ಲಾಕ್ ಡೌನ್ ನಿಯಮ ಉಲ್ಲಂಘನೆ: 448 ವಾಹನ ಜಪ್ತಿ; 3.26 ಕೋಟಿ ರೂ. ದಂಡ ಸಂಗ್ರಹ
ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಯಾಗಿದ್ದರೂ ನಿಯಮ ಮೀರಿ ರಸ್ತೆಗಳಿದಿದ್ದ ವಾಹನಗಳನ್ನು ನಗರ ಪೊಲೀಸರು ಗುರುವಾರ ಜಪ್ತಿ ಮಾಡಿದ್ದು, ಅಂತೆಯೇ 3.26 ಕೋಟಿ ರೂ. ದಂಡ ಸಂಗ್ರಹಣೆ ಮಾಡಿದ್ದಾರೆ.

ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಯಾಗಿದ್ದರೂ ನಿಯಮ ಮೀರಿ ರಸ್ತೆಗಳಿದಿದ್ದ ವಾಹನಗಳನ್ನು ನಗರ ಪೊಲೀಸರು ಗುರುವಾರ ಜಪ್ತಿ ಮಾಡಿದ್ದು, ಅಂತೆಯೇ 3.26 ಕೋಟಿ ರೂ. ದಂಡ ಸಂಗ್ರಹಣೆ ಮಾಡಿದ್ದಾರೆ.
ಕಳೆದ 20 ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿ 448 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 429 ದ್ವಿಚಕ್ರ ವಾಹನ, 11 ತ್ರಿಚಕ್ರ ವಾಹನ, 8 ನಾಲ್ಕು ಚಕ್ರದ ವಾಹನ ಸೇರಿ ಒಟ್ಟು 448 ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಅಲ್ಲದೇ, ಈ ವೇಳೆ ಎನ್‌ಡಿಎಂಎ ಕಾಯ್ದೆಯಡಿ 12 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
3.26 ಕೋಟಿ ರೂ. ದಂಡ ಸಂಗ್ರಹ
ಕೊರೊನಾ ಎರಡನೇ ಅಲೆ ನಿಯಂತ್ರಿಸಲು ಜಾರಿಯಾಗಿರುವ ಲಾಕ್ ಡೌನ್ ನಿಯಮ ಉಲ್ಲಂಘಿಸಿದವರಿಂದ ನಗರ ಪೊಲೀಸರು ಭಾರೀ ದಂಡ ವಿಧಿಸುತ್ತಿದ್ದಾರೆ. ನಗರದಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸಿದ ಒಟ್ಟು 8 ವಿಭಾಗದಿಂದ 1,34,923 ಪ್ರಕರಣ ದಾಖಲು ಮಾಡಲಾಗಿದೆ. ಒಟ್ಟು ನಿಯಮ ಉಲ್ಲಂಘಿಸಿದವರಿಗೆ 3.26 ಕೋಟಿ ರೂ. ದಂಡ ವಿಧಿಸಲಾಗಿದೆ.
ಮಾಸ್ಕ್ ಧರಿಸದವರಿಂದ 2,88,73,293 ರೂ ಹಾಗೂ ಅಂತರ ಕಾಯ್ದುಕೊಳ್ಳದವರಿಂದ 37,66,783 ಸೇರಿ ಒಟ್ಟು 3,26,400,77 ದಂಡ ಸಂಗ್ರಹಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಏ.1ರಿಂದ ಮೇ 13 ರವರೆಗೆ ನಗರ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಒಟ್ಟು 3.26 ಕೋಟಿ ದಂಡ ಸಂಗ್ರಹವಾಗಿದೆ. ಇನ್ನು, ನಿಯಮ ಉಲ್ಲಂಘನೆ ಮಾಡಿದ ಹೋಟೆಲ್ 14 , ಅಂಗಡಿಗಳ ಸಂಖ್ಯೆ 18, ಕಾಫಿ ಶಾಪ್ಗಳ ಸಂಖ್ಯೆ 8, ಒಂದು ಮಾಲ್ ಸೇರಿ ಒಟ್ಟು 41 ಶಾಪ್ ಗಳ ವಿರುದ್ಧ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


