ರಾಜ್ಯ

ಮನಃ ಪರಿವರ್ತನಾ ಕೇಂದ್ರದಲ್ಲಿ ಜೂಜಾಡುತ್ತಿದ್ದ 14 ಜನರ ಬಂಧನ

ಮನಃ ಪರಿವರ್ತನಾ ಕೇಂದ್ರದ ಮೇಲೆ ಬ್ಯಾಡರಹಳ್ಳಿ ಪೊಲೀಸರು ದಾಳಿ ಮಾಡಿ ಜೂಜಾಡುತ್ತಿದ್ದ 14 ಜನರನ್ನು ಬಂಧಿಸಿದ್ದಾರೆ.

ಮನಃ ಪರಿವರ್ತನಾ ಕೇಂದ್ರದಲ್ಲಿ ಜೂಜಾಡುತ್ತಿದ್ದ 14 ಜನರ ಬಂಧನ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಮನಃ ಪರಿವರ್ತನಾ ಕೇಂದ್ರದ ಮೇಲೆ ಬ್ಯಾಡರಹಳ್ಳಿ ಪೊಲೀಸರು ದಾಳಿ ಮಾಡಿ ಜೂಜಾಡುತ್ತಿದ್ದ 14 ಜನರನ್ನು ಬಂಧಿಸಿದ್ದಾರೆ.

ಬೆಂಗಳೂರಿನ ತುಂಗಾನಗರದಲ್ಲಿರುವ ಶ್ರೀ ಮಹದೇಶ್ವರ ಡಿ ಅಡಿಕ್ಷನ್ ಸೆಂಟರ್ ಮೇಲೆ ಪೊಲೀಸರು ದಾಳಿ ಮಾಡಿ 28 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ. ಹೊನ್ನಪ್ಪ ಎಂಬಾತನಿಗೆ ಸೇರಿದ ಡಿ ಅಡಿಕ್ಷನ್ ಸೆಂಟರ್​ ಇದಾಗಿದ್ದು, ಅವರ ಸಂಬಂಧಿ ಅಶೋಕ್ ಈ ಸೆಂಟರ್​ನಲ್ಲಿ ಮ್ಯಾನೇಜರ್ ಆಗಿ  ಕಾರ್ನಿರ್ವಹಿಸುತ್ತಿದ್ದರು. ಸದ್ಯ ಅಶೋಕ್ ಮತ್ತು ಹೊನ್ನಪ್ಪರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.  

ಇನ್ನು ಈ ಸಂದರ್ಭದಲ್ಲಿ ಗ್ಯಾಂಬಲಿಂಗ್​ನಲ್ಲಿ ತೊಡಗಿದ್ದ 14 ಮಂದಿ ಪತ್ತೆಯಾಗಿದ್ದು, ಕೆಪಿ ಆ್ಯಕ್ಟ್ ಹಾಗೂ ಎನ್​ಡಿಎಂಎ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.