ಕೋವಿಶೀಲ್ಡ್ ಮೊದಲ ಡೋಸ್ ಪಡೆದವರು 12 ವಾರಗಳವರೆಗೆ ಲಸಿಕೆ ಕೇಂದ್ರಕ್ಕೆ ಬರಬೇಡಿ: ರಾಜ್ಯ ಸರ್ಕಾರ
ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದವರು 12 ವಾರಗಳವರೆಗೆ ಲಸಿಕೆ ಕೇಂದ್ರಕ್ಕೆ ಬಾರದಂತೆ ರಾಜ್ಯ ಸರ್ಕಾರ ಹೇಳಿದೆ,

ಬೆಂಗಳೂರು: ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದವರು 12 ವಾರಗಳವರೆಗೆ ಲಸಿಕೆ ಕೇಂದ್ರಕ್ಕೆ ಬಾರದಂತೆ ರಾಜ್ಯ ಸರ್ಕಾರ ಹೇಳಿದೆ.
ತಜ್ಞ ಗುಂಪು ನೀಡಿರುವ ಸಲಹೆಯನ್ನು ಉಲ್ಲೇಖಿಸಿರುವ ರಾಜ್ಯ ಸರ್ಕಾರದ ಲಸಿಕಾ ಅಭಿಯಾನದ ನಿರ್ದೇಶಕರು, "ಬದಲಾದ ನಿಯಮಗಳ ಪ್ರಕಾರ ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದವರಿಗೆ 12-16 ವಾರಗಳ ಅಂತರದಲ್ಲಿ ಎರಡನೇ ಡೋಸ್ ನೀಡಬಹುದಾಗಿದೆ ಎಂದು ರೋಗನಿರೋಧಕ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್ ಟಿಎಜಿಐ) ಲಸಿಕೆ ಸಂಬಂಧ ರಾಷ್ಟ್ರೀಯ ತಜ್ಞರ ಗುಂಪು (ಎನ್ಇಜಿವಿಎಸಿ) ಶಿಫಾರಸು ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ 6-8 ವಾರಗಳಲ್ಲಿ ಎರಡನೇ ಡೋಸ್ ಲಸಿಕೆ ಪಡೆಯುವ ಹಳೆಯ ನಿಯಮವನ್ನು ಬದಲಾವಣೆ ಮಾಡಲಾಗಿದೆ. ಆದ್ದರಿಂದ 12 ವಾರಕ್ಕಿಂತ ಮುನ್ನವೇ ಲಸಿಕೆ ಕೇಂದ್ರಗಳಿಗೆ ಬರುವ ಅಗತ್ಯವಿಲ್ಲ ಎಂದು ಮನವಿ ಮಾಡಲಾಗಿದೆ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
12 ವಾರಗಳ ಅಂತರದ ನಿಯಮ ಕೋವಿಶೀಲ್ಡ್ ಗೆ ಮಾತ್ರವೇ ಅನ್ವಯಿಸಲಿದ್ದು, ಕೋವ್ಯಾಕ್ಸಿನ್ ಗೆ ಅನ್ವಯವಾಗುವುದಿಲ್ಲವೆಂದು ಸರ್ಕಾರ ಹೇಳಿದೆ. ಲಸಿಕೆ ಕೊರತೆಯ ಹಿನ್ನೆಯಲ್ಲಿ 18-44 ವಯಸ್ಸಿನವರಿಗೆ ಮೊದಲ ಡೊಸ್ ಅಭಿಯಾನವನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ. ಸರ್ಕಾರ ಈಗಾಗಲೇ 3 ಕೋಟಿ ಲಸಿಕೆಗಳಿಗೆ ಆರ್ಡರ್ ನ್ನು ನೀಡಿದ್ದು, ಹಣವನ್ನೂ ಪಾವತಿಸಿದೆ. ಈ ಪೈಕಿ 7 ಲಕ್ಷ ಲಸಿಕೆಗಳು ಮಾತ್ರ ರಾಜ್ಯಕ್ಕೆ ತಲುಪಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


