ಭೋಗ್ಯಕ್ಕೆ ನೀಡಿದ ಭೂಮಿ ಖರೀದಿಗೆ ಸರ್ಕಾರ ಅವಕಾಶ!
ಹಲವಾರು ವರ್ಷಗಳಿಂದ ವಿವಿಧ ಸಂಸ್ಥೆಗಳಿಗೆ ಭೋಗ್ಯಕ್ಕೆ ನೀಡಿರುವ ಜಾಗವನ್ನು ಮಾರ್ಗಸೂಚಿ ದರದಲ್ಲಿ ಖರೀದಿ ಮಾಡಲು ಆಯಾ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಹೇಳಿದ್ದಾರೆ.

ಬೆಂಗಳೂರು: ಹಲವಾರು ವರ್ಷಗಳಿಂದ ವಿವಿಧ ಸಂಸ್ಥೆಗಳಿಗೆ ಭೋಗ್ಯಕ್ಕೆ ನೀಡಿರುವ ಜಾಗವನ್ನು ಮಾರ್ಗಸೂಚಿ ದರದಲ್ಲಿ ಖರೀದಿ ಮಾಡಲು ಆಯಾ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಬಿಜೆಪಿಯ ಭಾರತಿ ಶೆಟ್ಟಿ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ರಾಜ್ಯದ ಎಲ್ಲಾ ಜಿಲ್ಲೆಗಳು ಹಾಗೂ ಕೊಡಗು ಜಿಲ್ಲೆಯಲ್ಲಿ ಸ್ವಾತಂತ್ರಕ್ಕೂ ಮುನ್ನ ಗುತ್ತಿಗೆ ಆಧಾರದಲ್ಲಿ ನೀಡಲಾಗಿದ್ದ ಜಮೀನಿನ ಗುತ್ತಿಗೆ ಅವದಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅದನ್ನು ಸರ್ಕಾರದ ಜಮೀನನ್ನು ವಶಕ್ಕೆ ಪಡೆದಿದೆ ಎಂದು ಹೇಳಿದರು.
ಗೋಕಾಕ್ ತಾಲೂಕಿನ ಕೊನೂರಾ ಗ್ರಾಮದಲ್ಲಿ 672 ಎಕರೆ, ಗೋಕಾಕ್ ಗ್ರಾಮದಲ್ಲಿ 312 ಎಕರೆ ಜಮೀನನ್ನು 90 ವರ್ಷಗಳ ಅವದಿಗೆ, ಗೋಕಾಕ್ ಪಾಲ್ಸ್ ಮಿಲ್‍ಗೆ ಗುತ್ತಿಗೆ ನೀಡಲಾಗಿತ್ತು. ಅದನ್ನು 50 ವರ್ಷಗಳ ಅವದಿಗೆ ನವೀಕರಣ ಮಾಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಬ್ರಿಟಿಷರ ಅವದಿಯಲ್ಲಿ ಜಮೀನು ಭೋಗ್ಯಕ್ಕೆ ನೀಡಿರುವುದು ಕಂಡು ಬಂದಿಲ್ಲ ಎಂದು ತಿಳಿಸಿದರು.
ಇದನ್ನು ಒಪ್ಪದ ಭಾರತೀಶೆಟ್ಟಿ ಅವರು ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಸರ್ಕಾರ ಜಮೀನನ್ನು ಕ್ರೈಸ್ತ ಮಿಷನರಿಗಳಿಗೆ ನೀಡಲಾಗಿದೆ. ಅದರಲ್ಲಿ ಅವರು ವಾಣಿಜ್ಯಕಟ್ಟಡ ನಿರ್ಮಿಸಿಕೊಂಡು ಲಾಭ ಮಾಡಿಕೊಳ್ಳುತ್ತಿದ್ದಾರೆ. ನಗರದ ಕೇಂದ್ರ ಭಾಗದಲ್ಲಿ ಜಮೀನಿದ್ದರೂ, ಅದನ್ನು ಖಾಸಗಿಯವರಿಗೆ ಗುತ್ತಿಗೆಗೆ ನೀಡಿ ಸರ್ಕಾರ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಸ್ಪಷ್ಟನೆ ನೀಡಿದ ಕಂದಾಯ ಸಚಿವರು, ಸರ್ಕಾರದಿಂದ ಗುತ್ತಿಗೆಗೆ ನೀಡಿದ ಜಮೀನು ಮರಳಿ ಸರ್ಕಾರಕ್ಕೆ ಪಡೆದ ಪ್ರಕರಣಗಳು ಬಹಳ ಕಡಿಮೆ.ಖಾಸಗಿ ಸಂಸ್ಥೆಗಳು ಅವುಗಳನ್ನು ಪದೆ ಪದೇ ನವೀಕರಣ ಮಾಡಿಕೊಳ್ಳುತ್ತಿವೆ. ಸರ್ಕಾರಗಳೂ ನವೀಕರಣ ಮಾಡಿಕೊಡುತ್ತಿವೆ. ನೆಪ ಮಾತ್ರಕ್ಕೆ ಅದು ಸರ್ಕಾರಿ ಭೂಮಿ. ಅದರಿಂದ ಬರುವ ಆದಾಯ ತೀರಾ ಕಡಿಮೆ. ಕಳೆದ ಬಾರಿ ವಿಧೇಯಕವೊಂದನ್ನು ಅಂಗೀಕರಿಸಿದ್ದು, ಭೋಗ್ಯಕ್ಕೆ ನೀಡಿರುವ ಭೂಮಿಯನ್ನು ಪದೆ ಪದೇ ನವೀಕರಣ ಮಾಡುವ ಬದಲಾಗಿ ಮಾರ್ಗಸೂಚಿ ಬೆಲೆಗೆ ಆಯಾಯ ಸಂಸ್ಥೆಗಳಿಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


