ರಾಜ್ಯ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಾಮಫಲಕದಿಂದ ಅದಾನಿ ಹೆಸರು ಹಿಂತೆಗೆತ: ಸ್ಥಳೀಯರ ಪ್ರತಿಭಟನೆಗೆ ಸಂದ ಜಯ

ಪ್ರಕರಣ ಸಂಬಂಧ ಆರ್ ಟಿ ಐ ಮಾಹಿತಿ ಪಡೆಯುವ ವೇಳೆ ನಾಮಫಲಕದಲ್ಲಿ ಹೆಸರು ಬದಲಾವಣೆ ಮಾಡಬೇಕಾದ ನಿಯಮವಿಲ್ಲ ಎನ್ನುವುದು ತಿಳಿದುಬಂದಿತ್ತು.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಾಮಫಲಕದಿಂದ ಅದಾನಿ ಹೆಸರು ಹಿಂತೆಗೆತ: ಸ್ಥಳೀಯರ ಪ್ರತಿಭಟನೆಗೆ ಸಂದ ಜಯ
ಸಂಗ್ರಹ ಚಿತ್ರ
Published On :

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಾಮಫಲಕದಲ್ಲಿ ಅದಾನಿ ಏರ್ ಪೋರ್ಟ್ ಎಂದು ಬರೆಯಲಾಗಿತ್ತು. ಅದನ್ನು ಸ್ಥಳೀಯರು ವಿರೋಧಿಸಿದ್ದರು. ಸಾಮಾಜಿಕ ಸಂಘಟನೆಗಳು ಅದರ ವಿರುದ್ಧ ಪ್ರತಿಭಟನೆ ನಡೆಸಿದ್ದವು. 

ಮಂಗಳೂರು ವಿಮಾನ ನಿಲ್ದಾಣದ ಕಾರ್ಯಾಚರಣೆಗಳನ್ನು ಅದಾನಿ ಸಮೂಹ ಸಂಸ್ಥೆ ವಹಿಸಿಕೊಂಡ ನಂತರ ನಾಮಫಲಕದಲ್ಲಿ ಅದಾನಿ ಏರ್ ಪೋರ್ಟ್ ಎಂದು ಬದಲಾಯಿಸಲಾಗಿತ್ತು ಎಂದು ಸಾಮಾಜಿಕ ಹೋರಾಟಗಾರ ದಿಲ್ ರಾಜ್ ಆಳ್ವಾ ಅವರು ಹೇಳಿದ್ದಾರೆ. 

ಅದಾನಿ ಸಮೂಹದ ಕ್ರಮಕ್ಕೆ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ನಂತರ ಪ್ರಕರಣ ಸಂಬಂಧ ಆರ್ ಟಿ ಐ ಮಾಹಿತಿ ಪಡೆಯುವ ವೇಳೆ ನಾಮಫಲಕದಲ್ಲಿ ಹೆಸರು ಬದಲಾವಣೆ ಮಾಡಬೇಕಾದ ನಿಯಮವಿಲ್ಲ ಎನ್ನುವುದು ತಿಳಿದುಬಂದಿತ್ತು. 

ನಂತರ ವಿಮಾನ ನಿಲ್ದಾಣ ಆಡಳಿತ ಮಂಡಳಿ ಮತ್ತು ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರಕ್ಕೆ ನೋಟೀಸ್ ಕಳುಹಿಸಲಾಗಿತ್ತು. ಅದರ ಫಲವಾಗಿ ಇದೀಗ ಅದಾನಿ ಹೆಸರು ಮಂಗಳೂ ಏರ್ ಪೋರ್ಟ್ ನಾಮಫಲಕದಿಂದ ತೆಗೆಯಲಾಗಿದೆ. 

Related Article

ಒಡಿಶಾದಲ್ಲಿ ಹೆದ್ದಾರಿ ನಿರ್ಮಾಣ ಯೋಜನೆಗೆ 1,169 ಕೋಟಿ ರೂ.ಗಳ ಬಿಡ್ಡಿಂಗ್ ಅದಾನಿ ಗ್ರೂಪ್ ಪಾಲು

ಎಲ್ಲರೂ ಜೀವನಕ್ಕಾಗಿ ಹೆಣಗಾಡುತ್ತಿರುವಾಗ ಅದಾನಿಯ ಸಂಪತ್ತು ಶೇ. 50 ರಷ್ಟು ಹೆಚ್ಚಿದ್ದು ಹೇಗೆ?: ರಾಹುಲ್ ಗಾಂಧಿ

2021ರಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ಸಂಪತ್ತು ಗಳಿಸಿದ ಉದ್ಯಮಿ ಗೌತಮ್ ಅದಾನಿ!

ಕೊರೋನಾ ಸಂಕಷ್ಟದಲ್ಲೂ ಬಿಲಿಯನೇರ್ ಗಳ ಪಟ್ಟಿಗೆ ಹೊಸದಾಗಿ 40 ಭಾರತೀಯರು ಸೇರ್ಪಡೆ: ಅಂಬಾನಿ, ಅದಾನಿ ಸಂಪತ್ತು ಏರಿಕೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.