ಕೋವಿಡ್-19: ಆರೋಗ್ಯ ಸಮಸ್ಯೆಗಳ ಬದಿಗೊತ್ತಿ ಕರ್ತವ್ಯ ಮುಂದುವರೆಸುತ್ತಿರುವ ಆ್ಯಂಬುಲೆನ್ಸ್ ಚಾಲಕ
ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರೂ ಕೊರೋನಾ ಸಾಂಕ್ರಾಮಿಕ ರೋಗಕ್ಕೆ ಹೆದರದ ಆ್ಯಂಬುಲೆನ್ಸ್ ಚಾಲಕ ನಿಂಗಪ್ಪ ಎಸ್ ಕಂಬಾರ್ ಅವರು ಸೋಂಕಿತರ ಆರೋಗ್ಯ ರಕ್ಷಣೆಗೆ ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ.

ವಿಜಯಪುರ: ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರೂ ಕೊರೋನಾ ಸಾಂಕ್ರಾಮಿಕ ರೋಗಕ್ಕೆ ಹೆದರದ ಆ್ಯಂಬುಲೆನ್ಸ್ ಚಾಲಕ ನಿಂಗಪ್ಪ ಎಸ್ ಕಂಬಾರ್ ಅವರು ಸೋಂಕಿತರ ಆರೋಗ್ಯ ರಕ್ಷಣೆಗೆ ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ.
ವಿಜಯಪುರದಿಂದ 20 ಕಿಮೀ ದೂರದಲ್ಲಿರುವ ಟಿಕೋಟಾ ಪಟ್ಟಣದ ನಿವಾಸಿಯಾಗಿರುವ 39 ವರ್ಷದ ನಿಂಗಪ್ಪ ಅವರು ಸರ್ಕಾರದ 108 ಆ್ಯಂಬುಲೆನ್ಸ್ ವಾಹನದ ಚಾಲಕನಾಗಿ ಹಲವು ವರ್ಷಗಳಿಂದರೂ ಕಾರ್ಯನಿರ್ವಹಿಸುತ್ತಿದ್ದು, 25 ವರ್ಷ ವಯಸ್ಸಿನಲ್ಲೇ ಮಧುಮೇಹಕ್ಕೆ ಒಳಗಾಗಿದ್ದರು.
ಪ್ರತೀನಿತ್ಯ 8 ದೂರವಾಣಿ ಕರೆಗಳು ಬರುತ್ತವೆ. ಕೊರೋನಾ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಕೆಲವೊಮ್ಮೆ ಮೃತದೇಹಗಳನ್ನು ಸಾಗಿಸಬೇಕಾಗುತ್ತದೆ. ನನ್ನ ಕೆಲಸದಲ್ಲಿ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಸೋಂಕಿತರನ್ನು ಆಸ್ಪತ್ರೆಗೆ ಸಾಗಿಲುವ ವೇಳೆ ಸಾಕಷ್ಟು ಒತ್ತಡಗಳನ್ನು ಎದುರಿಸುತ್ತೇವೆಂದು ನಿಂಗಪ್ಪ ಅವರು ಹೇಳಿದ್ದಾರೆ.
ದೀರ್ಘಕಾಲಿಕ ರೋಗದಿಂದ ಬಳಲುತ್ತಿರುವವರ ಮೇಲೆ ಕೊರೋನಾ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದ್ದರೂ. ಇದಾವುದಕ್ಕೂ ಆತಂಕಕ್ಕೊಳಗಾಗದ ನಿಂಗಬ್ಬ ಅವರು ಕೊರೋನಾ ಕರ್ತವ್ಯವನ್ನು ಮುಂದುವರೆಸುತ್ತಿದ್ದಾರೆ.
ಕೊರೋನಾ ಲಸಿಕೆ ಮೊದಲ ಡೋಸ್ ಪಡೆದುಕೊಳ್ಳಲಾಗಿದ್ದು, ಎರಡನೇ ಡೋಸ್ ಪಡೆಯಬೇಕಿದೆ. ಮಧುಮೇಹದಿಂದ ಬಳಲುತ್ತಿದ್ದರು, ನನ್ನ ಆರೋಗ್ಯದ ಮೇಲೆ ಸಾಕಷ್ಟು ಕಾಳಜಿವಹಿಸಿದ್ದೇನೆ. ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸುವ ವ್ಳೆ ಪಿಪಿಇ ಕಿಟ್ ಧರಿಸಿರುತ್ತೇನೆ. ಪ್ರತೀನಿತ್ಯ ನನ್ನ ಕುಟುಂಬದವರೇ ನನ್ನ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತಾರೆ. ಜನರ ರಕ್ಷಣೆ ಮಾಡಲು ಇದೇ ನನಗೆ ಸಹಾಯ ಮಾಡುತ್ತದೆ. ಇಂತಹ ಸಾಂಕ್ರಾಮಿಕ ಸಂದರ್ಭದಲ್ಲಿ ಸಣ್ಣಪುಟ್ಟ ಕಾರಣ ನೀಡಿ ನನ್ನ ಕೆಲಸಕ್ಕೆ ಮೋಸ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಕಳೆದ ಒಂದೂವರೆ ವರ್ಷಗಳಲ್ಲಿ ನಿಂಗಪ್ಪ ಅವರು ಅತ್ಯಂತ ಕಡಿಮೆ ರಜೆಯನ್ನು ಪಡೆದುಕೊಂಡಿದ್ದಾರೆ. ಅದೂ ಕೂಡ ಕೆಲ ದಿನಗಳ ಹಿಂದಷ್ಟೇ ಹೃದಯಾಘಾತದಿಂದ ಅವರ ತಂದೆ ಸಾವನ್ನಪ್ಪಿದ್ದ ವೇಳೆ ತೆಗೆದುಕೊಂಡ ರಜೆಯಾಗಿದೆ. ನಿಂಗಪ್ಪ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಕುಟುಂಬದೊಂದಿಗೆ ಕಾಲ ಕಳೆಯದ ಅವರು ಕೊರೋನಾ ಕರ್ತವ್ಯ ಮುಂದುವರೆಸುತ್ತಿದ್ದಾರೆ.
ನಿಂಗಪ್ಪ ಅವರ ಈ ಸೇವೆ ಕುರಿತು ಆ್ಯಂಬುಲೆನ್ಸ್ ಸೇವೆಗಳ ಅಧಿಕಾರಿ ಸಂತೋಷ್ ಬೋಡಾ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
30 ಆ್ಯಂಬುಲೆನ್ಸ್ ಗಳನ್ನು ನಿಭಾಯಿಸುತ್ತಿರುವ 120 ಮಂದಿ ಸಿಬ್ಬಂದಿಗಳು, 63 ಮಂದಿ ಆ್ಯಂಬುಲೆನ್ಸ್ ಚಾಲಕರ ಸೇವೆಗೆ ಹೆಮ್ಮೆಯಿದೆ. 30ರಲ್ಲಿ 9 ಆ್ಯಂಬುಲೆನ್ಸ್ ಗಳನ್ನು ಕೊರೋನಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಈ ವಾಹನಗಳ ಚಾಲಕರು ಗಡಿಯಾರದ ಮುಳ್ಳುಗಳಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆಂದು ಹೇಳಿದ್ದಾರೆ.
ಕೊರೋನಾ ಕರ್ತವ್ಯದ ವೇಳೆ ಕೆಲವು ಚಾಲಕರಿಗೆ ಸೋಂಕು ತಗುಲಿದ್ದು, ಚೇತರಿಸಿಕೊಂಡಿದ್ದಾರೆಂದು ಮಾಹಿತಿ ನೀಡಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಂದ್ರ ಕಾಪ್ಸೆಯವರು ಮಾತನಾಡಿ, ಆ್ಯಂಬುಲೆನ್ಸ್ ಚಾಲಕರು ಮುಂಚೂಣಿ ಹೋರಾಟಗಾರರಾಗಿದ್ದು, ಅವರಿಗೂ ಲಸಿಕೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


