ದಾವಣಗೆರೆಯ ಈ ಎರಡು ಗ್ರಾಮಸ್ಥರಿಗೆ ಕಾಡುತ್ತಿದೆ ಸಾವಿನ ಭಯ!
ಹರಿಹರ ತಾಲೂಕಿನ ಕದರನಾಯಕನಹಳ್ಳಿ ಮತ್ತು ಮುದಹದಡಿ ಗ್ರಾಮಗಳನ್ನು ಸಾವಿನ ಸೂತಕ ಕಾಡಲಾರಂಭಿಸಿದೆ.

ದಾವಣಗೆರೆ: ಹರಿಹರ ತಾಲೂಕಿನ ಕದರನಾಯಕನಹಳ್ಳಿ ಮತ್ತು ಮುದಹದಡಿ ಗ್ರಾಮಗಳನ್ನು ಸಾವಿನ ಸೂತಕ ಕಾಡಲಾರಂಭಿಸಿದೆ.
ಕದರನಾಯಕನಹಳ್ಳಿ ಒಂದರಲ್ಲೇ ಕಳೆದ 15 ದಿನಗಳಲ್ಲಿ ಸುಮಾರು 22 ಜನರು ಸಾವನ್ನಪ್ಪಿದ್ದರೆ ಮುದಹದಡಿಯಲ್ಲಿ 10 ದಿನಗಳಲ್ಲಿ 13 ಸಾವು ಸಂಭವಿಸಿದೆ.ಗ್ರಾಮಸ್ಥರು ಕೋವಿಡ್ -19 ಭಯದಲ್ಲಿ ಸಿಲುಕಿದ್ದು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮೂಕರಾಗಿದ್ದಾರೆ.
ಬೆಂಗಳೂರು ಮತ್ತು ಇತರ ಹೆಚ್ಚು ಸೋಂಕು ಇರುವ ಜಿಲ್ಲೆಗಳ ಜನರ ಆಗಮನವು ಈ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.
ಕದರನಾಯಕನಹಳ್ಳಿಯಲ್ಲಿ ಇಬ್ಬರು ರು ಕೋವಿಡ್ -19 ನಿಂದ ಸಾವನ್ನಪ್ಪಿದ್ದರೆ, ಉಳಿದ 20 ಜನರು ಹೃದಯ ಸ್ತಂಭನ, ಲೋ ಬಿಪಿ ಮತ್ತು ಇತರ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ.
ಕೆಲವು ಜನರು ಜ್ವರದಿಂದ ಬಳಲುತ್ತಿರುವಾಗ, 110 ಜನರು ಪರೀಕ್ಷೆಗೆ ಒಳಗಾದರು, ಅದರಲ್ಲಿ 19 ಜನರು ಪಾಸಿಟಿವ್ ವರದಿ ಪಡೆದರು. ಅವರೀಗ ಹೋಂ ಐಸೋಲೇಷನ್ ನಲ್ಲಿದ್ದಾರೆ.ಅವರಿಗೆ ಈಗ ಇಡೀ ಹಳ್ಳಿಯನ್ನು ತ್ವರಿತವಾಗಿ ಪರೀಕ್ಷಿಸುವ ಅಗತ್ಯವಿರುತ್ತದೆ ಮತ್ತು ಶೀಘ್ರದಲ್ಲೇ ವರದಿಯನ್ನು ಪಡೆದುಕೊಳ್ಳುವುದರಿಂದ ಅವರ ಭಯ ಕಡಿಮೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


