'ಜನ್ಮನೀಡಿ, ಎದೆ ಹಾಲುಣಿಸಿ, ಕೈತುತ್ತು ನೀಡಿ, ಸೆರಗಿನಿಂದ ಮೈ ಒರೆಸಿದ ನನ್ನವ್ವ ನನ್ನನ್ನು ಅನಾಥವಾಗಿಸಿದಳು'
ಕುಡಚಿ ಶಾಸಕ ಪಿ. ರಾಜೀವ್ ಅವರ ತಾಯಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ಬೆಳಗಾವಿ: ಕುಡಚಿ ಶಾಸಕ ಪಿ. ರಾಜೀವ್ ಅವರ ತಾಯಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
ಕೆಲ ದಿನಗಳ ಹಿಂದೆ ಕೊರೋನಾ ಪಾಸಿಟಿವ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದ ಶಾಸಕ ಪಿ ರಾಜೀವ್ ಅವರ ತಾಯಿ ಕಳೆದ ಒಂದು ವಾರದಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಇಂದು ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ತಾಯಿಯ ಅಗಲಿಕೆಯಿಂದ ಮಾನಸಿಕವಾಗಿ ಕುಗ್ಗಿರುವ ಶಾಸಕ ಪಿ ರಾಜೀವ್ ಅವರು ಸಾಮಾಜಿಕ ಜಾಲತಾಣದಲ್ಲಿ ಭಾವುಕರಾಗಿ ವಿಷಯ ತಿಳಿಸಿದ್ದು, ‘ಜನ್ಮನೀಡಿ, ಎದೆ ಹಾಲುಣಿಸಿ, ಕೈತುತ್ತು ನೀಡಿ, ಸೆರಗಿನಿಂದ ಮೈ ಒರೆಸಿ, ಅಕ್ಕರೆಯಿಂದ ಬದುಕಿನ ಮೌಲ್ಯಗಳನ್ನು ತಿಳಿಸಿ ಬೆಳೆಸಿದ ನನ್ನವ್ವ ಕರೊನಾಗೆ ಬಲಿಯಾಗಿ ಇಂದು ನನ್ನನ್ನು ಅನಾಥವಾಗಿಸಿದಳು. ಆಕೆಯ ಅಗಲಿಕೆ ನನ್ನ ಹೃದಯವನ್ನು ಅಲುಗಾಡಿಸಿದೆ ಎಂದು ಹೇಳಿದ್ದಾರೆ.
ಅಲ್ಲದೇ, ‘ನಾನು, ನನ್ನ ಹೆಂಡತಿ, ಎರಡು ಮಕ್ಕಳು, ಇಬ್ಬರು ಆಪ್ತ ಸಹಾಯಕರು ಕೊರೋನಾದಿಂದ ಚೇತರಿಸಿಕೊಳ್ಳುವಷ್ಟರಲ್ಲಿ ತಾಯಿಯವರು ಸೋಂಕಿಗೆ ಒಳಗಾಗಿದ್ದರಿಂದ ಅವರ ಆರೈಕೆಯಲ್ಲಿ ನಾನೇ ತೊಡಗಿದ್ದೆ, ನನ್ನಕ್ಕ ಹಾಗೂ ಅಕ್ಕನ ಮಗ ಚಿಕಿತ್ಸೆಯನ್ನು ಮನೆಯಲ್ಲಿಯೇ ಪಡೆಯುತ್ತಿರುವುದರಿಂದ ಯಾರಿಗೂ ತಿಳಿಸದೆ ಮಾರ್ಗಸೂಚಿಯನ್ವಯ ಅಂತ್ಯಸಂಸ್ಕಾರವನ್ನು ನೆರವೇರಿಸಿರುತ್ತೇನೆ. ನನ್ನ ಮನೆಯ ವಾತಾವರಣ ಸದ್ಯಕ್ಕೆ ಹೆಚ್ಚು ಸೋಂಕುಪೀಡಿತವಾಗಿರುವುದರಿಂದ ಯಾರೂ ಸಹ ಸಾಂತ್ವನ ಹೇಳುವುದಕ್ಕಾಗಿ ಆಗಮಿಸಬಾರದೆಂದು ವಿನಂತಿಸುತ್ತೇನೆ. ಆದಷ್ಟು ಬೇಗ ನನ್ನ ನನ್ನ ಸಾಮಾಜಿಕ ಕರ್ತವ್ಯಕ್ಕೆ ಹಾಜರಾಗುತ್ತೇನೆಂದು ತಮ್ಮಲ್ಲಿ ಕೋರಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


