ಗಾನ ಗಂಧರ್ವ ಎಸ್.ಪಿ ಬಾಲಸುಬ್ರಮಣ್ಯಂ ಗೆ ಮರಣೋತ್ತರ ಪದ್ಮವಿಭೂಷಣ, ಗಾಯಕಿ ಕೆ.ಎಸ್ ಚಿತ್ರಾಗೆ ಪದ್ಮಭೂಷಣ ಪ್ರದಾನ
ಆವರ ಮಾತೃಭಾಷೆ ತೆಲುಗು, ಆದರೆ ಕನ್ನಡ, ತಮಿಳು ಸೇರಿದಂತೆ ಒಟ್ಟು 16 ಭಾಷೆಗಳಲ್ಲಿ ಅವರು ಹಾಡಿದ್ದರು ಎನ್ನುವುದು ಅವರ ಹೆಗ್ಗಳಿಕೆ.

ನವದೆಹಲಿ: 2020 ಸೆಪ್ಟೆಂಬರ್ ನಲ್ಲಿ ನಮ್ಮನ್ನಗಲಿದ ಸುಪ್ರಸಿದ್ಧ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಸರ್ಕಾರ ಅವರಿಗೆ ಗೌರವ ಸಲ್ಲಿಸಿದೆ.
ಇದನ್ನೂ ಓದಿ: ಗಾನ ಗಂಧರ್ವ ಎಸ್ ಪಿಬಿ ಪ್ರಥಮ ಪುಣ್ಯತಿಥಿ: ಗಣ್ಯರು, ಕಲಾವಿದರಿಂದ ಸ್ಮರಣೆ, ಗಾನಗಾರುಡಿಗನಿಗೆ ಭಕ್ತಿಯ ನಮನ
ದಕ್ಷಿಣಭಾರತದ ಹೆಸರಾಂತ ಗಾಯಕಿ ಕೆ.ಎಸ್.ಚಿತ್ರಾ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲಾಗಿದೆ. ಬಾಲಸುಬ್ರಮಣ್ಯಂ ಪುತ್ರ ಎಸ್.ಪಿ.ಚರಣ್ ತಮ್ಮ ತಂದೆಯ ಪರವಾಗಿ ರಾಷ್ಟ್ರಪತಿ ಭವನದಲ್ಲಿ ಹಾಜರಿದ್ದು ಪ್ರಶಸ್ತಿ ಸ್ವೀಕರಿಸಿದರು.
ಎಸ್ ಪಿ ಬಿ ಎಂದೇ ಖ್ಯಾತರಾದ ಎಸ್.ಪಿ. ಬಾಲಸುಬ್ರಮಣ್ಯಂ ಅವರು ಕೊರೊನಾ ಉಲ್ಬಣಗೊಂಡು ಚಿಕಿತ್ಸೆ ಫಲಕಾರಿಯಾಗದೆ ನಿಧನಹೊಂದಿದ್ದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಆವರ ಮಾತೃಭಾಷೆ ತೆಲುಗು, ಆದರೆ ಕನ್ನಡ, ತಮಿಳು ಸೇರಿದಂತೆ ಒಟ್ಟು 16 ಭಾಷೆಗಳಲ್ಲಿ ಅವರು ಹಾಡಿದ್ದರು ಎನ್ನುವುದು ಅವರ ಹೆಗ್ಗಳಿಕೆ.
Related Article
ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬಗೆ ಪದ್ಮಶ್ರೀ, ಪ್ರಶಸ್ತಿ ಗೌರವ ಹೆಚ್ಚಿಸಿದ ಅಕ್ಷರ ಸಂತ
ಪೇಜಾವರ ಮಠದ ಹಿರಿಯ ಶ್ರೀಗಳಿಗೆ ಮರಣೋತ್ತರ ಪದ್ಮವಿಭೂಷಣ ಪ್ರದಾನ
ಚಂದ್ರಶೇಖರ ಕಂಬಾರ, ಡಾ. ಬಿ.ಎಂ.ಹೆಗ್ಡೆಗೆ ಪದ್ಮ ಭೂಷಣ, ಹಾಜಬ್ಬ, ವಿಜಯ್ ಸಂಕೇಶ್ವರ್ಗೆ ಪದ್ಮಶ್ರೀ ಪ್ರಶಸ್ತಿ
ನಟ ಪುನೀತ್ ರಾಜಕುಮಾರ್ ಗೆ ಪದ್ಮಶ್ರೀ ಪ್ರಶಸ್ತಿ ಕೊಡಬೇಕು: ಸಚಿವರ ಒತ್ತಾಯ
ನಟ ಪುನೀತ್ ರಾಜ್ ಕುಮಾರ್'ಗೆ ಕರ್ನಾಟಕ ರತ್ನ, ಪದ್ಮಶ್ರೀ ನೀಡಬೇಕು: ಡಿ.ಕೆ.ಶಿವಕುಮಾರ್
ಪುನೀತ್ ಗೆ ಪದ್ಮಶ್ರೀ ನೀಡಲು ಸರ್ವ ಸಮ್ಮತ ಒಪ್ಪಿಗೆ ಇದೆ: ಕಬಿನಿಗೆ ಬಾಗಿನ ಅರ್ಪಿಸಿದ ಬಳಿಕ ಸಿಎಂ ಹೇಳಿಕೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


