ಕರ್ನಾಟಕದಲ್ಲಿ ಸತತ ಮೂರು ದಿನಗಳಿಂದ ಕೊರೋನಾ ಹೊಸ ಕೇಸು ಸಾವಿರಕ್ಕಿಂತ ಕಡಿಮೆ!
ಸತತ ಮೂರು ದಿನಗಳಿಂದ ಕರ್ನಾಟಕದಲ್ಲಿ ಸಾವಿರಕ್ಕಿಂತ ಕಡಿಮೆ ಕೊರೋನಾ ಹೊಸ ಕೇಸು ವರದಿಯಾಗಿದೆ. ನಿನ್ನೆ ಭಾನುವಾರ ರಾಜ್ಯದಲ್ಲಿ 803 ಹೊಸ ಪ್ರಕರಣಗಳು ವರದಿಯಾಗಿ ಪಾಸಿಟಿವ್ ದರ ಶೇಕಡಾ 6.55 ರಿಂದ ಶೇಕಡಾ 6.53ಕ್ಕೆ ಇಳಿದಿದೆ.

ಬೆಂಗಳೂರು: ಸತತ ಮೂರು ದಿನಗಳಿಂದ ಕರ್ನಾಟಕದಲ್ಲಿ ಸಾವಿರಕ್ಕಿಂತ ಕಡಿಮೆ ಕೊರೋನಾ ಹೊಸ ಕೇಸು ವರದಿಯಾಗಿದೆ. ನಿನ್ನೆ ಭಾನುವಾರ ರಾಜ್ಯದಲ್ಲಿ 803 ಹೊಸ ಪ್ರಕರಣಗಳು ವರದಿಯಾಗಿ ಪಾಸಿಟಿವ್ ದರ ಶೇಕಡಾ 6.55 ರಿಂದ ಶೇಕಡಾ 6.53ಕ್ಕೆ ಇಳಿದಿದೆ. ರಾಜ್ಯದಲ್ಲಿ ಇದುವರೆಗೆ ದಾಖಲಾದ ಒಟ್ಟು ಕೊರೋನಾ ಪ್ರಕರಣಗಳು 29 ಲಕ್ಷದ 61 ಸಾವಿರದ 735.
921 ಮಂದಿ ನಿನ್ನೆ ಬಿಡುಗಡೆ ಹೊಂದಿ ಚೇತರಿಸಿಕೊಂಡವರ ದರ ಶೇಕಡಾ 98.16 ರಿಂದ ಶೇಕಡಾ 98.17ರಷ್ಟಿದೆ. 17 ಸಾವು ಸಂಭವಿಸಿದ್ದು ಒಟ್ಟಾರೆ ಇದುವರೆಗೆ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 37 ಸಾವಿರದ 504 ಆಗಿದೆ. ಮೃತಪಟ್ಟವರ ಪ್ರಮಾಣ ಶೇಕಡಾ 1.26ರಷ್ಟಿದೆ. ಸಕ್ರಿಯ ಪ್ರಕರಣಗಳು 16 ಸಾವಿರದ 672 ರಿಂದ 16 ಸಾವಿರದ 656ಕ್ಕೆ ಇಳಿಕೆಯಾಗಿದೆ.
ಕಳೆದ ಶನಿವಾರ ರಾಜ್ಯದಲ್ಲಿ 801 ಕೇಸು ವರದಿಯಾದರೆ ಶುಕ್ರವಾರ 967 ಪ್ರಕರಣಗಳು ಪತ್ತೆಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


