ಅಪಾಯದ ಕೂಪವಾದ ಐಷಾರಾಮಿ ಇಂದಿರಾನಗರದ ರಸ್ತೆಗಳು!
ರಾಜ್ಯ ರಾಜಧಾನಿ ಬೆಂಗಳೂರಿನ ಐಷಾರಾಮಿ ಪ್ರದೇಶಗಳಲ್ಲಿ ಒಂದು ಎಂದೇ ಕರೆಸಿಕೊಳ್ಳುವ ಇಂದಿರಾನಗರದ ೧೦೦ ಅಡಿ ರಸ್ತೆ ಗುಂಡಿಗಳಿಂದನೇ ತುಂಬಿ ಹೋಗಿದ್ದು, ಅವ್ಯವಸ್ಥೆಯ ಆಗರವಾಗಿದೆ.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಐಷಾರಾಮಿ ಪ್ರದೇಶಗಳಲ್ಲಿ ಒಂದು ಎಂದೇ ಕರೆಸಿಕೊಳ್ಳುವ ಇಂದಿರಾನಗರದ 100 ಅಡಿ ರಸ್ತೆ ಗುಂಡಿಗಳಿಂದನೇ ತುಂಬಿ ಹೋಗಿದ್ದು, ಅವ್ಯವಸ್ಥೆಯ ಆಗರವಾಗಿದೆ.
ಇಂದಿರಾನಗರ ನೂರು (100) ಅಡಿ ರಸ್ತೆ, ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆ ಜೊತೆ ಹಳೆ ಮದ್ರಾಸ್ ರಸ್ತೆ ಸಂಪರ್ಕಿಸುತ್ತದೆ. ಒಂದು ಕೊನೆಯಲ್ಲಿ ಮಧ್ಯಂತರ ವರ್ತುಲ ರಸ್ತೆ ಫ್ಲೈಓವರ್ ಜಂಕ್ಷನ್ (ದೊಮ್ಮಲೂರು ಜಂಕ್ಷನ್), ಮತ್ತೊಂದು ಕೊನೆಯಲ್ಲಿ ಹಳೆ ವಿಮಾನ ನಿಲ್ದಾಣ ರಸ್ತೆ ಇದೆ. ಕಳೆದ ಕೆಲವು ವರ್ಷಗಳಿಂದ 100 ಅಡಿ ರಸ್ತೆ ಬೆಂಗಳೂರು ವಾಣಿಜ್ಯಿಕವಾಗಿ ಪ್ರಮುಖ ಉನ್ನತ ರಸ್ತೆಗಳ ಆಗಿ ಮಾರ್ಪಟ್ಟಿದೆ.
ರಸ್ತೆಯ ಕೆಟ್ಟ ಪರಿಸ್ಥಿತಿ ಬಗ್ಗೆ ಸಾರ್ವಜನಿಕರು ಕೂ ಮಾಡಿದ್ದೂ, ದಿನ ಬೆಳಿಗ್ಗೆ ಈ ರಸ್ತೆಯಲ್ಲಿ ಕಚೇರಿಗೆ ಹೋಗುವುದೆಂದರೆ ಯಮ ಯಾತನೆ ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
'ಐಟಿ ಕಂಪೆನಿಗಳೇ ಸಾಲು ಸಾಲು ಚಕ್ಕಳ ಮಕ್ಕಳ ಹಾಕಿ ಕೂತಂತಿರುವ ಇಂದಿರಾನಗರದ ರೋಡು ಮೈಕೈ ತೂತು ಮಾಡಿಕೊಂಡು ಸೊರಗಿ ಸತ್ತು ಹೋಗಿದೆ.. ಅದರ ಅವಸ್ಥೆ ನೋಡಿದರೆ ಆ ರೋಡಿಗೆ ಜನ್ಮವಿತ್ತವರ ಮುಖ ನೋಡ್ಬೇಕಲ್ಲ ಅನ್ಸತ್ತೆ, ಅದನ್ನ ಏನಾದ್ರು ಮಾಡ್ರಿ ರೀ ಶ್ರೀಮಾನ್ ಬೆಂಗಳೂರನವ್ರೆ! ಪಾಪ ಕೆಂಪೇಗೌಡ್ರು!' ಎಂದು ಸುನಿಲ್ ಎನ್ನುವವರು ಕೂ ಮಾಡಿದ್ದಾರೆ.
'ಇಂದಿರಾ ನಗರದ 100 ಅಡಿ ವರ್ತುಲ ರಸ್ತೆಯಲ್ಲಿ ಸಾಗುವುದು ಜೀವ ಪಣಕ್ಕಿಟ್ಟು ನಡೆಸುವ ಯಾವುದೇ ಸಾಹಸಮಯ ಪ್ರದರ್ಶನ ನೀಡುವ ಸ್ಟಂಟ್ ಗಳಿಗೆ ಹೋಲಿಸಿದರೆ ಅದಕ್ಕಿಂತ ಕಡಿಮೆ ಅನುಭವನ್ನಂತೂ ನೀಡಲಾರದು. ನೀವೂ ಈ ಮಾರ್ಗದಲ್ಲಿ ಸಂಚರಿಸಿದ್ದರೆ ನಿಮ್ಮ ಅನಿಸಿಕೆ ಏನು?' ಎಂದು ನರೇಶ್ ಕೂ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


