ರಾಜ್ಯ

ಬೆಂಗಳೂರು: ಯುವಕ-ಯುವತಿಯ ವಿಡಿಯೋ ಮಾಡಿ ಬೆದರಿಕೆ; ಐವರ ಬಂಧನ

ಮೈಸೂರು ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರದ ಕಹಿ ಘಟನೆ ಮಾಸುವ ಮುನ್ನವೇ ಬೆಂಗಳೂರು ಹೊರವಲಯದಲ್ಲಿ ಏಕಾಂತಕ್ಕೆ ಹೋದವರ ಮೇಲೆ ದೌರ್ಜನ್ಯ ಮಾಡಿ ಬೆದರಿಕೆ ಹಾಕಲಾಗಿತ್ತು.

ಬೆಂಗಳೂರು: ಯುವಕ-ಯುವತಿಯ ವಿಡಿಯೋ ಮಾಡಿ ಬೆದರಿಕೆ; ಐವರ ಬಂಧನ
ಸಂಗ್ರಹ ಚಿತ್ರ
Published On :

ಬೆಂಗಳೂರು: ಮೈಸೂರು ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರದ ಕಹಿ ಘಟನೆ ಮಾಸುವ ಮುನ್ನವೇ ಬೆಂಗಳೂರು ಹೊರವಲಯದಲ್ಲಿ ಏಕಾಂತಕ್ಕೆ ಹೋದವರ ಮೇಲೆ ದೌರ್ಜನ್ಯ ಮಾಡಿ ಬೆದರಿಕೆ ಹಾಕಲಾಗಿತ್ತು.

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂದೇನಹಳ್ಳಿ ಗ್ರಾಮದಸಯ್ಯದ್ ಆಸಿಫ್ ಫಾಷಾ , ನವಾಜ್ ಪಾಷ, ಲಿಯಾಖತ್ ಪಾಷಾ, ಸಲ್ಮಾನ್ ಖಾನ್, ರೂಹಿದ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಇದೇ ತಿಂಗಳ 25 ರಂದು ಬೆಳಗ್ಗೆ 11 ಗಂಟೆಗೆ ಯುವತಿ ತನ್ನ ಸಂಬಂಧಿಯೊಂದಿಗೆ ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹಂದೇನಹಳ್ಳಿ ಗ್ರಾಮದ ಖಾಸಗಿ ಲೇಔಟ್​ಗೆ ತೆರಳಿದ್ದರು.

ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು

ಬಳಿಕ ಕಾರಿನಲ್ಲಿ ಕೂತು ಸ್ನ್ಯಾಕ್ಸ್ ಮತ್ತು ತಂಪು ಪಾನೀಯ ಸೇವಿಸಿದ್ದರು. ಆಗ ಬೆಳಿಗ್ಗೆ 11.30ರ ಹೊತ್ತಿಗೆ ಕೀಚಕರ ಗುಂಪೊಂದು ಅಲ್ಲಿಗೆ ಬಂದಿದ್ದು, ಯುವತಿ-ಯುವಕನನ್ನು ವಿಡಿಯೋ ಮಾಡಿ ಬೆದರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.