ಗುಣಮುಖರಾದ ಕೋವಿಡ್ ಸೋಂಕಿತರು 2ನೇ ಡೋಸ್ ಲಸಿಕೆ ತಪ್ಪಿಸಬಾರದು- ಅಧ್ಯಯನ
ನಾರ್ಥ್ ವೆಸ್ಟ್ ಯೂನಿವರ್ಸಿಟಿ ಸಂಶೋಧಕರು ಮಾಡಿರುವ ಹೊಸ ಅಧ್ಯಯನದಲ್ಲಿ ಕೋವಿಡ್-19 ಲಸಿಕೆ ಯಾವ ರೀತಿ ದೇಹಕ್ಕೆ ಸ್ಪಂದಿಸುತ್ತದೆ ಎಂಬುದರ ಬಗ್ಗೆ ಮೌಲ್ಯಮಾಪನ ಮಾಡಲಾಗಿದೆ

ಬೆಂಗಳೂರು: ನಾರ್ಥ್ ವೆಸ್ಟ್ ಯೂನಿವರ್ಸಿಟಿ ಸಂಶೋಧಕರು ಮಾಡಿರುವ ಹೊಸ ಅಧ್ಯಯನದಲ್ಲಿ ಕೋವಿಡ್-19 ಲಸಿಕೆ ಯಾವ ರೀತಿ ದೇಹಕ್ಕೆ ಸ್ಪಂದಿಸುತ್ತದೆ ಎಂಬುದರ ಬಗ್ಗೆ ಮೌಲ್ಯಮಾಪನ ಮಾಡಲಾಗಿದೆ. ವಿಶೇಷವಾಗಿ ನೈಸರ್ಗಿಕ ರೋಗ ನಿರೋಧಕ ಶಕ್ತಿ ಮತ್ತು ಹೊಸ ರೂಪಾಂತರಗಳನ್ನು ಹೋಲಿಸಲಾಗಿದೆ. ಇತರ ಸಂಗತಿಗಳಲ್ಲಿ, ಲಸಿಕೆ ಡೋಸ್ ಹಾಕಿಸಿಕೊಳ್ಳದಿದ್ದರೆ ಅಥವಾ ನೈಸರ್ಗಿಕ ರೋಗ ನಿರೋಧಕ ಶಕ್ತಿಗಾಗಿ ಕಾಯುವುದರಿಂದ ಹೇಗೆ ಹಿನ್ನಡೆಯಾಗಬಹುದು ಎಂಬುದರ ಮೇಲೆ ಈ ಅಧ್ಯಯನ ಬೆಳಕು ಚೆಲ್ಲುತ್ತದೆ.
ಗ್ರಾಮಾಂತರ ಪ್ರದೇಶದಲ್ಲಿನ ಬಹುತೇಕ ಕೋವಿಡ್ ಸೋಂಕಿತರು ಮೊದಲ ಡೋಸ್ ಪಡೆದುಕೊಂಡು ಎರಡನೇ ಡೋಸ್ ತೆಗೆದುಕೊಳ್ಳುತ್ತಿಲ್ಲ, ಇದು ಒಳ್ಳೆಯ ಆಲೋಚನೆ ಅಲ್ಲ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಇಂತಹ ಹೆಚ್ಚಿನ ಪ್ರಕರಣಗಳನ್ನು ನಾವು ನೋಡಿದ್ದೇವೆ, ಸ್ವಾಭಾವಿಕ ಸೋಂಕಿತ ಮತ್ತು ಲಸಿಕೆ-ಪ್ರೇರಿತ ಪ್ರತಿಜನಕ ಬೆಳವಣಿಗೆ ನಡುವೆ ವ್ಯತ್ಯಾಸವಿದೆ ಎಂದು ಅನೇಕ ಜನರಿಗೆ ತಿಳಿದಿಲ್ಲ. ಲಸಿಕೆ-ಪ್ರೇರಿತವಾದವು ಹೆಚ್ಚಿನ ಇಮ್ಯುನೊಜೆನಿಕ್ ಪ್ರತಿಕ್ರಿಯೆಯನ್ನು ಹೊಂದಿದೆ.
ನಾವು ಖಂಡಿತವಾಗಿಯೂ ಎರಡನೇ ಡೋಸ್ ಅನ್ನು ತಪ್ಪಿಸಿಕೊಳ್ಳಬಾರದು ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಹೇಳಿದ್ದಾರೆ.
ಕುತೂಹಲವೆಂದರೆ, ಕೋವಿಡ್-19 ತಡೆಗೆ ಮತ್ತು ರೋಗಕ್ಕೆ ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವುದು ಸೂಕ್ತವೆಂಬ ತಪ್ಪು ನಂಬಿಕೆ ಅಡಿಯಲ್ಲಿ ಕೆಲವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಾಯುವ್ಯ ವಿಶ್ವವಿದ್ಯಾನಿಲಯದ ಅಧ್ಯಯನದಲ್ಲಿ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಈ ಅಧ್ಯಯನವನ್ನು ಒಪ್ಪುವ ಡಾ. ಮಂಜುನಾಥ್, ಸಾರ್ಸ್ ಕೋವ್-2 ವೈರಸ್ ಸಾಂಕ್ರಾಮಿಕ, ಸ್ವಯಂಚಾಲಿತವಾಗಿ ರೋಗಿಗೆ ಉನ್ನತ ಮಟ್ಟದ ರಕ್ಷಣಾತ್ಮಕ ಪ್ರತಿಕಾಯಗಳನ್ನು ಖಾತರಿಪಡಿಸುವುದಿಲ್ಲ ಎಂದಿದ್ದಾರೆ. ಕೋವಿಡ್ ಸಾಂಕ್ರಾಮಿಕದಿಂದ ಗುಣಮುಖರಾದವರು ಮೊದಲ ಡೋಸ್ ಪಡೆದು ಮೈ ಮರೆಯಬಾರದು, ಖಂಡಿತವಾಗಿ ಎರಡನೇ ಡೋಸ್ ಪಡೆಯಬೇಕು ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ 3.35 ಕೋಟಿ ಜನರು ಮೊದಲ ಡೋಸ್ ಲಸಿಕೆ ಪಡೆದಿದ್ದರೆ ಕೇವಲ 1.11 ಕೋಟಿ ಜನರು ಮಾತ್ರ ಎರಡನೇ ಡೋಸ್ ಪಡೆದಿದ್ದಾರೆ. ಸೋಂಕು ಕಾಣಿಸಿಕೊಂಡ ನಂತರ ಅನೇಕ ಮಂದಿ ಎರಡನೇ ಡೋಸ್ ಪಡೆಯುತ್ತಿಲ್ಲ, ಕೆಲವರಿಗೆ ದಿನಾಂಕವನ್ನೇ ಮರಯುತ್ತಿದ್ದಾರೆ. ಎರಡನೇ ಡೋಸ್ ಪಡೆಯುವಂತೆ ಜನರಿಗೆ ಆಗಾಗ್ಗೆ ಹೇಳುತ್ತಿರುವುದಾಗಿ ಆರೋಗ್ಯಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


