ರಾಜ್ಯ

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ 10 ವರ್ಷದ ಮಗನ ಕೊಲೆ: ತಾಯಿ-ಪ್ರಿಯಕರ ಸೇರಿ ಮೂವರ ಬಂಧನ

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ 10 ವರ್ಷದ ಬಾಲಕನನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಮತ್ತವನ ಪ್ರಿಯಕರನನ್ನು ಮೈಕೋ ಲೇಔಟ್ ಪೊಲೀಸರು ಬಂದಿಸಿದ್ದಾರೆ.

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ 10 ವರ್ಷದ ಮಗನ ಕೊಲೆ: ತಾಯಿ-ಪ್ರಿಯಕರ ಸೇರಿ ಮೂವರ ಬಂಧನ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ 10 ವರ್ಷದ ಬಾಲಕನನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಮತ್ತವನ ಪ್ರಿಯಕರನನ್ನು ಮೈಕೋ ಲೇಔಟ್ ಪೊಲೀಸರು ಬಂದಿಸಿದ್ದಾರೆ.

ತಾಯಿಯ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದ ಹಿನ್ನೆಲೆಯಲ್ಲಿ ಬಾಲಕನ ಕೊಲೆ ಮಾಡಲಾಗಿತ್ತು.  ಸುನೀಲ್ (31) ರೌಡಿ ಶೀಟರ್ ಆಗಿದ್ದು ಬೋರ್ ವೆಲ್ ಡ್ರಿಲ್ಲಿಂಗ್  ನಲ್ಲಿ ಕೆಲ ಮಾಡುತ್ತಿದ್ದ. ಬಾಲಕನಿಗೆ ಕಿರುಕುಳ ನೀಡಿ ಕೊಂದ ನಂತರ ಕೃಷ್ಣಗಿರಿ ಹೊರವಲಯದ ಪೊದೆಯಲ್ಲಿ ಬಿಸಾಡಿದ್ದನು.

ಬಾಲಕನನ್ನು ಕೊಲೆ ಮಾಡಲು ಸಹಾಯ ಮಾಡಿದ ಆರೋಪದ ಮೇಲೆ ಸುನೀಲ್ ಪ್ರಿಯತಮೆ ಸಿಂಧುವನ್ನು ಪೊಲೀಸರು ಬಂಧಿಸಿದ್ದಾರೆ. ಸಿಂಧು ಮತ್ತು ನಾದಿಯ ಇಬ್ಬರು ತರಕಾರಿ ಮಾರಾಟಗಾರರಾಗಿದ್ದರು, ಸಿಂಧುವಿನ ಪ್ರಿಯಕರ ಸುನೀಲ್ ನಾದಿಯಾ ಜೊತೆ ಸಂಬಂಧ ಹೊಂದಿದ್ದನು. 

ನಾದಿಯಾ ಮನೆಗೆ ಹೋಗುತ್ತಿದ್ದ ಸುನೀಲ್, ಆಕೆಯ ಮಗನನ್ನು ಸ್ನೇಹಿತನಾಗಿಸಿಕೊಳ್ಳಲು ಯತ್ನಿಸುತ್ತಿದ್ದ, ಆದರೆ ನೀವು ಯಾಕೆ ನಮ್ಮ ಮನೆಗೆ ಬರುತ್ತೀರಾ ಎಂದು ನಾದಿಯಾ ಮಗ ಪ್ರಶ್ನಿಸುತ್ತಿದ್ದ, ಇದರಿಂದ ಕುಪಿತಗೊಂಡ ಆತ ಬಾಲಕನಿಗೆ ಕಿರುಕುಳ ನೀಡುತ್ತಿದ್ದ. 3 ವರ್ಷದ ಹಿಂದೆ ನಾದಿಯಾ ಪತಿ ಆಕೆಯಿಂದ ದೂರವಾದ ನಂತರ ಸುನೀಲ್ ಜೊತೆ ಸಂಪರ್ಕ ಹೊಂದಿದ್ದಳು.

ಪದೇ ಪದೇ ಸುನೀಲ್ ಮನೆಗೆ ಬರುವುದನ್ನು ಪ್ರಶ್ನಿಸಿದ್ದ ಬಾಲಕನಿಗೆ ಎಚ್ಚರಿಕೆ ನೀಡಿದ್ದ, ಆದರೆ ಅದನ್ನು ಮುಂದುವರಿಸಿದ ಕಾರಣ ಬಾಲಕನನ್ನು ಕೊಲೆ ಮಾಡಲು ನಿರ್ಧರಿಸಿದ. ನಾದಿಯಾ ಗೆ ಕರೆ ಮಾಡಿದ ಸುನೀಲ್ ಬಾಲಕನನ್ನು ಕೊಲೆ ಮಾಡುವುದಾಗಿ ತಿಳಿಸಿದ, ಇದಕ್ಕೆ ಸುನೀಲ್ ಪ್ರಿಯತಮೆ ಸಿಂಧು ಕೂಡ ಸಹಾಯ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ದಿನ ಕಳೆದಂತೆ ನಾದಿಯಾ ತಾಯಿ ಬಾಲಕನ ಬಗ್ಗೆ ವಿಚಾರಿಸಲು ಆರಂಭಿಸಿದರು, ಇದರಿಂದಾಗಿ ಆಕೆಯನ್ನು ದೂರವಿಡಲು ನಾದಿಯಾ ನಿರ್ಧರಿಸಿದಳು, ಇದರಿಂದ ಸಂಶಯಗೊಂಡ ನಾದಿಯಾ ತಾಯಿ ಪೊಲೀಸರ ಬಳಿ ನಾಪತ್ತೆ ಪ್ರಕರಣ ದಾಖಲಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.