ಡೋಂಟ್ ವರಿ: ಕೋವಿಡ್ ಲಸಿಕೆ ತೆಗೆದುಕೊಂಡ 14 ದಿನಗಳ ನಂತರ ರಕ್ತದಾನ ಮಾಡಬಹುದು!
ಬ್ಲಡ್ ಬ್ಯಾಂಕ್ ಮತ್ತು ಅಗತ್ಯವಿರುವವರಿಗೆ ರಕ್ತ ವರ್ಗಾವಣೆ ಅಗತ್ಯ ಇರುವವರಿಗೆ ಇಲ್ಲಿದೆ ಗುಡ್ ನ್ಯೂಸ್, ಕೋವಿಡ್ ಲಸಿಕೆ ತೆಗೆದುಕೊಂಡ ನಂತರ ರಕ್ತದಾನ ಮಾಡುವ ಅವಧಿಯನ್ನು 28 ರಿಂದ 14 ದಿನಗಳಿಗೆ ಇಳಿಸಿ ರಾಷ್ಟ್ರೀಯ ರಕ್ತ ಮಂಡಳಿಯು ಆದೇಶ ಹೊರಡಿಸಿದೆ

ಬೆಂಗಳೂರು: ಬ್ಲಡ್ ಬ್ಯಾಂಕ್ ಮತ್ತು ಅಗತ್ಯವಿರುವವರಿಗೆ ರಕ್ತ ವರ್ಗಾವಣೆ ಅಗತ್ಯ ಇರುವವರಿಗೆ ಇಲ್ಲಿದೆ ಗುಡ್ ನ್ಯೂಸ್, ಕೋವಿಡ್ ಲಸಿಕೆ ತೆಗೆದುಕೊಂಡ ನಂತರ ರಕ್ತದಾನ ಮಾಡುವ ಅವಧಿಯನ್ನು 28 ರಿಂದ 14 ದಿನಗಳಿಗೆ ಇಳಿಸಿ ರಾಷ್ಟ್ರೀಯ ರಕ್ತ ಮಂಡಳಿಯು ಆದೇಶ ಹೊರಡಿಸಿದೆ.
ಈ ಮೊದಲಿನ ಆದೇಶವನ್ನು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿತು. "ಸರ್ಕಾರವು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಲಭ್ಯವಾಗುವಂತೆ ಮಾಡಿರುವುದರಿಂದ ಮತ್ತು ದೇಶದಲ್ಲಿ ಯಾವುದೇ ನೇರ ಲಸಿಕೆ ಲಭ್ಯವಿಲ್ಲದ ಕಾರಣ, ಸಲಹಾ ಪರಿಶೀಲನೆಗಾಗಿ ಡಿಜಿಎಚ್‌ಎಸ್ ಅಧ್ಯಕ್ಷ ಡಾ.ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ತಜ್ಞರ ತಂಡ ರಚಿಸಲಾಗಿದೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ. .
ರಾಷ್ಟ್ರೀಯ ರಕ್ತ ಮಂಡಳಿ ಜೊತೆ ತಜ್ಞರ ತಂಡ ಚರ್ಚೆ ನಡೆಸಿದ ನಂತರ ಎನ್ ಬಿಟಿಸಿ ನಿರ್ದೇಶಕ ಡಾ.ಸುನೀಲ್ ಈ ಆದೇಶಕ್ಕೆ ಸಹಿ ಮಾಡಿದ್ದಾರೆ.
ಕೋವಿಡ್ ಲಸಿಕೆ ಎರಡು ಡೋಸ್ ತೆಗೆದುಕೊಂಡ ನಂತರ 56 ದಿನಗಳ ವರೆಗೆ ರಕ್ತದಾನ ಮಾಡುವಂತಿಲ್ಲ ಎಂದು ಮೂಲ ಆದೇಶದಲ್ಲಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


