ಬೆಂಗಳೂರು: ಹೊರಮಾವು ವಾರ್ಡ್ನ ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಭೇಟಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಹೊರಮಾವು ವಾರ್ಡ್ನ ಬಿಡಿಎಸ್ ನಗರದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಹೊರಮಾವು ವಾರ್ಡ್ನ ಬಿಡಿಎಸ್ ನಗರದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಹ ನೀರಿನ ಸಮಸ್ಯೆ ಆಗಿಂದಾಗ್ಗೆ ಆಗುತ್ತಿದೆ. ಸಚಿವ ಬಸವರಾಜ ಬೈರತಿಯವರು ಮಳೆ ನೀರಿನಿಂದಾಗಿರುವ ಸಮಸ್ಯೆಗಳಿಗೆ ಉತ್ತಮ ರೀತಿಯಲ್ಲಿ ಜನರಿಗೆ ಪರಿಹಾರ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಯಲಹಂಕ ಮತ್ತು ಹೆಬ್ಬಾಳ ವ್ಯಾಲಿಯಿಂದ ಮಳೆನೀರು ಕೆ.ಆರ್.ಪುರಂ, ಮಹದೇವಪುರದ ಮೂಲಕ ಹೋಗುತ್ತದೆ. ರೈಲ್ವೆ ಬ್ಲಾಕೇಡ್ ನಿಂದ ಸುತ್ತಮುತ್ತಲಿನ ಬಡಾವಣೆಗಳಿಗೆ ನೀರು ನುಗ್ಗುತ್ತಿದೆ. ಹೆಬ್ಬಾಳ ವ್ಯಾಲಿ ನೀರು 125 ಅಡಿ ಅಗಲ ಇರುವ ಚರಂಡಿಯಿಂದ ಬರುತ್ತಿದೆ. ಅದನ್ನು ಸರಿಯಾಗಿ ನಿರ್ವಹಿಸಲಾಗುತ್ತಿದೆ. ಆದರೆ ರೈಲ್ವೆ ವೆಂಟ್ ಬಹಳ ಚಿಕ್ಕದಿರುವುದರಿಂದ ದೊಡ್ಡ ಪ್ರಮಾಣದಲ್ಲಿ ನೀರು ಹರಿದುಬಂದಾಗ 10-12 ಅಡಿ ನೀರು ಹೊರಗೆ ಹರಿಯುತ್ತಿದೆ. ಅದಕ್ಕಾಗಿ ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳೊಂದಿಗೆ ಇಂದೇ ಮಾತನಾಡಿ , ಇದಕ್ಕೆ ಬೇಕಾದ ಹಣಕಾಸಿನ ವ್ಯವಸ್ಥೆಯನ್ನೂ ಮಾಡಿ ರೈಲ್ವೆ ವೆಂಟ್ ನ್ನು ವಿಸ್ತರಿಸಿ ಸಂಪೂರ್ಣವಾಗಿ ನೀರು ಹೋಗಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಅರ್ಕಾವತಿ ಲೇಔಟ್ ಬಳಿ ಬಿಡಿಎ ವತಿಯಿಂದ ಇನ್ನೊಂದು ರೈಲ್ವೇ ವೆಂಟ್ನನ್ನು ಮಾಡಲಾಗುತ್ತಿದ್ದು, ಬಿಡಿಎ ದವರು ಮಾಡಲು ಸೂಚಿಸಲಾಗಿದೆ. ಅದಕ್ಕೆ ಮುಂದುವರಿದ ಆರ್ ಸಿಸಿ ಲೈನಿಂಗ್ ನ ಚರಂಡಿ ವ್ಯವಸ್ಥೆಯನ್ನೂ ಕಲ್ಕೆರೆಗೆ ಮುಟ್ಟಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು . ನಾಗೇನಹಳ್ಳಿ ಕೆರೆಯಿಂದ ಬರುವ ಮುಖ್ಯ ಡ್ರೈನ್ ನ್ನು ಅಗಲೀಕರಣಗೊಳಿಸಿ 3.5 ಕಿ.ಮೀ ವರೆಗೆ ನಿರ್ಮಿಸಿ ಹೆಬ್ಬಾಳ ವ್ಯಾಲಿಗೆ ಸೇರಿಸುವ ಕಾಮಗಾರಿಯನ್ನು ಸಧ್ಯದಲ್ಲಿಯೇ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


