ರಾಜ್ಯ

30*40, ಅದಕ್ಕಿಂತಲೂ ದೊಡ್ಡ ಸೈಟಲ್ಲಿ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ!

ಮಳೆ ನೀರು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಪ್ರಸ್ತುತ ಇರುವ ಕಾನೂನನ್ನು ರಾಜ್ಯ ಸರ್ಕಾರ ಮತ್ತಷ್ಟು ಬಿಗಿಗೊಳಿಸಿದ್ದು, ಈ ಕುರಿತ ವಿಧೇಯಕವೊಂದು ಗುರುವಾರ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ.

30*40, ಅದಕ್ಕಿಂತಲೂ ದೊಡ್ಡ ಸೈಟಲ್ಲಿ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ!
ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕೆಲಸಗಾರ
Published On :

ಬೆಂಗಳೂರು: ಮಳೆ ನೀರು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಪ್ರಸ್ತುತ ಇರುವ ಕಾನೂನನ್ನು ರಾಜ್ಯ ಸರ್ಕಾರ ಮತ್ತಷ್ಟು ಬಿಗಿಗೊಳಿಸಿದ್ದು, ಈ ಕುರಿತ ವಿಧೇಯಕವೊಂದು ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. 

ಈ ಸಂಬಂಧ ಸದನದಲ್ಲಿ ನಿನ್ನೆ ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ ವಿದೇಶವನ್ನು ಅಂಗೀಸಲಾಗಿತ್ತು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ವಿಧೇಯಕ ಅಂಗೀಕರಿಸುವಂತೆ ಕೋರಿ ಸದನದ ಒಪ್ಪಿಗೆ ಪಡೆದುಕೊಂಡರು.

ಈಗಾಗಲೇ ನಗರದಲ್ಲಿ ಮಳೆ ನೀರು ಕೊಯ್ಡು ಕಡ್ಡಾಯವಾಗಿದೆ. ಆದರೂ ಬಹಳಷ್ಟು ಮಂದಿ ನಿರ್ಮಿಸಿಕೊಂಡಿಲ್ಲ. ಇದು ಭವಿಷ್ಯದಲ್ಲಿ ನೀರಿನ ಅಭಾವ ಎದುರಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ರಾಜ್ಯ ಸರ್ಕಾರ ರಾಜಧಾನಿ ಬೆಂಗಳೂರಿನಲ್ಲಿ 30*40 ಮತ್ತು ಅದಕ್ಕಿಂತ ಮೇಲ್ಪಟ್ಟ ನಿವೇಶನದಲ್ಲಿ ನಿರ್ಮಿಸಲ್ಪಟ್ಟ ಕಟ್ಟಡದಲ್ಲಿ ಮಳೆ ನೀರು ಕೊಯ್ದು ಕಡ್ಡಾಯವಾಗಿರಬೇಕು, 40*60 ಹಾಗೂ ಅದಕ್ಕಿಂತ ಮೇಲ್ಪಟ್ಟ ನಿವೇಶನದಲ್ಲಿ ನಿರ್ಮಿಸುವ ಕಟ್ಟಡದಲ್ಲಿ ಎರಡು ಪೈಪ್ ಗಳನ್ನು ಕಡ್ಡಾಯಗೊಳಿಸಿದೆ. ಅಲ್ಲದೆ, 40*60 ಮತ್ತು ಅದಕ್ಕಿಂತ ಮೇಲ್ಪಟ್ಟ ನಿವೇಶನದಲ್ಲಿ ನಿರ್ಮಿಸಿುವ ಕಟ್ಟಡದಲ್ಲಿ ಎರಡು ಪೈಪ್ ಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ತಿಳಿಸಿದೆ. 

ಒಂದು ಪೈಪ್ ಸಂಗ್ರಹಣೆ ಮತ್ತು ಮತ್ತೊಂದು ಪೈಪ್ ಬಳಕೆಯ ದೃಷ್ಟಿಯಿಂದಾಗಿದೆ. ಸಂಗ್ರ ಮಾಡುವುದರಿಂದ ಅಂತರ್ಜಲ ವೃದ್ಧಿಗೆ ಸಹಕಾರವಾಲಿದೆ. 

ಇನ್ನು ಕಾವೇರಿ ನೀರು ಅಥವಾ ಅಂತರ್ಜಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು, ಮಳೆ ನೀರು ಒಳಚರಂಡಿಯಲ್ಲಿ ಹರಿದು ಹೋಗುವುದನ್ನು ತಗ್ಗಿಸುವ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ವಿಧೇಯಕವನ್ನು ಅಂಗೀಕರಿಸಲಾಗಿದೆ. ಅಲ್ಲದೆ ನಗರ ಪ್ರವಾಹವನ್ನು ಇಳಿಸುವುದು ಮೇಲ್ಮೈ ಮತ್ತು ಅಂತರ್ಜಲದ ಅಂಚು ರಹಿತ ಮಾಲಿನ್ಯ ಮೂಲವನ್ನು ಕಡಿಮೆಗೊಳಿಸುವುದು. ಅಂತರ್ಜಲದ ಗುಣಮಟ್ಟದ ಕಳಪೆಯಾಗಿದ್ದರೆ ಮಳೆ ನೀರು ಕೊಯ್ಲಿನ ಮೂಲಕ ಹೊಸದಾದ ನೀರಿನ ಮೂಲವನ್ನು ಕಲ್ಪಿಸುವುದು ಮತ್ತು ಮಳೆ ನೀರು ಕೊಯ್ಲಿನ ನೀರು ಉಚಿತವಾಗಿದ್ದು, ತಕ್ಷಣವೇ ಲಭ್ಯವಾಗಲಿದೆ. ಸರಬರಾಜಿನ ವೆಚ್ಚವಿಲ್ಲದಿರುವುದರಿಂದ ಮಳೆನೀರು ಕೊಯ್ಲನ್ನು ಕಡ್ಡಾಯಗೊಳಿಸೋ ಉದ್ದೇಶವನ್ನು ಈ ವಿಧೇಯಕ ಹೊಂದಿದೆ. 

216 ಚದರ ಮೀಟರ್ ಗಳಿಗಿಂತ ಕಡಿಮೆ ಇರದ ಮತ್ತು 1000 ಚದರ ಮೀಟರ್ ಗಿಂತ ಹೆಚ್ಚಲ್ಲದ ನಿವೇಶನ ಪ್ರದೇಶದಲ್ಲಿ ಕಟ್ಟಡವನ್ನು ಹೊಂದಿರುವವರು ಮಳೆ ನೀರು ಕೊಯ್ಡು ಕಡ್ಡಾಯಗೊಳಿಸಬೇಕು. 2021ರ ಪ್ರಾರಂಭಕ್ಕೆ ಮೊದಲು ಮಳೆ ನೀರು ಕೊಯ್ಲು ರಚನೆಯನ್ನು ಕಲ್ಪಿಸದಿದ್ದರೆ ಕೆಲವು ಷರತ್ತುಗಳಿಗೆ ಒಳಪಟ್ಟು ಮಳೆ ನೀರು ಶೇಖರಣೆಗಾಗಿ, ಬಳಕೆಗಾಗಿ ಅಥವಾ ಅಂತರ್ಜಲ ಪುನಃಭರ್ತಿಗಾಗಿ ಮಳೆ ನೀರು ಕೊಯ್ದು ರಚನೆಯನ್ನು ಒದಗಿಸಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.