ರಾಜ್ಯ

ನಟ ಪುನೀತ್ ರಾಜ್ ಕುಮಾರ್'ಗೆ ಇಂದು ಹಾಲು-ತುಪ್ಪ: ಬಿಳಿ-ಹಳದಿ ಬಣ್ಣಗಳ ಹೂಗಳಿಂದ ಅಪ್ಪು ಸಮಾಧಿಗೆ ಅಲಂಕಾರ

ಸ್ಯಾಂಡಲ್ ವುಡ್ ನಟ ಪುನೀತ್ ರಾಜ್‍ಕುಮಾರ್ ಸಮಾಧಿಗೆ ಮಂಗಳವಾರ ಹಾಲು-ತುಪ್ಪ ವಿಧಿವಿಧಾನ ಕಾರ್ಯ ನೆರವೇರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸಮಾಧಿಯನ್ನು ಹೂಗಳಿಂದ ಅಲಂಕರಿಸಲಾಗಿದೆ.

ನಟ ಪುನೀತ್ ರಾಜ್ ಕುಮಾರ್'ಗೆ ಇಂದು ಹಾಲು-ತುಪ್ಪ: ಬಿಳಿ-ಹಳದಿ ಬಣ್ಣಗಳ ಹೂಗಳಿಂದ ಅಪ್ಪು ಸಮಾಧಿಗೆ ಅಲಂಕಾರ
ಹಾಲು ತುಪ್ಪ ಕಾರ್ಯ ನೆರವೇರಿಸುತ್ತಿರುವ ಪುನೀತ್ ಕುಟುಂಬಸ್ಥರು
Published On :

ಬೆಂಗಳೂರು: ಸ್ಯಾಂಡಲ್ ವುಡ್ ನಟ ಪುನೀತ್ ರಾಜ್‍ಕುಮಾರ್ ಸಮಾಧಿಗೆ ಮಂಗಳವಾರ ಹಾಲು-ತುಪ್ಪ ವಿಧಿವಿಧಾನ ಕಾರ್ಯ ನೆರವೇರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸಮಾಧಿಯನ್ನು ಹೂಗಳಿಂದ ಅಲಂಕರಿಸಲಾಗಿದೆ.

ಸಮಾಧಿಯನ್ನು ಬಿಳಿ ಮತ್ತು ಹಳದಿ ಬಣ್ಣದ ಹೂಗಳಿಂದ ಸಮಾಧಿಯನ್ನು ಮಂಟಪದ ರೀತಿ ಅಲಂಕಾರ ಮಾಡಲಾಗಿದೆ. ಜೊತೆಗೆ ಅಪ್ಪುವಿಗೆ ಪ್ರಿಯವಾದ ಊಟ, ತಿಂಡಿ, ತಿನಿಸುಗಳನ್ನು ಸಂಬಂಧಿಕರು ಎಡೆ ಇಡುತ್ತಿದ್ದಾರೆ. ಕಬಾಬು , ಬಿರಿಯಾನಿ , ಇಡ್ಲಿ , ಕಾಳು, ಗೊಜ್ಜು , ಮೊಟ್ಟೆ ಬಿರಿಯಾನಿ , ಬಜ್ಜಿ , ಐದಾರು ವೈರಟಿ ಸಿಹಿ ತಿನಿಸು, ಅಪ್ಪುವಿಗೆ ಪ್ರಿಯವಾದ ಮುದ್ದೆ ಹಾಗೂ ನಾಟಿ ಕೋಳಿ ಸಾಂಬಾರ್, ಸುಮಾರು 50 ಕ್ಕೂ ಹೆಚ್ಚು ಬಗೆಯ ತಿನಿಸುಗಳನ್ನು ಎಡೆ ಇಡಲಾಗಿದೆ.

ಸಮಾಧಿಯ ಮುಂದಿನ ನಂದಾದೀಪ ಐದು ದಿನಗಳಿಂದ ಆರದಂತೆ ನೋಡಿಕೊಂಡು ಉರಿಸಲಾಗುತ್ತಿದ್ದು, ಸಮಾಧಿಯ ಮೇಲೆ ಹಣತೆಯಲ್ಲಿ ದೀಪ ಹಚ್ಚಿ ಬಳಿಕ ಬಾಳೆ ಎಲೆಯಲ್ಲಿ ಕುಟುಂಬಸ್ಥರು ಎಡೆ ಇಡುತ್ತಿದ್ದಾರೆ.

ಕಾರ್ಯದಲ್ಲಿ ಸಚಿವ ಗೋಪಾಲಯ್ಯ, ಪಾರ್ವತಮ್ಮ ರಾಜ್ ಕುಮಾರ್ ಸಹೋದರ ಚಿನ್ನೆಗೌಡ, ವಿಜಯ ರಾಘವೇಂದ್ರ ಮತ್ತು ಕುಟುಂಬಸ್ಥರು, ಶಾಸಕ ರಾಜುಗೌಡ, ಗಾಜನೂರಿನಿಂದಲೂ ಆಗಮಿಸಿರುವ ದೊಡ್ಮನೆ ಕುಟುಂಬಸ್ಥರು, ಲಕ್ಷ್ಮೀ , ಪೂರ್ಣಿಮಾ, ಧನ್ಯ , ಧೀರನ್, ಶ್ರೀಮುರುಳಿ, ಸಾರಾ ಗೋವಿಂದು ಸೇರಿದಂತೆ ಹಲವರು ಭಾಗಿಯಾಗಿದ್ದಾರೆಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.