ಮಂಗಳೂರು ವಿಚಾರವಾದಿಯಿಂದ ಪತ್ರ: ಕೌನ್ ಬನೇಗಾ ಕರೋಡ್ ಪತಿ ವಿಶೇಷ ಸಂಚಿಕೆ ಹಿಂತೆಗೆದುಕೊಂಡ ಸೋನಿ
ಸೋನಿ ಟಿವಿ ತನ್ನ ಪ್ರಖ್ಯಾತ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ 'ಮಿಡ್ ಬ್ರೈನ್ ಆಕ್ಟಿವೇಶನ್' ವಿಶೇಷ ಸಂಚಿಕೆಯನ್ನು ಹಿಂಪಡೆದುಕೊಂಡಿದೆ.

ಮಂಗಳೂರು: ಸೋನಿ ಟಿವಿ ತನ್ನ ಪ್ರಖ್ಯಾತ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ 'ಮಿಡ್ ಬ್ರೈನ್ ಆಕ್ಟಿವೇಶನ್' ವಿಶೇಷ ಸಂಚಿಕೆಯನ್ನು ಹಿಂಪಡೆದುಕೊಂಡಿದೆ. ಅದಕ್ಕೆ ಕಾರಣವಾಗಿದ್ದು ಮಂಗಳೂರು ಮೂಲದ ನರೇಂದ್ರ ನಾಯಕ್ ಎನ್ನುವುದು ಅಚ್ಚರಿಯ ಸಂಗತಿ.
ಇದನ್ನೂ ಓದಿ: ಪಾಕ್ ಸಿಖ್ ವ್ಯಕ್ತಿಯಿಂದಲೇ ಸಿಖ್ ಧರ್ಮಕ್ಕೆ ಅಪಚಾರ ಭಾರತೀಯ ಪತ್ರಕರ್ತ ದೂರು: ತನಿಖೆಗೆ ಆದೇಶಿಸಿದ ಇಮ್ರಾನ್ ಖಾನ್ ಸರ್ಕಾರ
ಮೆದುಳನ್ನು ವಿಶೇಷ ಅನುಭವಗಳಿಗೆ ಜಾಗೃತಗೊಳಿಸುವ ಅರ್ಥವನ್ನು ನೀಡುವ ಈ ಸಂಚಿಕೆ ಜನರಿಗೆ ತಪ್ಪು ಸಂದೇಶ ರವಾನಿಸುತ್ತದೆ ಎಂದು ಮಂಗಳೂರು ಮೂಲದ ವಿಚಾರವಾದಿ ನರೇಂದ್ರ ನಾಯಕ್ ಅವರು ಕಾರ್ಯಕ್ರಮ ನಿರೂಪಕ ಅಮಿತಾಬ್ ಬಚ್ಚನ್ ಅವರಿಗೆ ಓಪನ್ ಲೆಟರ್ ಬರೆದಿದ್ದರು.
ಅತೀಂದ್ರಿಯ ಶಕ್ತಿ ಕುರಿತಾಗಿ ಪ್ರಚಾರ ನೀಡುವುದರಿಂದ ಕಾಮನ್ ಸೆನ್ಸ್ ಗೆ ಅವಹೇಳನ ಮಾಡಿದಂತಾಗುತ್ತದೆ ಎಂದು ನರೇಂಡ್ರ ನಾಯಕ್ ಪತ್ರದಲ್ಲಿ ಹೇಳಿದ್ದರು. ನರೇಂದ್ರ ನಾಯಕ್ ಅವರು ಅಖಿಲ ಭಾರತ ವಿಚಾರವಾದಿಗಳ ಸಂಘದ ಅಧ್ಯಕ್ಷರಾಗಿದ್ದಾರೆ.
ಹಾಗೊಂದು ವೇಳೆ ಅತೀಂದ್ರಿಯ ಶಕ್ತಿ ನಿಜಕ್ಕೂ ಎಂದಿದಲ್ಲಿ ಅದೊಂದು ಅತ್ಯದ್ಭುತ ಆವಿಷ್ಕಾರವಾಗುತ್ತಿತ್ತು. ಅದಕ್ಕೆ ನೊಬೆಲ್ ಪ್ರಶಸ್ತಿ ಕೊಡುತ್ತಿದ್ದರು ಎಂದು ನಾಯಕ್ ತಿಳಿಸಿದ್ದರು.
ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ಸಂಘಟಕರು ನರೇಂದ್ರ ನಾಯಕ್ ಅವರಿಗೆ ಮೇಲ್ ಮೂಲಕ ತಾವು ಆ ವಿಶೇಷ ಸಂಚಿಕೆಯನ್ನು ಹಿಂಪಡೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


