ಕೋವಿಡ್-19 ಹಿನ್ನೆಲೆಯಲ್ಲಿ ಆನ್ ಲೈನ್ ಶಿಕ್ಷಣ: ಕರ್ನಾಟಕದ 4 ವಿಶ್ವವಿದ್ಯಾಲಯಗಳಿಗೆ ಯುಜಿಸಿ ಅನುಮತಿ
ಕರ್ನಾಟಕದಲ್ಲಿ 4 ವಿಶ್ವವಿದ್ಯಾಲಯಗಳಿಗೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕೋತ್ತರ ಮತ್ತು ಪದವಿಗಳಿಗೆ ಆನ್ ಲೈನ್ ನಲ್ಲಿ ತರಗತಿ ನಡೆಸಲು ಯುಜಿಸಿ ಅನುಮತಿ ನೀಡಿದೆ.

ಶಿವಮೊಗ್ಗ: ಕರ್ನಾಟಕದಲ್ಲಿ 4 ವಿಶ್ವವಿದ್ಯಾಲಯಗಳಿಗೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕೋತ್ತರ ಮತ್ತು ಪದವಿಗಳಿಗೆ ಆನ್ ಲೈನ್ ನಲ್ಲಿ ತರಗತಿ ನಡೆಸಲು ಯುಜಿಸಿ ಅನುಮತಿ ನೀಡಿದೆ.
ಕುವೆಂಪು ವಿಶ್ವ ವಿದ್ಯಾಲಯ, ಮೈಸೂರು ವಿಶ್ವ ವಿದ್ಯಾಲಯ ಆನ್ ಲೈನ್ ನಲ್ಲಿ ವಿದ್ಯಾರ್ಥಿಗಳಿಗೆ 12 ವಿವಿಧ ಕೋರ್ಸ್ ಗಳನ್ನು ನೀಡಿದರೆ ಜೈನ್ ಮತ್ತು ಯೆಣೆಪೊಯ ವಿಶ್ವ ವಿದ್ಯಾಲಯಗಳು 10 ಕೋರ್ಸ್ ಗಳನ್ನು ಆನ್ ಲೈನ್ ನಲ್ಲಿ ನೀಡಲಿವೆ.
ಈ ಸಂಬಂಧ ಜೂನ್ 11ರಂದು ಪತ್ರ ಬಿಡುಗಡೆ ಮಾಡಿರುವ ಯುಜಿಸಿ, ಯುಜಿಸಿಯ ನಿಯಮದಡಿ ನಾಲ್ಕು ವಿಶ್ವವಿದ್ಯಾಲಯಗಳಿಗೆ ಪೂರ್ಣ ಪ್ರಮಾಣದಲ್ಲಿ ಆನ್ ಲೈನ್ ನಲ್ಲಿ ಶಿಕ್ಷಣ ನೀಡಲು ಅನುಮತಿ ನೀಡಲಾಗುತ್ತಿದೆ ಎಂದಿದೆ.
ಕೋವಿಡ್ -19ನ ಪ್ರಭಾವವು ಶಿಕ್ಷಣ ತಜ್ಞರನ್ನು ಹಲವು ಆಯಾಮಗಳಲ್ಲಿ ಯೋಚಿಸಲು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳೊಂದಿಗೆ ಹೊರಬರಲು ಅವಕಾಶ ನೀಡುತ್ತಿದೆ.ಪ್ರಸ್ತುತ, ಶಿಕ್ಷಣವು ಆನ್‌ಲೈನ್ ಶಿಕ್ಷಣದ ವಿಧಾನವಾಗಿ ಬದಲಾಗುತ್ತಿದೆ. ಈಗ, ಉನ್ನತ ಶಿಕ್ಷಣಕ್ಕಾಗಿ ಹಾತೊರೆಯುವವರ ಮನೆ ಬಾಗಿಲಿಗೆ ಆನ್‌ಲೈನ್ ಕೋರ್ಸ್‌ಗಳನ್ನು ನೀಡಲು ಯುಜಿಸಿ ನಮಗೆ ಅನುಮತಿ ನೀಡಿದೆ. ಆನ್‌ಲೈನ್ ಶಿಕ್ಷಣವನ್ನು ಪ್ರಾರಂಭಿಸಿದ ದೇಶದ 38 ವಿಶ್ವವಿದ್ಯಾಲಯಗಳಲ್ಲಿ ಕುವೆಂಪು ವಿಶ್ವವಿದ್ಯಾಲಯವೂ ಒಂದು ಮತ್ತು ಇದು ನಮಗೆ ಹೆಮ್ಮೆಯ ಕ್ಷಣವಾಗಿದೆ ಎಂದು ವಿಶ್ವ ವಿದ್ಯಾಲಯದ ಉಪ ಕುಲಪತಿ ಬಿ ಪಿ ವೀರಭದ್ರಪ್ಪ ತಿಳಿಸಿದ್ದಾರೆ.
ಈ ಹಿಂದೆ ತಿದ್ದುಪಡಿ ಕೆಎಸ್‌ಒಯುಗೆ ಮಾತ್ರ ರಾಜ್ಯದಲ್ಲಿ ದೂರ ಶಿಕ್ಷಣವನ್ನು ನೀಡಲು ಅನುಮತಿ ನೀಡಿದಾಗ ಕುವೆಂಪು ವಿಶ್ವವಿದ್ಯಾಲಯಕ್ಕೆ ಹಿನ್ನಡೆಯಾಗಿತ್ತು. ಈಗ ಯುಜಿಸಿ ಮುಕ್ತ-ದೂರಶಿಕ್ಷಣ ಮತ್ತು ಆನ್‌ಲೈನ್ ವಿಧಾನಗಳ ಮೂಲಕ ಕೋರ್ಸ್‌ಗಳನ್ನು ನೀಡಲು ವಿಶ್ವವಿದ್ಯಾಲಯಕ್ಕೆ ಅನುಮತಿ ನೀಡಿದೆ ಎಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಎಸ್ ಎಸ್ ಪಾಟೀಲ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


