ರಾಜ್ಯ

ಕಲ್ಯಾಣ ಕರ್ನಾಟಕದ ಎರಡನೇ ವಿಧಿವಿಜ್ಞಾನ ಪ್ರಯೋಗಾಲಯ ಬಳ್ಳಾರಿಯಲ್ಲಿ ಸ್ಥಾಪನೆ

ಅಪರಾಧ ಪ್ರಕರಣಗಳ ಉತ್ತಮ ನಿರ್ವಹಣೆಗಾಗಿ ಮತ್ತು ತ್ವರಿತ ವಿಲೇವಾರಿಗಾಗಿ ರಾಜ್ಯ ಸರ್ಕಾರವು ಬಳ್ಳಾರಿಯಲ್ಲಿ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯವನ್ನು ಸ್ಥಾಪಿಸುವುದಾಗಿ ಘೋಷಿಸಿದೆ.

ಕಲ್ಯಾಣ ಕರ್ನಾಟಕದ ಎರಡನೇ ವಿಧಿವಿಜ್ಞಾನ ಪ್ರಯೋಗಾಲಯ ಬಳ್ಳಾರಿಯಲ್ಲಿ ಸ್ಥಾಪನೆ
ಸಾಂದರ್ಭಿಕ ಚಿತ್ರ
Published On :

ಹುಬ್ಬಳ್ಳಿ:  ಅಪರಾಧ ಪ್ರಕರಣಗಳ ಉತ್ತಮ ನಿರ್ವಹಣೆಗಾಗಿ ಮತ್ತು ತ್ವರಿತ ವಿಲೇವಾರಿಗಾಗಿ ರಾಜ್ಯ ಸರ್ಕಾರವು ಬಳ್ಳಾರಿಯಲ್ಲಿ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯವನ್ನು ಸ್ಥಾಪಿಸುವುದಾಗಿ ಘೋಷಿಸಿದೆ.

ಕಲಬುರಗಿಯ ನಂತರ ನಿರ್ಮಾಣವಾಗುತ್ತಿರುವ ಈ ಪ್ರದೇಶದ ಎರಡನೇ ಕೇಂದ್ರ ಇದಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ಸ್ಥಾಪನೆಗಾಗಿ ಸರ್ಕಾರ 25 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಸದ್ಯಕ್ಕೆ ಎಫ್ಎಸ್ಎಲ್ ಕೇಂದ್ರವು ತಾತ್ಕಾಲಿಕ ರಚನೆಯಿಂದ ಕಾರ್ಯನಿರ್ವಹಿಸಲಿದೆ. ಹೊಸ ಕೇಂದ್ರವು ಕಲ್ಯಾಣ ಕರ್ನಾಟಕ ಪ್ರದೇಶದ ನಾಲ್ಕು ಜಿಲ್ಲೆಗಳಾದ ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ರಾಯಚೂರಿನ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಲಿದೆ.

ದಾವಣಗೆರೆ ಅಥವಾ ಕಲಬುರಗಿ ಕೇಂದ್ರಗಳಿಗೆ ಅಪರಾಧ ಪ್ರಕರಣ ಸಂಬಂಧ ಸಾಕ್ಷ್ಯಗಳನ್ನು ಪರಿಶೀಲಿಸಲು ಕೊಂಡೊಯ್ಯುವಂತೆ ಪೊಲೀಸರಿಂದ ಒತ್ತಾಯಿಸಲಾಗುತ್ತಿತ್ತು. ಈಗ ಬಳ್ಳಾರಿಯಲ್ಲೇ ವಿಧಿ ವಿಜ್ಞಾನ ಪ್ರಯೋಗಾಲಯ ಸ್ಥಾಪನೆಯಾಗುತ್ತಿರುವುದರಿಂದ ಪೊಲೀಸರು ತಮ್ಮ ತನಿಖಾ ಕಾರ್ಯವನ್ನು ಮತ್ತಷ್ಟು ಶೀಘ್ರವಾಗಿ ಪೂರ್ಣಗೊಳಿಸಬಹುದಾಗಿದೆ.

ಬಳ್ಳಾರಿ ನಗರದಲ್ಲಿ ಶೀಘ್ರದಲ್ಲೇ ಹೊಸ ಕಟ್ಟಡದ ಸ್ಥಳವನ್ನು ಗುರುತಿಸಲಾಗುವುದು ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ. ಎಫ್ಎಸ್ಎಲ್ ಕೇಂದ್ರದ ಸ್ಥಾಪನೆ ಅತ್ಯಗತ್ಯವಿದೆ. ಇದಕ್ಕಾಗಿ ಪೊಲೀಸ್ ಮತ್ತು ಗೃಹ ಸಚಿವಾಲಯದೊಂದಿಗೆ ಹಲವಾರು ವಿನಂತಿ ಮಾಡಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ರಾಜ್ಯವು ಈಗ ಬೆಂಗಳೂರು, ಮೈಸೂರು, ಕಲಬುರಗಿ, ಮಂಗಳೂರು, ದಾವಣಗೆರೆ, ಬೆಳಾಗಾವಿ ಮತ್ತು ಬಳ್ಳಾರಿಯಲ್ಲಿ ಆರು ಎಫ್‌ಎಸ್‌ಎಲ್ ಕೇಂದ್ರಗಳನ್ನು ಹೊಂದಿದೆ. ಬಳ್ಳಾರಿಯಲ್ಲಿನ ಎಫ್ಎಸ್ಎಲ್ ಕೇಂದ್ರವು ಮುಂದಿನ ಮೂರು ತಿಂಗಳಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.