ಕನ್ನಡೇತರರು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಐದು ಭಾಷೆ ಕಲಿಯಬಹುದು
ಭಾಷೆಗಳ ಆಯ್ಕೆಯೊಂದಿಗೆ ಯಾರೇ ಆಗಲಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಐದು ಭಾಷೆಗಳನ್ನು ಕಲಿಯಬಹುದು ಎಂದು ಕುಲಪತಿ ಕೆ.ಆರ್. ವೇಣುಗೋಪಾಲ್ ಹೇಳಿದ್ದಾರೆ.

ಬೆಂಗಳೂರು: ಭಾಷೆಗಳ ಆಯ್ಕೆಯೊಂದಿಗೆ ಯಾರೇ ಆಗಲಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಐದು ಭಾಷೆಗಳನ್ನು ಕಲಿಯಬಹುದು ಎಂದು ಕುಲಪತಿ ಕೆ.ಆರ್. ವೇಣುಗೋಪಾಲ್ ಹೇಳಿದ್ದಾರೆ.
ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಎನ್ ಇ ಪಿ 2020 ವಿಷನ್ ಟು ಆಕ್ಸ್ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಕುಲಪತಿ, ಒಂದನೇ ತರಗತಿಯಿಂದ 12ನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ನಾಲ್ಕು ಸೆಮಿಸ್ಟರ್ ಗಳಲ್ಲಿ ಕಡ್ಡಾಯವಾಗಿ ಕನ್ನಡ ಇರುತ್ತದೆ. ಅಲ್ಲದೇ, ಎರಡು ಸೆಮಿಸ್ಟರ್ ಅಥವಾ ನಾಲ್ಕು ಸೆಮಿಸ್ಟರ್ ಗಳಲ್ಲಿ ಬೇರೆ ಭಾಷೆಯನ್ನು ಕೂಡಾ ಅವರ ಆಯ್ಕೆ ಮಾಡಿಕೊಳ್ಳಬಹುದು ಎಂದರು.
ಕೇವಲ ಎರಡು ಸೆಮಿಸ್ಟರ್ ಗಳಿಗಾಗಿ ದ್ವಿತೀಯ ಭಾಷೆಯಾಗಿ ಅಧ್ಯಯನ ಮಾಡಲು ಆಯ್ಕೆ ಮಾಡಿಕೊಳ್ಳಬಹುದು , ಮೂರು ಹಾಗೂ ನಾಲ್ಕನೇ ಸೆಮಿಸ್ಟರ್ ಗಾಗಿ ತೃತೀಯ ಭಾಷೆಯಾಗಿ ಅವರು ಅಧ್ಯಯನ ಮಾಡಬಹುದು ಎಂದರು.
ಈ ಸಂದರ್ಭದಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ವೇಣುಗೋಪಾಲ್, ಕನ್ನಡಿಗರೇತರರು, ಮೊದಲ ಅಥವಾ ಎರಡನೇ ಸೆಮಿಸ್ಟರ್ ನಲ್ಲಿ ಕನ್ನಡವನ್ನು ಆಯ್ಕೆ ಮಾಡಿಕೊಳ್ಳಬಹುದು. ಪರ್ಯಾಯ ಸೆಮಿಸ್ಟರ್ ನಲ್ಲಿ ಅರಬಿಕ್ ಅಥವಾ ಹಿಂದಿಯಂತಹ ಇತರ ಭಾಷೆ ಆಯ್ಕೆ ಮಾಡಿಕೊಳ್ಳಬಹುದು ಎಂದರು.
ದ್ವಿತೀಯ ವರ್ಷದಲ್ಲಿ ಅವರು ಸಂಪೂರ್ಣವಾಗಿ ಬೇರೆ ಭಾಷೆ ಕಲಿಯುತ್ತಾರೆ. ಇದರಲ್ಲಿ ಮೂರು ಭಾಷೆಗಳ ಎಣಿಕೆಯಾಗುತ್ತದೆ. ಈ ಮಧ್ಯೆ ಮೊದಲ ಎರಡು ಸೆಮಿಸ್ಟರ್ ಗಳಿಗಾಗಿ ಎರಡು ಭಾಷೆಗಳನ್ನು ಮತ್ತು ಮೂರು ಮತ್ತು ನಾಲ್ಕನೆ ಸೆಮಿಸ್ಟರ್ ಗಾಗಿ ಐದನೇ ಭಾಷೆ ಆಯ್ಕೆ ಮಾಡಿಕೊಳ್ಳಬಹುದೆಂದರು.
ಈ ಮಧ್ಯೆ ಅಕ್ಟೋಬರ್ 21 ರಿಂದ ತರಗತಿಗಳು ಆರಂಭವಾಗಿದ್ದರೂ, ಎನ್ ಇಪಿ ಅನುಷ್ಠಾನಕ್ಕೆ ಖಾಸಗಿ ಕಾಲೇಜ್ ಗಳು ಈಗಲೂ ಆತಂಕವಿದೆ. ಅಕ್ಟೋಬರ್ 16 ರಂದು ಸಿಲಬಸ್ ಬಂದಿದ್ದರೂ, ಉತ್ತರ ಸಿಗದ ಅನೇಕ ಪ್ರಶ್ನೆಗಳಿರುವುದಾಗಿ ಖಾಸಗಿ ಕಾಲೇಜು ಉಪನ್ಯಾಸಕರ ಸಂಘ ವಿಶ್ವವಿದ್ಯಾನಿಲಯಕ್ಕೆ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


