ರಾಜ್ಯ

ಹುಬ್ಬಳ್ಳಿ: ಹೃದಯಾಘಾತದಿಂದ ಹವ್ಯಾಸಿ‌ ಸೈಕ್ಲಿಸ್ಟ್ ಸಾವು

ನಗರದ ಹವ್ಯಾಸಿ‌ ಸೈಕ್ಲಿಸ್ಟ್ ಓರ್ವರು ಸ್ನೇಹಿತರೊಂದಿಗೆ ಸೈಕಲ್ ರೈಡ್ ನಡೆಸುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.ಬಸನಗೌಡ ಶಿವಳ್ಳಿ (35) ಮೃತಪಟ್ಟ ಹವ್ಯಾಸಿ‌ ಸೈಕ್ಲಿಸ್ಟ್.

ಹುಬ್ಬಳ್ಳಿ: ಹೃದಯಾಘಾತದಿಂದ ಹವ್ಯಾಸಿ‌ ಸೈಕ್ಲಿಸ್ಟ್ ಸಾವು
ಸೈಕಲ್ (ಸಂಗ್ರಹ ಚಿತ್ರ)
Published On :

ಹುಬ್ಬಳ್ಳಿ: ನಗರದ ಹವ್ಯಾಸಿ‌ ಸೈಕ್ಲಿಸ್ಟ್ ಓರ್ವರು ಸ್ನೇಹಿತರೊಂದಿಗೆ ಸೈಕಲ್ ರೈಡ್ ನಡೆಸುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಬಸನಗೌಡ ಶಿವಳ್ಳಿ (35) ಮೃತಪಟ್ಟ ಹವ್ಯಾಸಿ‌ ಸೈಕ್ಲಿಸ್ಟ್.

ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಶನಿವಾರ ಒಟ್ಟು 200 ಕಿ.ಮೀ. ಸೈಕಲ್ ಓಡಿಸುವ ಕಾರ್ಯಕ್ರಮ ಏರ್ಪಡಿಸಿತ್ತು. ಈ ಕಾರ್ಯಕ್ರಮದಲ್ಲಿ ಒಟ್ಟು 35 ಸೈಕ್ಲಿಸ್ಟ್ ಗಳು ಭಾಗವಹಿಸಿದ್ದರು.

ಹುಬ್ಬಳ್ಳಿಯಿಂದ ಶಿಗ್ಗಾವಿಗೆ ಹೋಗಿ ವಾಪಸ್ಸಾಗುವುದು, ಹುಬ್ಬಳ್ಳಿಯಿಂದ ಕಿತ್ತೂರಿಗೆ ಹೋಗಿ ಮರಳುವುದು ಗುರಿಯಾಗಿತ್ತು. ಈ ಕುರಿತು ಶಿವಳ್ಳಿ ಅವರ ಸ್ನೇಹಿತರೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಶಿವಳ್ಳಿ ಅವರು ಸೈಕಲ್ ರೈಡ್‌ಗೆ ಹೆಸರು ನೋಂದಾಯಿಸಿರಲಿಲ್ಲ. ಆದರೆ, ಸ್ನೇಹಿತರಿಗೆ ಬೀಳ್ಕೊಡುವ ಸಲುವಾಗಿ ಹುಬ್ಬಳ್ಳಿಯಿಂದ ಸೈಕಲ್ ಹತ್ತಿದ್ದರು ಎಂದರು.

ತಾವು ಕೂಡ ಕೆಲ ಕಿ.ಮೀ. ದೂರ ಬಂದು ವಾಪಸ್ಸಾಗುವುದಾಗಿ ತಿಳಿಸಿದ್ದರು. ಹಣ್ಣುಗಳನ್ನು ತಿಂದು ಕೆಲ ಹೊತ್ತು ಹರಟೆ ಹೊಡೆದರು. ಶಿಗ್ಗಾವಿಯಿಂದ ಮೂರು ಕಿ.ಮೀ. ಮುಂದೆ ಹೋದಾಗ ಅವರು ಏಕಾಏಕೀ ಕುಸಿದು ಬಿದ್ದು‌ ಮೃತಪಟ್ಟರು ನಾವೆಲ್ಲರೂ ಗಾಬರಿಯಾದೇವು ಎಂದು ಘಟನೆಯನ್ನು ವಿವರಿಸಿದರು.‌

ತಕ್ಷಣವೇ ನಮ್ಮ ತಂಡದಲ್ಲಿದ್ದ ವೈದ್ಯರು ಪರೀಕ್ಷೆ ಮಾಡಿದಾಗ ಹೃದಯಾಘಾತದಿಂದ ಮೃತಪಟ್ಟಿರುವುದು ಖಾತ್ರಿಯಾಯಿತು ಎಂದರು. ಮೃತ ಶಿವಳ್ಳಿ ಅವರಿಗೆ ಪತ್ನಿ ಹಾಗೂ ಇಬ್ಬರೂ ಪುತ್ರಿಯರನ್ನು ಅಗಲಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.