ಉತ್ತಮ ಮುಂಗಾರು ನಿರೀಕ್ಷೆ: ರೈತರಲ್ಲಿ ಹೆಚ್ಚಿದ ಭರವಸೆ, ಏಕರೂಪ ಮಳೆ ಸಾಧ್ಯತೆ
ಕೊರೋನಾ ಸಾಂಕ್ರಾಮಿಕ ಮತ್ತು ತೌಕ್ಟೇ ಚಂಡಮಾರುತದ ಹಾನಿಯ ನಡುವೆಯೂ ರಾಜ್ಯದ ರೈತರ ಮೊಗದಲ್ಲಿ ಭರವಸೆ ಮೂಡಿದೆ.

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ಮತ್ತು ತೌಕ್ಟೇ ಚಂಡಮಾರುತದ ಹಾನಿಯ ನಡುವೆಯೂ ರಾಜ್ಯದ ರೈತರ ಮೊಗದಲ್ಲಿ ಭರವಸೆ ಮೂಡಿದೆ.
ಮುಂಗಾರು ಮಳೆ ಬರಲು ಕೇವಲ ಎರಡು ವಾರಗಳು ಬಾಕಿ ಇರುವಾಗ, ಕರ್ನಾಟಕ ಹವಾಮಾನ ಇಲಾಖೆಯ ಪ್ರಕಾರ, ರಾಜ್ಯದ ಕೆಲ ಭಾಗಗಳಲ್ಲಿ ಸಾಮಾನ್ಯ ಮತ್ತು ಇನ್ನುಳಿದ ಭಾಗಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ತಿಳಿಸಿದೆ.
ನೈರುತ್ಯ ಮಾನ್ಸೂನ್ ಜೂನ್ 1 ರೊಳಗೆ ಕೇರಳಕ್ಕೆ ಅಪ್ಪಳಿಸಲಿದೆ ಮತ್ತು ಜೂನ್ ಮೊದಲ ವಾರದಲ್ಲಿ ಕರ್ನಾಟಕಕ್ಕೆ ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ ಈಇ ಬಾರಿ ಕರ್ನಾಟಕದಲ್ಲಿ ಮಾನ್ಸೂನ್ ಉತ್ತಮವಾಗಿರಲಿದೆ ಎಂದು ಜಿಎಸ್ ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ. ಹಿಂದಿನ ವರ್ಷಗಳಿಗಿಂತ ಈ ವರ್ಷ ಮಾನ್ಸೂನ್ ಏಕರೂಪವಾಗಿರಲಿದೆ, ಚಂಡಮಾರುತದ ಮೋಡಗಳು ತೆರವುಗೊಂಡ ನಂತರ, ನೈರುತ್ಯ ಮಾನ್ಸೂನ್ ಮೋಡಗಳು ಪ್ರಾರಂಭವಾಗುತ್ತವೆ ಎಂದು ಕೃಷಿ ತಜ್ಞ ಪ್ರೊ. ಎಂಬಿ ರಾಜೇಗೌಡ ತಿಳಿಸಿದ್ದಾರೆ.
ಈ ಬಾರಿ ಪೂರ್ವ, ಮಾನ್ಸೂನ್ ಮಳೆಯು ಕೊರತೆಯಾಗಿದ್ದು, ಮಳೆಗಾಲದಲ್ಲಿ ಉತ್ತಮ ಮಳೆ ಬೀಳಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದ್ದಾರೆ. ರೈತರು, ಕಬ್ಬು, ಭತ್ತ ಸೇರಿದಂತೆ ಹಲವು ರೀತಿಯ ದೀರ್ಘಾವದಿಯ ಬೆಳೆಗಳನ್ನು ಬೆಳೆಯಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ರಾಗಿ ಮತ್ತು ಭತ್ತದಂತಹ ಬೆಳೆಗಳನ್ನು ಬೆಳೆದು ಹೆಚ್ಚಿನ ಆದಾಯ ಗಳಿಸಲು ರೈತರು 90 ದಿನಗಳಿಗೆ ಬದಲು 120 ದಿನಗಳಿಗೆ ಕಟಾವು ಮಾಡಬಹುದಾಗಿದೆ. ಕೆಲವು ಸ್ಥಳಗಳಲ್ಲಿ ಅತಿ ಹೆಚ್ಚು ಮಳೆ ಬೀಳುವ ಕಾರಣದಿಂದ ಪ್ರವಾಹದ ಭೀತಿ ನಮಗೆ ಎದುರಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಆತಂಕ ವ್ಯಕ್ತ ಪಡಿಸಿದ್ದಾರೆ.
ರೈತರು ಪ್ರವಾಹದಲ್ಲೂ ತಡೆದುಕೊಳ್ಳುವ ಬೆಳೆ ಬೆಳೆಯುವ ವಿಧಾನವನ್ನು ಬದಲಾಯಿಸಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ. ಮಳೆಗಾಲದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


