ರಾಜ್ಯ

ಹಣಕಾಸಿನ ಬಿಕ್ಕಟ್ಟು: ಮಂಗಳೂರಿನ ಖ್ಯಾತ ತಬಲ ಕಲಾವಿದ ದಂಪತಿ ಆತ್ಮಹತ್ಯೆ

ಖ್ಯಾತ ತಬಲಾ ಕಲಾವಿದ ಹಾಗೂ ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಗರದ ಪಿಂಟೋಸ್ ಲೇನ್‌ನಲ್ಲಿ ನಡೆದಿದೆ.

ಹಣಕಾಸಿನ ಬಿಕ್ಕಟ್ಟು: ಮಂಗಳೂರಿನ ಖ್ಯಾತ ತಬಲ ಕಲಾವಿದ ದಂಪತಿ ಆತ್ಮಹತ್ಯೆ
ಆತ್ಮಹತ್ಯೆ ಮಾಡಿಕೊಂಡ ಸ್ಥಳ (ಒಳಚಿತ್ರದಲ್ಲಿ ದಂಪತಿಗಳಾದ ಸುರೇಶ್ ಹಾಗೂ ವಾಣಿ)
Published On :

ಮಂಗಳೂರು: ಖ್ಯಾತ ತಬಲಾ ಕಲಾವಿದ ಹಾಗೂ ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಗರದ ಪಿಂಟೋಸ್ ಲೇನ್‌ನಲ್ಲಿ ನಡೆದಿದೆ.

ತಬಲಾ ಕಲಾವಿದ ಸುರೇಶ್ (52) ಹಾಗೂ ಅವರ ಪತ್ನಿ ವಾಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಾಣಿ ಅವರು ಖಾಸಗಿ ಕಾಲೇಜಿನಲ್ಲಿ ಕರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಹಣಕಾಸಿನ ಬಿಕ್ಕಟ್ಟು ಇಂತಹಾ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳದಲ್ಲಿ ಡೆತ್ ನೋಟ್ ಕಂಡುಬಂದಿದೆ, ಇದರಲ್ಲಿ ಚಿಟ್ ಫಂಡ್ ನಲ್ಲಿನ ಹೂಡಿಕೆಯಿಂದ ಉಂಟಾದ ನಷ್ಟವನ್ನು ಉಲ್ಲೇಖಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಾವಿಯಲ್ಲಿ ಪತಿ ಸುರೇಶ್ ಅವರ ಶವ ಪತ್ತೆಯಾಗಿದ್ದು, ಮನೆಯೊಳಗೆ ಪತ್ನಿ ವಾಣಿ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕದ್ರಿ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಕೈಗೊಂಡಿದ್ದಾರೆ. ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.