ರಾಜ್ಯ

ಶೇ.100ರಷ್ಟು ಲಸಿಕೆ ಗುರಿಯನ್ನು ತಲುಪಿದ ದಕ್ಷಿಣ ಕನ್ನಡ ಜಿಲ್ಲೆಯ ಬಡಗನ್ನೂರು, ಸಿರಿಬಾಗಿಲು ಗ್ರಾಮಗಳು!

ಆರೋಗ್ಯ ವಲಯ ಕಾರ್ಯಕರ್ತರ ನಿರಂತರ ಪ್ರಯತ್ನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕುಗ್ರಾಮಗಳಾದ ಬಡಗನ್ನೂರು ಮತ್ತು ಸಿರಿಬಾಗಿಲು ಗ್ರಾಮಗಳಲ್ಲಿ ಶೇಕಡಾ 100ರಷ್ಟು ಲಸಿಕೆಯ ಗುರಿಯನ್ನು ತಲುಪಲಾಗಿದೆ.

ಶೇ.100ರಷ್ಟು ಲಸಿಕೆ ಗುರಿಯನ್ನು ತಲುಪಿದ ದಕ್ಷಿಣ ಕನ್ನಡ ಜಿಲ್ಲೆಯ ಬಡಗನ್ನೂರು, ಸಿರಿಬಾಗಿಲು ಗ್ರಾಮಗಳು!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಸಿಕೆ ನೀಡುತ್ತಿರುವ ಆರೋಗ್ಯ ವಲಯ ಕಾರ್ಯಕರ್ತರು
Published On :

ಮಂಗಳೂರು: ಆರೋಗ್ಯ ವಲಯ ಕಾರ್ಯಕರ್ತರ ನಿರಂತರ ಪ್ರಯತ್ನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕುಗ್ರಾಮಗಳಾದ ಬಡಗನ್ನೂರು ಮತ್ತು ಸಿರಿಬಾಗಿಲು ಗ್ರಾಮಗಳಲ್ಲಿ ಶೇಕಡಾ 100ರಷ್ಟು ಲಸಿಕೆಯ ಗುರಿಯನ್ನು ತಲುಪಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಕುಗ್ರಾಮ ಸಿರಿಬಾಗಿಲು. ಸಹ್ಯಾದ್ರಿ ಬೆಟ್ಟದ ತಪ್ಪಲಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹತ್ತಿರದಲ್ಲಿರುವ ಕೊಂಬಾರು ಗ್ರಾಮ ಪಂಚಾಯತ್ ಅಡಿಯಲ್ಲಿ ಸಿರಿಬಾಗಿಲು ಗ್ರಾಮವಿದ್ದು ಇಲ್ಲಿ 165 ಕುಟುಂಬಗಳಿದ್ದು 872 ಜನರು ವಾಸಿಸುತ್ತಿದ್ದಾರೆ.

ಜುಲೈ 19ರಂದು ಈ ಗ್ರಾಮ ಶೇಕಡಾ 100ರಷ್ಟು ಲಸಿಕೆ ಗುರಿಯನ್ನು ಮುಟ್ಟಿತ್ತು ಎಂದು ಪುತ್ತೂರು ತಾಲ್ಲೂಕು ಆರೋಗ್ಯಾಧಿಕಾರಿ ಡಾ ದೀಪಕ್ ರೈ ಹೇಳಿದ್ದಾರೆ.

ಇಲ್ಲಿ ಲಸಿಕೆ ಫಲಾನುಭವಿಗಳು 571 ಮಂದಿಯಿದ್ದು ಅವರಲ್ಲಿ 14 ಮಂದಿಗೆ ಲಸಿಕೆಯನ್ನು ತಿರಸ್ಕರಿಸಲಾಗಿದೆ. ಇಬ್ಬರು ಗರ್ಭಿಣಿಯರು ತೆಗೆದುಕೊಳ್ಳಲು ನಿರಾಕರಿಸಿದರು, ಇನ್ನು ನಾಲ್ವರು ಮಂಗಳೂರಿನಲ್ಲಿ ನೆಲೆಸಿದ್ದಾರೆ ಎಂದರು.ಸಿರಿಬಾಗಿಲು ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಡಿ ಇದೆ.

ಗ್ರಾಮಕ್ಕೆ ಸರಿಯಾದ ಸಂಪರ್ಕವಿಲ್ಲದಿರುವುದು ಲಸಿಕೆ ನೀಡುವಿಕೆಗೆ ಪ್ರಮುಖ ಸವಾಲಾಗಿತ್ತು ಎಂದು ಕಿರಿಯ ಆರೋಗ್ಯ ಸಹಾಯಕಿ ವಿಜಯ ಹೇಳುತ್ತಾರೆ. ಅರಣ್ಯ ಪ್ರದೇಶದಲ್ಲಿರುವ ಈ ಗ್ರಾಮಕ್ಕೆ ಹೋಗುವ ರಸ್ತೆ ಕಳಪೆ ಸ್ಥಿತಿಯಲ್ಲಿದೆ ಮತ್ತು ಆರೋಗ್ಯ ತುರ್ತು ಸಮಯದಲ್ಲಿ ರೋಗಿಗಳನ್ನು ಮುಖ್ಯ ರಸ್ತೆಯವರೆಗೆ ಹೆಗಲ ಮೇಲೆ ಹೊತ್ತುಕೊಂಡು ಹೋಗಲಾಗುತ್ತದೆ. ನಾವು ಪಂಚಾಯತ್ ಕಾರ್ಯಪಡೆ ಸದಸ್ಯರ ಸಹಾಯದಿಂದ ದ್ವಿಚಕ್ರ ವಾಹನದಲ್ಲಿ ಕೆಲವು ಕಿಲೋಮೀಟರ್ ಪ್ರಯಾಣಿಸಿ ನಂತರ ಕಾಲ್ನಡಿಗೆಯಲ್ಲಿ ಹೋಗಿ ಲಸಿಕೆ ನೀಡಿದ್ದೇವೆ ಎನ್ನುತ್ತಾರೆ.

ಕೋವಿಡ್ 19 ವಿರುದ್ಧದ ಮೊದಲ ಡೋಸ್‌ ಲಸಿಕೆ ಹಾಕಿದ ಶ್ರೇಯಸ್ಸು ಗ್ರಾಮಸ್ಥರಿಗೆ ಮತ್ತು ಆರೋಗ್ಯ ಸಿಬ್ಬಂದಿಗೆ ಹೋಗಬೇಕು. ಪುತ್ತೂರು ತಾಲ್ಲೂಕಿನ ಬಡಗಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಡಗನ್ನೂರು ಗ್ರಾಮದಲ್ಲಿ ಕೂಡ ಶೇಕಡಾ 100ರಷ್ಟು ಲಸಿಕೆ ಗುರಿಯನ್ನು ತಲುಪಲಾಗಿದೆ.

ಬಡಗನ್ನೂರು ಗ್ರಾಮದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಸಾವಿರದ 45 ಫಲಾನುಭವಿಗಳಿದ್ದರು. 29 ಮಂದಿಗೆ ಕೊರೋನಾ ಲಸಿಕೆ ನೀಡಲು ನಿರಾಕರಿಸಲಾಗಿದೆ. 10 ಜನರು ಜಿಲ್ಲೆಯ ಹೊರಗೆ ವಾಸಿಸುತ್ತಿದ್ದಾರೆ. ಎರಡೂ ಹಳ್ಳಿಗಳಲ್ಲಿ ಲಸಿಕೆ ನಿರಾಕರಣೆ ಮಾಡಿದವರಲ್ಲಿ ನಾವು ನಮ್ಮ ನಿರಾಕರಿಸಿದ್ದು ಹೆಚ್ಚು. ಆರೋಗ್ಯ ಸಿಬ್ಬಂದಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಕಾರ್ಯಪಡೆಯ ಪೂರ್ವಭಾವಿ ಕ್ರಮಗಳಿಂದ ಜನರಿಗೆ ಸರಿಯಾದ ಮಾಹಿತಿ ಮತ್ತು ಶಿಕ್ಷಣ ನೀಡುವುದು ಈ ಗುರಿಯನ್ನು ಸಾಧಿಸಲು ಸಹಾಯ ಮಾಡಿತು. ವ್ಯಾಕ್ಸಿನೇಷನ್ ಪ್ರಯೋಜನಗಳನ್ನು ತಿಳಿಸಲು ನಾವು ಈ ಹಳ್ಳಿಗಳಲ್ಲಿನ ಪ್ರತಿಯೊಂದು ಮನೆಗೂ ಹೋಗಿದ್ದೇವೆ ಎಂದು ಡಾ ದೀಪಕ್ ರೈ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.