ರಾಜ್ಯ

121 ವರ್ಷಗಳಲ್ಲಿ ಮೊದಲ ಬಾರಿಗೆ ವಿಕ್ಟೋರಿಯಾ ಕಟ್ಟಡಕ್ಕೆ ಬೆಳಕಿನ ಅಲಂಕಾರ!

ನಿರ್ಮಾಣವಾದ ಬರೊಬ್ಬರಿ 121 ವರ್ಷಗಳಲ್ಲಿ ಮೊದಲ ಬಾರಿಗೆ ಸರ್ಕಾರಿ ಸ್ವಾಮ್ಯದ ಐತಿಹಾಸಿಕ ವಿಕ್ಟೋರಿಯಾ ಆಸ್ಪತ್ರೆಯ ಆಡಳಿತ ಕಚೇರಿಗೆ ದೀಪಾವಳಿಯಂದು ಬೆಳಕಿನ ಅಲಂಕಾರ ಮಾಡಲಾಗಿದೆ.

121 ವರ್ಷಗಳಲ್ಲಿ ಮೊದಲ ಬಾರಿಗೆ ವಿಕ್ಟೋರಿಯಾ ಕಟ್ಟಡಕ್ಕೆ ಬೆಳಕಿನ ಅಲಂಕಾರ!
ವಿಕ್ಟೋರಿಯಾ ಕಟ್ಟಡಕ್ಕೆ ಬೆಳಕಿನ ಅಲಂಕಾರ
Published On :

ಬೆಂಗಳೂರು: ನಿರ್ಮಾಣವಾದ ಬರೊಬ್ಬರಿ 121 ವರ್ಷಗಳಲ್ಲಿ ಮೊದಲ ಬಾರಿಗೆ ಸರ್ಕಾರಿ ಸ್ವಾಮ್ಯದ ಐತಿಹಾಸಿಕ ವಿಕ್ಟೋರಿಯಾ ಆಸ್ಪತ್ರೆಯ ಆಡಳಿತ ಕಚೇರಿಗೆ ದೀಪಾವಳಿಯಂದು ಬೆಳಕಿನ ಅಲಂಕಾರ ಮಾಡಲಾಗಿದೆ.

ಹೌದು.. ಬೆಂಗಳೂರಿನ ಅತ್ಯಂತ ಹಳೆಯ ಕಟ್ಟಡಗಳಲ್ಲಿ ವಿಕ್ಟೋರಿಯಾ ಆಸ್ಪತ್ರೆ ಕೂಡ ಒಂದಾಗಿದ್ದು, 1900ರಲ್ಲಿ ಈ ಆಸ್ಪತ್ರೆ ನಿರ್ಮಾಣವಾಗಿತ್ತು. 1901ರಲ್ಲಿ ಈ ಆಸ್ಪತ್ರೆ ಕಾರ್ಯಾರಂಭ ಮಾಡಿತ್ತು. ಮೈಸೂರು ಮಹಾರಾಜ ಶ್ರೀ ಕೃಷ್ಣರಾಜ ಒಡೆಯರ್ 1901 ರಲ್ಲಿ  ಈ ಪ್ರತಿಷ್ಠಿತ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಿದ್ದರು. 

Story image

ಶತಮಾನ ಕಾಲದ ಆಸ್ಪತ್ರೆ
ಬೆಂಗಳೂರಿನಲ್ಲಿ ಕಳಾಸಿಪಾಳ್ಯದಲ್ಲಿರುವ ಈ ಆಸ್ಪತ್ರೆಯು ಸುಮಾರು ಒಂದು ಶತಮಾನ ಕಾಲದ್ದು. ರಾಣಿ ಕೆಂಪನಂಜಮ್ಮಣ್ಣಿಯವರು ರಾಣಿ ವಿಕ್ಟೋರಿಯಾರ ಆಳ್ವಿಕೆಯ 60 ವರ್ಷಗಳು ಪೂರ್ಣಗೊಂಡ ನೆನಪಿಗಾಗಿ ಮೈಸೂರು ರಾಜ್ಯಕ್ಕೆ ಮಹಾರಾಣಿಯ ರಾಜಪ್ರತಿನಿಧಿಯಾಗಿ 22 ಜೂನ್ 1897 ರಂದು ಆಸ್ಪತ್ರೆಯ ಅಡಿಗಲ್ಲನ್ನು ಹಾಕಿದ್ದರು. ನಂತರ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯನ್ನು ಭಾರತದ ಆಗಿನ ವೈಸ್ರಾಯ್ ಲಾರ್ಡ್ ಕರ್ಜನ್ ಅವರು ಔಪಚಾರಿಕವಾಗಿ 8 ನೇ ಡಿಸೆಂಬರ್ 1900 ರಂದು ಉದ್ಘಾಟಿಸಿದರು.

ಅಂದು ಆಸ್ಪತ್ರೆ, ಕೇವಲ 140 ಹಾಸಿಗೆಗಳ ಒಂದು ಸಣ್ಣ ಆರೋಗ್ಯ ಕೇಂದ್ರವಾಗಿ ಪ್ರಾರಂಭವಾಯಿತು. ಆದರೆ ಇಂದು ಅದು ಭಾರತದ ಎರಡನೇ ಅತೀ ದೊಡ್ಡ ಆಸ್ಪತ್ರೆಯಾಗಿದೆ. ಇದೀಗ ಇಲ್ಲಿ ಒಂದು ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯವನ್ನು ಹೊಂದಿದೆ. 

Story image

ಅಂತೆಯೇ ಈ ಆಸ್ಪತ್ರೆಯು ಒಂದು ಬೋಧನಾ ಆಸ್ಪತ್ರೆಯಾಗಿದ್ದು, ಬೆಂಗಳೂರು ಮೆಡಿಕಲ್ ಕಾಲೇಜ್ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದೆ. ಇದು ಪ್ರಧಾನ ಭಾರತೀಯ ವೈದ್ಯಕೀಯ ಕಾಲೇಜುಗಳಲ್ಲಿ ಒಂದು ಎನಿಸಿಕೊಂಡಿದ್ದಲ್ಲದೇ ಸಂಶೋಧನಾ ಸಂಸ್ಥೆಯೂ ಆಗಿದೆ.  ಈಗ ಅದಕ್ಕೆ ಮರುನಾಮಕರಣ ಮಾಡಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಎಂದು ಹೆಸರಿಡಲಾಗಿದೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.