ಸಿನಿಮಾ ಹಿಂದಿನ ಕಷ್ಟ ಗೊತ್ತರಲಿಲ್ಲ: ಮಾನಸಿಕರು ನೈತಿಕ ಪೊಲೀಸ್‌ಗಿರಿ ಮಾಡುತ್ತಾರೆ - ಆರಗ ಜ್ಞಾನೇಂದ್ರ
ಬೆಳಗಾವಿಯಲ್ಲಿ ನಡೆದ ನೈತಿಕ ಪೊಲೀಸ್‌ಗಿರಿಯಂತಹ ಘಟನೆಯನ್ನು ಖಂಡಿಸಿರುವ ಗೃಹಸಚಿವ ಅರಗ ಜ್ಞಾನೇಂದ್ರ,ಮಾನಸಿಕ ಅಸ್ವಸ್ಥತೆಯಿರುವವರು ಇಂತಹ ಘಟನೆಗೆ ಕೈ ಹಾಕುತ್ತಾರೆ ಎಂದಿದ್ದಾರೆ.

ಬೆಂಗಳೂರು: ಬೆಳಗಾವಿಯಲ್ಲಿ ನಡೆದ ನೈತಿಕ ಪೊಲೀಸ್‌ಗಿರಿಯಂತಹ ಘಟನೆಯನ್ನು ಖಂಡಿಸಿರುವ ಗೃಹಸಚಿವ ಅರಗ ಜ್ಞಾನೇಂದ್ರ,ಮಾನಸಿಕ ಅಸ್ವಸ್ಥತೆಯಿರುವವರು ಇಂತಹ ಘಟನೆಗೆ ಕೈ ಹಾಕುತ್ತಾರೆ ಎಂದಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ,ಈ ರೀತಿಯ ಘಟನೆಗಳನ್ನು ನಾವು ಸಹಿಸುವುದಿಲ್ಲ.ಬೆಳಗಾವಿ ಘಟನೆಗಳ ಬಗ್ಗೆ ಪೊಲೀಸರು ತನಿಖೆ ಮಾಡ್ತಿದ್ದಾರೆ ಅಲ್ಲದೆ ಒಬ್ಬನನ್ನಿ ಬಂಧಿಸಿದ್ದಾರೆ.ಪೊಲೀಸರು ಈ ವಿಚಾರವಾಗಿ ಕ್ರಮ ಕೈಗೊಳ್ಳುತ್ತಾರೆ.ಯಾವುದೇ ಧರ್ಮದವರಾಗಿದ್ದರೂ ಅವರಿಗೆ ಶಿಕ್ಷೆ ಆಗುತ್ತದೆ.ಕೆಲವರು ಮಾನಸಿಕವಾಗಿ ಆ ರೀತಿ ಇರುತ್ತಾರೆ.ಪೊಲೀಸರು ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಂಡಾಗ ಇಂತಹ ಘಟನೆಗಳು ಕಡಿಮೆ ಆಗುತ್ತವೆ ಎಂದರು.
ಪೊಲೀಸರು ಅನುಮತಿ ನೀಡುವಾಗ ಕಿರಿಕಿರಿ ಮಾಡಬೇಡದೇ ಅನುಮತಿ ನೀಡುವಾಗ ಅಗತ್ಯ ಕ್ರಮಗಳ ಬಗ್ಗೆ ತಿಳಿಸಿ.ಹಣದ ವ್ಯವಹಾರ ಇಲ್ಲಿ ನಡೆಯೋದು ಬೇಡ.ಎಲ್ಲವನ್ನು ನಿಭಾಯಿಸಿಕೊಂಡು ಕೆಲಸ ಮಾಡಬೇಕು ಎಂದು ಪೊಲೀಸರಿಗೆ ಗೃಹಸಚಿವರು ಸಲಹೆ ನೀಡಿದರು.
ಸಿನಿಮಾ ಹಿಂದಿನ ಕಷ್ಟ ಗೊತ್ತಿರಲಿಲ್ಲ
ಬೆಂಗಳೂರು: ತಮಗೆ ಸಿನಿಮಾ ನೋಡಿ ಮನರಂಜನೆ ಖುಷಿಪಟ್ಟಿದ್ದು ಗೊತ್ತೇ ವಿನಃ ಸಿನಿಮಾ ನಿರ್ಮಾಣದ ಹಿಂದಿನ ಕಷ್ಟ ಗೊತ್ತಿರಲಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಪೈರಸಿ ಹಾವಳಿಗೆ ಸಿನಿಮಾ ಉದ್ಯಮ ತತ್ತರಿಸುತ್ತಿದ್ದು,ಪೈರಸಿ ಹಾವಳಿ ತಡೆಗೆ ಗೃಹ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುವುದಾಗಿ ಭರವಸೆ ನೀಡಿದೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಚೇರಿಗೆ ಭೇಟಿ ನೀಡಿ, ಮಂಡಳಿಯ ಪದಾಧಿಕಾರಿಗಳ ಜತೆ, ಕನ್ನಡ ಸಿನೆಮಾ ಇಂಡಸ್ಟ್ರಿ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಬಗ್ಗೆ ಚರ್ಚೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


