ಸಂಪೂರ್ಣ ಆನ್‌ಲೈನ್ ತರಗತಿ ಮುಂದುವರಿಕೆಗೆ ಖಾಸಗಿ ಶಾಲೆಗಳ ಒಲವು
"ನಮಗೆ ಕೈ ತೊಳೆಯಲು ಹೇಳಿದ್ದರಿಂದ ನಾನು ನನ್ನ ಮನೆಯಿಂದ ನೀರಿನ ಬಾಟಲಿಯನ್ನು ತಂದಿದ್ದೇನೆ" ಎಂದು ಬೆಂಗಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯೊಬ್ಬರು ಸೋಮವಾರ ಹೇಳಿದ್ದಾರೆ.

ಬೆಂಗಳೂರು: "ನಮಗೆ ಕೈ ತೊಳೆಯಲು ಹೇಳಿದ್ದರಿಂದ ನಾನು ನನ್ನ ಮನೆಯಿಂದ ನೀರಿನ ಬಾಟಲಿಯನ್ನು ತಂದಿದ್ದೇನೆ" ಎಂದು ಬೆಂಗಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯೊಬ್ಬರು ಸೋಮವಾರ ಹೇಳಿದ್ದಾರೆ.
ರಾಜ್ಯ ಸರ್ಕಾರವು ಆಗಸ್ಟ್ 21 ರಂದು ಹಂತಹಂತವಾಗಿ ಶಾಲೆಗಳನ್ನು ಪುನರಾರಂಭಿಸಿದ್ದು, ಎರಡು ತಿಂಗಳ ನಂತರ ರಾಜ್ಯಾದ್ಯಂತ ಒಂದರಿಂದ ಐದನೇ ತರಗತಿಗಳಿಗೆ ಶಾಲೆಯನ್ನು ಆರಂಭಿಸಲಾಗಿದೆ. ಇದರೊಂದಿಗೆ ಒಂದರಿಂದ 12 ತರಗತಿಗಳು ಆಫ್‌ಲೈನ್ ಮೋಡ್‌ನಲ್ಲಿವೆ.
ಶಾಲೆಗಳ ಪುನರಾರಂಭದ ಬಗ್ಗೆ ಪ್ರತಿಕ್ರಿಯಿಸಿದ ದಕ್ಷಿಣ ಕನ್ನಡದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಗುಂಪು ಹರ್ಷೋದ್ಗಾರ ವ್ಯಕ್ತಪಡಿಸಿದೆ. ಶಾಲೆಗಳ ಒಳಗೆ ಮತ್ತು ಹೊರಗೆ, ರಸ್ತೆಗಳಲ್ಲಿ ಮತ್ತು ಬಸ್‌ಗಳಲ್ಲಿ ವಿದ್ಯಾರ್ಥಿಗಳು ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಸಾಮಾನ್ಯವಾಗಿತ್ತು. ಆದರೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಅವರು ಮಾತ್ರ ಯಾವುದೇ ಕೋವಿಡ್ ನಿಯಮಗಳ ಉಲ್ಲಂಘನೆಯಾಗಿಲ್ಲ ಎಂದಿದ್ದಾರೆ.
ಆದರೆ ಖಾಸಗಿ ಶಾಲೆಗಳು ಮಾತ್ರ ಈ ವಿಚಾರದಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದು, ಕೆಲವು ಖಾಸಗಿ ಶಾಲೆಗಳು ಕಿರಿಯ ವಿದ್ಯಾರ್ಥಿಗಳಿಗೆ ಆಫ್‌ಲೈನ್ ತರಗತಿಗಳನ್ನು ಮುಂದೂಡಲು ನಿರ್ಧರಿಸಿದ್ದರೆ, ಇತರರು ತರಗತಿಗಳನ್ನು ಆರಂಭಿಸಿದ್ದಾರೆ.
ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ಹಲವಾರು ಶಾಲೆಗಳು ಆಫ್ ಲೈನ್ ತರಗತಿ ಆರಂಭಿಸಿವೆ. ಆದರೆ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಒಂದು ಸವಾಲಾಗಿದೆ ಎಂದು ಅವರು ಒಪ್ಪಿಕೊಂಡರು. ಎರಡನೆಯದು ಕೆಲವು ನಿರ್ಬಂಧಗಳು ಮತ್ತು ಮೂಲಸೌಕರ್ಯಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದಿದ್ದಾರೆ.
ಹೆಚ್ಚಿನ ಖಾಸಗಿ ಶಾಲೆಗಳು ಸಂಪೂರ್ಣವಾಗಿ ಆನ್‌ಲೈನ್ ಮೋಡ್‌ಗೆ ಹಿಂತಿರುಗಲು ಯೋಚಿಸುತ್ತಿವೆ ಮತ್ತು ಪೋಷಕರು ಸಹ ಆನ್ ಲೈನ್ ಗೆ ಒತ್ತಾಯಿಸುತ್ತಿದ್ದಾರೆ. ಸೀಮಿತ ಸಂಖ್ಯೆಯ ಶಿಕ್ಷಕರನ್ನು ಪರಿಗಣಿಸಿ ಆಫ್ ಲೈನ್ ತರಗತಿ ಆರಂಭಿಸಿರುವುದು ಅಪ್ರಾಯೋಗಿಕ ಎಂದು ಸ್ವತಂತ್ರ ಸಿಬಿಎಸ್ ಇ ಶಾಲೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಲಿ ಖಾನ್ ಅವರು ಹೇಳಿದ್ದಾರೆ.
"ಖಾಸಗಿ ಶಾಲೆಗಳಲ್ಲಿ ಕೇವಲ ಶೇ. 20 ರಷ್ಟು ವಿದ್ಯಾರ್ಥಿಗಳು ಆಫ್‌ಲೈನ್ ತರಗತಿಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಆಫ್ ಲೈನ್ ಗೆ ಕನಿಷ್ಠ ಶೇ. 75 ರಷ್ಟು ಹಾಜರಾತಿ ಇಲ್ಲದಿದ್ದರೆ, ಶಾಲೆಗಳು ಆನ್‌ಲೈನ್ ತರಗತಿಗಳೊಂದಿಗೆ ಮುಂದುವರಿಯಬಹುದು" ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


