ಕೋವಿಡ್-19: ರಾಜ್ಯದಲ್ಲಿಂದು 44,473 ಸೋಂಕಿತರು ಚೇತರಿಕೆ; 16,604 ಹೊಸ ಪ್ರಕರಣ, 411 ಮಂದಿ ಸಾವು
ರಾಜ್ಯದಲ್ಲಿ ಕೋವಿಡ್-19 ಚೇತರಿಕೆ ಪ್ರಮಾಣದಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇಂದು 44 ಸಾವಿರದ 473 ಸೋಂಕಿತರು ಗುಣಮುಖರಾಗಿ ಆಸ್ರತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 2261590ಕ್ಕೆ ಏರಿಕೆಯಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಚೇತರಿಕೆ ಪ್ರಮಾಣದಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇಂದು 44 ಸಾವಿರದ 473 ಸೋಂಕಿತರು ಗುಣಮುಖರಾಗಿ ಆಸ್ರತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 2261590ಕ್ಕೆ ಏರಿಕೆಯಾಗಿದೆ.
ಹೊಸದಾಗಿ 16,604 ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿನ ಖಚಿತ ಪ್ರಕರಣಗಳ ಒಟ್ಟು ಸಂಖ್ಯೆ 2,604,431 ಆಗಿದೆ. ರಾಜ್ಯದಲ್ಲಿ ಒಟ್ಟು 3,13,730 ಸಕ್ರಿಯ ಪ್ರಕರಣಗಳಿವೆ. ಮರಣ ಪ್ರಮಾಣದಲ್ಲಿ ಇಳಿಕೆ ಕಂಡುಬರುತ್ತಿಲ್ಲ. ಇಂದು ಸಹ 411 ಸೋಂಕಿತರು ಮೃತಪಟ್ಟಿದ್ದಾರೆ. ಸೋಂಕಿನ ಖಚಿತ ಪ್ರಕರಣಗಳ ಶೇಕಡಾವಾರು ಪ್ರಕರಣ ಶೇ.13.57 ರಷ್ಟಿದ್ದರೆ, ಮರಣ ಪ್ರಮಾಣ ಶೇ.2.47 ರಷ್ಟಿದೆ.
ಬೆಂಗಳೂರು ನಗರದಲ್ಲಿ 3992 ಪ್ರಕರಣಗಳು ದೃಢಪಟ್ಟಿದ್ದು, 242 ಮಂದಿ ಸಾವನ್ನಪ್ಪಿದ್ದಾರೆ. ಉಳಿದಂತೆ ಬಾಗಲಕೋಟೆ 194, ಬಳ್ಳಾರಿ 437, ಬೆಳಗಾವಿ 910, ಬೆಂಗಳೂರು ಗ್ರಾಮಾಂತರ 383, ಚಾಮರಾಜನಗರ 317, ಚಿಕ್ಕಬಳ್ಳಾಪುರ 415, ಚಿಕ್ಕಮಗಳೂರು 340, ಚಿತ್ರದುರ್ಗ 731, ದಕ್ಷಿಣ ಕನ್ನಡ 651, ದಾವಣಗೆರೆ 360, ಧಾರವಾಡ 291, ಗದಗ 240,ಹಾಸನ 1162, ಹಾವೇರಿ 134, ಕಲಬುರಗಿ 93,ಕೊಡಗು 193, ಕೋಲಾರ 465, ಕೊಪ್ಪಳ 249, ಮಂಡ್ಯ 753, ಮೈಸೂರು 1171, ರಾಯಚೂರು 192, ರಾಮನಗರ 90, ಶಿವಮೊಗ್ಗ 589, ತುಮಕೂರು 806,ಉಡುಪಿ 519, ಉತ್ತರ ಕನ್ನಡ 641, ವಿಜಯಪುರ 185,ಯಾದಗಿರಿಯಲ್ಲಿ 84 ಪ್ರಕರಣಗಳು ವರದಿಯಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


