ದೀಪಾವಳಿ ಸಂಭ್ರಮದ ನಡುವೆಯೇ ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ: ಜನತೆಯಲ್ಲಿ ತಲ್ಲಣ
ವಿಜಯಪುರ ಜಿಲ್ಲೆಯಲ್ಲಿ ಶುಕ್ರವಾರ ಬೆಳಗಿನ ಜಾವ ಭೂಕಂಪನದ) ಅನುಭವವಾಗಿದೆ, ಇದರ ಪರಿಣಾಮ ಜನರು ಭಯಭೀತರಾಗಿ ಮನೆಯಿಂದ ಓಡಿ ಬಂದಿದ್ದಾರೆ.

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಶುಕ್ರವಾರ ಬೆಳಗಿನ ಜಾವ ಭೂಕಂಪನದ) ಅನುಭವವಾಗಿದೆ, ಇದರ ಪರಿಣಾಮ ಜನರು ಭಯಭೀತರಾಗಿ ಮನೆಯಿಂದ ಓಡಿ ಬಂದಿದ್ದಾರೆ.
ಇಂದುಬೆಳಗ್ಗೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಲಘಾಣ ಹಾಗೂ ಮಸೂತಿ ಗ್ರಾಮಗಳಲ್ಲಿ ಸರಣಿ ರೂಪದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ತಿಳಿದು ಬಂದಿದೆ.
ಎರಡು ದಿನದಲ್ಲಿ 7 ಬಾರಿ ಭೂಕಂಪನವಾಗಿದೆ. ಇದರಿಂದ ಮಲಘಾಣ ಭಾಗದ ಜನರಿಗೆ ಭೂಕಂಪನ ಕಂಟಕವಾಗಿ ಪರಿಗಣಿಸಿದೆ. ಈ ಭಾಗದಲ್ಲಿ ಪದೇ, ಪದೇ ಭೂಕಂಪ ಸಂಭವಿಸುತ್ತಿರುವುದು ಜನತೆಯಲ್ಲಿ ಒಂದು ರೀತಿ ಭಯ, ತಲ್ಲಣ ಮೂಡಿಸಿದೆ.
ಕಳೆದ ತಿಂಗಳು ಅ. 20ರಂದು ಮಸೂತಿ-ಮಲಘಾಣ ಗ್ರಾಮಕ್ಕೆ ಹೈದರಾಬಾದ್‌ನ ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ ಪರಿಣಿತ ಭೂವಿಜ್ಞಾನಿಗಳ ತಂಡ ಭೇಟಿ ನೀಡಿದ್ದರು.
ಭೂಮಿಯ ಆಳದಲ್ಲಿ ನಡೆಯುವ ಬದಲಾವಣೆ, ಚಲನವಲನಗಳ ಮೇಲೆ ನಿಗಾ ಇಡಲು ತಾತ್ಕಾಲಿಕ ಸಿಸ್ಮೋಮಿಟರ್‌ಅನ್ನು ಅಳಡಿಸಲಾಗಿತ್ತು. ಈ ವಿಶೇಷ ಯಂತ್ರ ಪ್ರತಿ ಕಂಪನಗಳ ಮಾಹಿತಿಯನ್ನ ಸಂಗ್ರಹಿಸಿ ಹೈದರಾಬಾದ್ ಕೇಂದ್ರಕ್ಕೆ ರವಾನಿಸಲಿದೆ ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


