಾಷ್ಟ್ರಗಳಿಂದ ಬೆಂಗಳೂರಿಗೆ ಬರುವ ಶೇ. 2 ರಷ್ಟು ಪ್ರಯಾಣಿಕರಿಗೆ ಕೋವಿಡ್ ರ‍್ಯಾಂಡಮ್ ಟೆಸ್ಟ್
ಓಮಿಕ್ರಾನ್ ವೇರಿಯಂಟ್ ಭಯದ ನಂತರ ಹೊಸ ನಿಯಮಗಳಿಗೆ ಅನುಗುಣವಾಗಿ, 'ಅಪಾಯದಲ್ಲಿಲ್ಲದ' ದೇಶಗಳಿಂದ ಬೆಂಗಳೂರಿಗೆ ಬರುವ ಶೇಕಡಾ ಎರಡರಷ್ಟು ಪ್ರಯಾಣಿಕರು ಕೋವಿಡ್ ರ‍್ಯಾಂಡಮ್ ಟೆಸ್ಟ್ ಗೆ ಒಳಗಾಗುತ್ತಿದ್ದಾರೆ...

ಬೆಂಗಳೂರು: ಓಮಿಕ್ರಾನ್ ವೇರಿಯಂಟ್ ಭಯದ ನಂತರ ಹೊಸ ನಿಯಮಗಳಿಗೆ ಅನುಗುಣವಾಗಿ, 'ಅಪಾಯದಲ್ಲಿಲ್ಲದ' ದೇಶಗಳಿಂದ ಬೆಂಗಳೂರಿಗೆ ಬರುವ ಶೇಕಡಾ ಎರಡರಷ್ಟು ಪ್ರಯಾಣಿಕರು ಕೋವಿಡ್ ರ‍್ಯಾಂಡಮ್ ಟೆಸ್ಟ್ ಗೆ ಒಳಗಾಗುತ್ತಿದ್ದಾರೆ ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ) ಶನಿವಾರ ತಿಳಿಸಿದೆ.
ವಿಮಾನ ನಿಲ್ದಾಣವನ್ನು ನಿರ್ವಹಿಸುವ ಬಿಐಎಎಲ್, "ಅಂತರರಾಷ್ಟ್ರೀಯ ಪ್ರಯಾಣದ ಮಾರ್ಗಸೂಚಿಗಳ ಪ್ರಕಾರ, 'ಅಪಾಯಕಾರಿ' ಪಟ್ಟಿಯಲ್ಲಿಲ್ಲದ ದೇಶಗಳಿಂದ ಬರುವ ಶೇ. 2 ರಷ್ಟು ಪ್ರಯಾಣಿಕರು ಆಗಮನದ ನಂತರ ವಿಮಾನ ನಿಲ್ದಾಣದಲ್ಲಿ ರ‍್ಯಾಂಡಮ್ ಪರೀಕ್ಷೆಗೆ ಒಳಗಾಗುತ್ತಾರೆ. ಅಂತಹ ಪ್ರಯಾಣಿಕರ ರ‍್ಯಾಂಡಮ್ ಪರೀಕ್ಷೆಯ ವೆಚ್ಚವನ್ನು ಬಿಐಎಎಲ್ ಭರಿಸಲಿದೆ" ಕೆಐಎ ಟ್ವೀಟ್ ಮಾಡಿದೆ.
ಓಮಿಕ್ರಾನ್ ರೂಪಾಂತರಿ ಆತಂಕದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ನವೆಂಬರ್ 30 ರಂದು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಅಪಾಯದಲ್ಲಿರುವ ದೇಶಗಳನ್ನು ಹೊರತುಪಡಿಸಿ ಇತರೆ ದೇಶಗಳ ಪ್ರಯಾಣಿಕರನ್ನು ವಿಮಾನ ನಿಲ್ದಾಣದಿಂದ ಹೊರಹೋಗಲು ಅನುಮತಿಸಲಾಗುವುದು ಮತ್ತು ಆಗಮನದ ನಂತರ 14 ದಿನಗಳವರೆಗೆ ಅವರ ಆರೋಗ್ಯ ಮೇಲೆ ಸ್ವಯಂ ಮೇಲ್ವಿಚಾರಣೆ ಮಾಡಬೇಕು ಎಂದು ಹೇಳಿದೆ.
ಒಂದು ಉಪ-ವಿಭಾಗ ಅಥವಾ ಒಟ್ಟು ವಿಮಾನ ಪ್ರಯಾಣಿಕರಲ್ಲಿ ಶೇ. 2 ರಷ್ಟು ಪ್ರಯಾಣಿಕರು ಆಗಮನದ ನಂತರ ವಿಮಾನ ನಿಲ್ದಾಣದಲ್ಲಿ ರ‍್ಯಾಂಡಮ್ ಪರೀಕ್ಷೆಗೆ ಒಳಗಾಗಬೇಕು ಎಂದು ಸೂಚಿಸಿದೆ.
ಶುಕ್ರವಾರದಿಂದ ಆಗಮಿಸುವ ಪ್ರಯಾಣಿಕರಿಗೆ ಮತ್ತೊಂದು ದೊಡ್ಡ ರಿಲೀಫ್ ಸಿಕ್ಕಿದ್ದು, ಎಕ್ಸ್‌ಪ್ರೆಸ್ ಆರ್‌ಟಿ-ಪಿಸಿಆರ್‌ಗಾಗಿ 50 ಹೊಸ ಅಬಾಟ್ ಐಡಿ ಯಂತ್ರಗಳನ್ನು ವಿಮಾನ ನಿಲ್ದಾಣಕ್ಕೆ ಸ್ಥಾಪಿಸಲಾಗಿದೆ.
ಶೇ 90 ರಷ್ಟು ಪ್ರಯಾಣಿಕರು ಕ್ಷಿಪ್ರ ಅಥವಾ ಎಕ್ಸ್‌ಪ್ರೆಸ್ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಆರಿಸಿಕೊಳ್ಳುತ್ತಾರೆ, ಇದಕ್ಕೆ 3,000 ರೂ. ವೆಚ್ಚವಾಗುತ್ತದೆ ಮತ್ತು ಒಂದು ಗಂಟೆಯೊಳಗೆ ಫಲಿತಾಂಶ ನೀಡುತ್ತದೆ. ನಿಯಮಿತ ಪರೀಕ್ಷೆಗೆ 500 ರೂ. ವೆಚ್ಚವಾಗುತ್ತದೆ ಮತ್ತು ಫಲಿತಾಂಶ ಬರಲು 5 ರಿಂದ 6 ಗಂಟೆ ತೆಗೆದುಕೊಳ್ಳುತ್ತದೆ. ಬಿಐಎಎಲ್ ವಿಮಾನ ನಿಲ್ದಾಣದಲ್ಲಿ ವೈ-ಫೈ ಸಂಪರ್ಕವನ್ನು ಸುಧಾರಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


