ಸ್ಪುಟ್ನಿಕ್ ವಿ ಲಸಿಕೆ ಶೀಘ್ರದಲ್ಲೇ ಬೆಂಗಳೂರಿಗೆ
ಕೊರೋನಾ ಸೋಂಕಿನ ವಿರುದ್ಧ ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ ಲಸಿಕೆಯ ಭಾರತದಲ್ಲಿ ನಡೆಯುತ್ತಿರುವ ಟೆಸ್ಟಿಂಗ್ ಅಂತಿಮ ಹಂತದಲ್ಲಿದ್ದು ದೇಶದ ಮಾರ್ಕೆಟ್ಗಳಿಗೆ ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದು ಭಾರತದಲ್ಲಿ ಅದರ ಹಂಚಿಕೆಯನ್ನು ಮಾಡಲಿರುವ ಡಾ. ರೆಡ್ಡೀಸ್ ಲ್ಯಾಬೊರೇಟೊರೀಸ್ ಸಂಸ್ಥೆ ಬುಧವಾರದಂದು ಹೇಳಿದೆ.

ಬೆಂಗಳೂರು: ಕೊರೋನಾ ಸೋಂಕಿನ ವಿರುದ್ಧ ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ ಲಸಿಕೆಯ ಭಾರತದಲ್ಲಿ ನಡೆಯುತ್ತಿರುವ ಟೆಸ್ಟಿಂಗ್ ಅಂತಿಮ ಹಂತದಲ್ಲಿದ್ದು ದೇಶದ ಮಾರ್ಕೆಟ್ಗಳಿಗೆ ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದು ಭಾರತದಲ್ಲಿ ಅದರ ಹಂಚಿಕೆಯನ್ನು ಮಾಡಲಿರುವ ಡಾ. ರೆಡ್ಡೀಸ್ ಲ್ಯಾಬೊರೇಟೊರೀಸ್ ಸಂಸ್ಥೆ ಬುಧವಾರದಂದು ಹೇಳಿದೆ.
ಭಾರತದಲ್ಲಿ ಸ್ಫುಟ್ನಿಕ್ ವಿ ಲಸಿಕೆ ಸೀಮಿತ ಪೈಲಟ್ ಲಾಂಚ್ ಅನ್ನು ಮೇ 14 ರಂದು ಹೈದರಾಬಾದಿನ ಡಾ ರೆಡ್ಡೀಸ್ ಆರಂಭಿಸಿದ್ದು, ಅದರ ಅಂತಿಮ ಹಂತದ ಪರೀಕ್ಷೆಗಳು ಜಾರಿಯಲ್ಲಿದೆ. ಲಸಿಕೆಯನ್ನು ಮಾರುಕಟ್ಟೆಗಳಿಗೆ ಬಿಡುಗಡೆ ಮಾಡಲು ಸಂಸ್ಥೆಯು ಸಿದ್ಧವಾಗುತ್ತಿದೆ ಎಂದು ಡಾ ರೆಡ್ಡೀಸ್ ಲ್ಯಾಬೊರೇಟೊರೀಸ್ ಹೇಳಿಕೆ ಬಿಡುಗಡೆ ಮಾಡಿದೆ.
ಲಸಿಕೆಯ ಸಾಫ್ಟ್ ಲಾಂಚ್ ಭಾಗವಾಗಿ ಅದನ್ನು ಪ್ರಸ್ತುತ 9 ನಗರಗಳಲ್ಲಿ ನೀಡಲಾಗುತ್ತಿದೆ ಮತ್ತು ಬೇರೆ ನಗರಗಳಿಗೂ ವಿಸ್ತರಿಸುವ ಇರಾದೆ ಸಂಸ್ಥೆಗಿದೆ. ವಿಶಾಖಪಟ್ಟಣಂ, ಬೆಂಗಳೂರು. ಮುಂಬೈ, ಕೊಲ್ಕತಾ, ದೆಹಲಿ, ಬಡ್ಡಿ, ಮಿರ್ಯಾಲಗುಡ, ಚೆನೈ, ಮತ್ತು ಕೊಲ್ಲಾಪುರ ನಗರಗಳಲ್ಲಿ ಅದನ್ನು ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಡಿಜಿಟಲ್ ವ್ಯಾಕ್ಸಿನ್ ಡೆಲಿವರಿ ಪ್ಲಾಟ್ಫಾರ್ಮ್ ಕೊವಿನ್ನಲ್ಲಿ ಸ್ಪುಟ್ನಿಕ್ ವಿ ಲಸಿಕೆಗೆ ಇನ್ನೂ ಸ್ಲಾಟ್ಗಳು ದೊರೆತಿಲ್ಲ.
‘ಸದ್ಯಕ್ಕೆ ಸೀಮಿತ ಪೈಲಟ್ ಹಂತದಲ್ಲಿರುವುದರಿಂದ ಸಾರ್ವಜನಿಕರಿಗೆ ಕೊವಿನ್ ಪ್ಲಾಟ್ಫಾರ್ಮ್ನಲ್ಲಿ ಸ್ಪುಟ್ನಿಕ್ ಲಸಿಕೆಗಾಗಿ ನೋಂದಣಿ ಇನ್ನೂ ಪ್ರಾರಂಭವಾಗಿಲ್ಲ. ಲಸಿಕೆಯ ವಾಣಿಜ್ಯ ಲಾಂಚ್ ಸಂದರ್ಭದಲ್ಲಿ ಅದು ಓಪನ್ ಆಗುತ್ತದೆ ಎಂದು ಕಂಪನಿ ಹೇಳಿದೆ.
ಪೈಲಟ್ ಹಂತವು ನಮ್ಮ ಶೈತ್ಯಾಗಾರದ ವ್ಯವಸ್ಥೆಯನ್ನು ಈ ನಗರಗಳಲ್ಲಿ ಟೆಸ್ಟ್ ಮಾಡುವ ಅವಕಾಶವನ್ನು ಕಲ್ಪಿಸಿದೆ, ಸ್ಪುಟ್ನಿಕ್ ಲಸಿಕೆಯನ್ನು -18 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸ್ಟೋರ್ ಮಾಡಬೇಕಾಗುತ್ತದೆ, ಮಾರುಕಟ್ಟೆಗಳಿಗೆ ಬಿಡುಗಡೆ ಮಾಡುವುದಕ್ಕೂ ಮುನ್ನ ಎಲ್ಲಾ ಸಿದ್ಧತೆಗಳನ್ನು ನಾವು ಮಾಡಿಕೊಳ್ಳುತ್ತಿದ್ದೇವೆ ಎಂದು ಕಂಪನಿಯ ಹೇಳಿಕೆ ತಿಳಿಸಿದೆ.
‘ನಮ್ಮೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವ ಆಸ್ಪತ್ರೆಗಳಲ್ಲಿ ಎರಡು ಡೋಸ್ಗಳ ಕಾಂಪೊನೆಂಟ್ಗಳು ಸರಿಯಾದ ಪ್ರಮಾಣದಲ್ಲಿ ಮತ್ತು ಸೂಕ್ತವಾದ ಸಮಯದಲ್ಲಿ ದೊರಕುವುದನ್ನು ಖಾತ್ರಿಪಡಿಸಿಕೊಳ್ಳಲು ಅಗತ್ಯವಿರುವ ಸರಬರಾಜು ಏರ್ಪಾಟುಗಳನ್ನು ಮಾಡಿಕೊಳ್ಳಲಾಗುತ್ತಿದೆ. ಒಮ್ಮೆ ಪ್ಲಾಟ್ ಹಂತ ಕೊನೆಗೊಂಡರೆ ಲಸಿಕೆಯ ಮಾರುಕಟ್ಟೆ ಬಿಡುಗಡೆ ಕುರಿತು ಡಾ ರೆಡ್ಡೀಸ್ ಘೋಷಣೆ ಮಾಡುತ್ತದೆ ಎಂದು ಹೇಳಿಕೆ,
ಕೊವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ನಂತರ ಭಾರತದಲ್ಲಿ ತುರ್ತು ಸ್ಥಿತಿಯಲ್ಲಿ ಬಳಸಲು ಆನುಮತಿ ಪಡೆದಿರುವ ಮೂರನೇ ಲಸಿಕೆ ಸ್ಪುಟ್ನಿಕ್ ವಿ ಆಗಿದೆ.
ರಷ್ಯನ್ ಸಾವರೀನ್ ವೆಲ್ತ್ ಫಂಡ್ (ಆರ್ಡಿಐಎಫ್) ನೆರವಿನಿಂದ ಸ್ಪುಟ್ನಿಕ್ ವಿ ಲಸಿಕೆಯನ್ನು ರಷ್ಯಾದ ಗಮಾಲೆಯಾ ಇನ್ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದ್ದು, ಜಾಗತಿವಾಗಿ ಆದರ ಮಾರ್ಕೆಟಿಂಗ್ ಸಹ ಮಾಡುತ್ತಿದೆ. ಸ್ಪುಟ್ನಿಕ್ ವಿ ಲಸಿಕೆಯು ಎರಡು-ಡೋಸ್ಗಳ ಶಾಟ್ ಆಗಿದ್ದು ಇದು ಸೋಂಕನ್ನು ತಡೆಯುವಲ್ಲಿ ಶೇಕಡಾ 91.6 ರಷ್ಟು ಪರಿಣಾಮಕಾರಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


