ಬೆಂಗಳೂರು: ಬಿಟ್ಟುಬಿಡುವಂತೆ ಕಣ್ಣೀರು ಹಾಕಿದರೂ ಬಿಡದೆ ಪುಂಡರಿಂದ ಬಾಲಕರಿಗೆ ಚಿತ್ರಹಿಂಸೆ!
ಸಿಲಿಕಾನ್ ಸಿಟಿಯಲ್ಲಿ ಮದ್ಯಪಾನ ಮಾಡಿದ ಪುಂಡರು ಬಾಲಕರಿಗೆ ತೀವ್ರ ಹಿಂಸೆ ನೀಡಿದ ದಾರುಣ ಘಟನೆ ನಡೆದಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮದ್ಯಪಾನ ಮಾಡಿದ ಪುಂಡರು ಬಾಲಕರಿಗೆ ತೀವ್ರ ಹಿಂಸೆ ನೀಡಿದ ದಾರುಣ ಘಟನೆ ನಡೆದಿದೆ.
ನಗರದ ಬಿ.ನಾರಾಯಣಪುರದಲ್ಲಿ ದುರ್ಘಟನೆ ನಡೆದಿದೆ. ಇದು ಎರಡು ದಿನದ ಹಿಂದೆ ನಡೆದಿದೆ. ತಡವಾಗಿ ಬೆಳಕಿಗೆ ಬಂದಿದೆ.
ಬಾಲಕರು ಶಾಲಾ ಮೈದಾನಕ್ಕೆ ಆಟವಾಡಲು ಹೋದಾಗ ಈ ಘಟನೆ ನಡೆದಿದೆ. ಅವರನ್ನು ಸುತ್ತುವರಿದ ಯುವಕರ ಗುಂಪು ಒಂದು ತಾಸಿಗೂ ಹೆಚ್ಚು ಸಮಯ ಹಿಂಸೆ ನೀಡಿದ್ದಾರೆ. ಮರಕ್ಕೆ ಕಟ್ಟಿಹಾಕಿ ಬೀಡಿ ಸೇದುವಂತೆ ಒತ್ತಾಯಿಸಿದ್ದಾರೆ. ಮಕ್ಕಳು ಬಿಟ್ಟುಬಿಡುವಂತೆ ಕಣ್ಣೀರು ಹಾಕಿದರೂ ಬಿಡದ ಪುಂಡರು ವಿಕೃತಿ ಮೆರೆದಿದ್ದು ಇದೆಲ್ಲವನ್ನೂ ವಿಡಿಯೋ ಸಹ ಮಾಡಿದ್ದಾರೆ.
ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕೃತ್ಯದ ಬಗ್ಗೆ ಮಕ್ಕಳು ಪೋಷಕರಿಗೆ ತಿಳಿಸಿದ್ದು ನಂತರ ಮಹದೇವಪುರ ಪೊಲೀಸರಿಗೆ ದೂರು ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


