ಸಣ್ಣ ಸಣ್ಣ ನೆಪ ಹೇಳಿಕೊಂಡು ರಸ್ತೆಗಿಳಿದರೇ ಕಠಿಣ ಕ್ರಮ: ಕಮಲ್ ಪಂತ್ ಎಚ್ಚರಿಕೆ
ಸಣ್ಣ ಸಣ್ಣ ನೆಪ ಹೇಳಿಕೊಂಡು ರಸ್ತೆಗಿಳಿದರೇ ಕಾನೂನಿನ ಅನ್ವಯ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಶನಿವಾರ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು: ಸಣ್ಣ ಸಣ್ಣ ನೆಪ ಹೇಳಿಕೊಂಡು ರಸ್ತೆಗಿಳಿದರೇ ಕಾನೂನಿನ ಅನ್ವಯ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಶನಿವಾರ ಎಚ್ಚರಿಕೆ ನೀಡಿದ್ದಾರೆ.
ಸೋಮವಾರದಿಂದ ಜಾರಿ ಆಗಲಿರುವ ಪರಿಷ್ಕೃತ ಕ್ರಮಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರದಿಂದ ಲಾಕ್ ಡೌನ್ ಆರಂಭವಾಗುವ ಹಿನ್ನೆಲೆಯಲ್ಲಿ ಇಂದು ಗೂಡ್ಸ್ ವಾಹನಗಳ ಓಡಾಟ ಜಾಸ್ತಿಯಾಗಿತ್ತು. ಅಲ್ಲದೇ, ವ್ಯಾಕ್ಸಿನೇಶನ್ಗಾಗಿಯೇ ಹೆಚ್ಚು ಜನ ಸಂಚರಿಸುತ್ತಿದ್ದಾರೆ. ಆದರೆ, ಬಹುತೇಕರು ಸೂಕ್ತ ಕಾರಣ ಇಲ್ಲದೆ ಹೊರಗೆ ಬಂದಿದ್ದರಿಂದ ಎರಡು ಸಾವಿರಕ್ಕೂ ಹೆಚ್ಚಿನ ವಾಹನ ವಶಕ್ಕೆ ಪಡೆಯಲಾಗಿದೆ. ಇನ್ನು, ನಿಯಮಗಳನ್ನು ಉಲ್ಲಂಘಿಸಿದ್ದ ಹಲವರನ್ನು ಬಂಧಿಸಲಾಗಿದೆ ಎಂದರು.
ನಗರದಲ್ಲಿಂದು ವಿಕೇಂಡ್ ಕರ್ಪ್ಯೂ ಇರುವುದರಿಂದ ಹಳೇ ಗೈಡ್ ಲೈನ್ಸ್ನಲ್ಲಿ ಇಂದು ಹಲವು ವಿಚಾರಗಳನ್ನು ನಿರ್ಬಂಧಿಸಲಾಗಿದೆ. ನಿನ್ನೆಗಿಂತ ಇಂದು, ನಾಳೆ ಜಾಸ್ತಿ ನಿರ್ಬಂಧವಿದ್ದು, ಸೋಮವಾರದಿಂದ ಹೊಸ ಮಾರ್ಗಸೂಚಿ ಜಾರಿಗೆ ಬರಲಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


