FSL

ಶೃಂಗೇರಿ ಅಂಚೆ ಮತ ಎಣಿಕೆ: ಅಕ್ರಮದ ಬಗ್ಗೆ FSL ತನಿಖೆ ನಡೆಸಬೇಕು- ಕೃಷ್ಣ ಭೈರೇಗೌಡ
ನಿನ್ನೆ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಮತ ಎಣಿಕೆಯ ಬಳಿಕ ಕೆಲವು ಪೋಸ್ಟಲ್ ಬ್ಯಾಲೆಟ್ಗಳಲ್ಲಿ ತಿದ್ದುಪಡಿ ನಡೆದಿದೆ. ಎಲ್ಲಾ ಪಕ್ಷಗಳ ಏಜೆಂಟ್ಗಳು ಒಪ್ಪಿ ಸಹಿ ಹಾಕಿದ ನಂತರವೂ ಮತಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

FSL ವರದಿ ಬರುವವರೆಗೂ ಧರ್ಮಸ್ಥಳ ಶವ ಶೋಧ ಕಾರ್ಯಾಚರಣೆ ಸ್ಥಗಿತ: ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ
ಎಸ್ಐಟಿ ಯಾರದೇ ಒತ್ತಡಕ್ಕೆ ಮಣಿಯದೆ ಬಹಳ ಗಂಭೀರ ಮತ್ತು ಪಾರದರ್ಶಕವಾಗಿ ತನಿಖೆ ನಡೆಸುತ್ತಿದೆ. ಧರ್ಮಸ್ಥಳದಲ್ಲಿ ಇನ್ನೂ ಎಷ್ಟು ಕಡೆ ಅಗೆಯಬೇಕು, ತನಿಖೆ ಮುಂದಕ್ಕೆ ಹೋಗಬೇಕಾ ಅಥವಾ ಬೇಡವಾ ಎಂಬುದನ್ನು ಎಸ್ಐಟಿ ತೀರ್ಮಾನಿಸಲಿದೆ.

ಭೋವಿ ನಿಗಮ ಹಗರಣ: ಬೆಂಗಳೂರಿನಲ್ಲಿ ಮಹಿಳೆ ಆತ್ಮಹತ್ಯೆ; 11 ಪುಟಗಳ ಡೆತ್ ನೋಟ್ FSL ಗೆ ರವಾನೆ!
ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡ ಜೀವಾ 11 ಪುಟಗಳ ಡೆತ್ ನೋಟ್ ಅನ್ನು ತಮ್ಮ ನಿವಾಸದಲ್ಲಿ ಬಿಟ್ಟು ಹೋಗಿದ್ದಾರೆ.

ಬಿಟ್ಕಾಯಿನ್ ಹಗರಣ: ಡೇಟಾವನ್ನು ಇನ್ಸ್ಪೆಕ್ಟರ್ ತಿದ್ದಿರುವುದು FSL, C-DAC ವರದಿಗಳಲ್ಲಿ ಬಹಿರಂಗ
ಬೆಂಗಳೂರಿನ ಸೆಂಟ್ರಲ್ ಕ್ರೈಂ ಬ್ರಾಂಚ್ (ಸಿಸಿಬಿ)ನ ತಾಂತ್ರಿಕ ಬೆಂಬಲ ಕೇಂದ್ರದ ಉಸ್ತುವಾರಿ ವಹಿಸಿದ್ದ ಬಾಬು, ಮ್ಯಾಕ್ಬುಕ್, ಲ್ಯಾಪ್ಟಾಪ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡ ನಂತರ ಹೆಚ್ಚುವರಿ ಫೈಲ್ಗಳನ್ನು ರಚಿಸುವ ಮೂಲಕ ಡೇಟಾವನ್ನು ತಿರುಚಿದ ಮತ್ತು ಪ್ರಮುಖ ಸಾಕ್ಷ್ಯಗಳನ್ನು ನಾಶ ಮಾಡಿರುವುದು ಪತ್ತೆಯಾಗಿದೆ.

ಹುಬ್ಬಳ್ಳಿ: ಬಾಲಕನೊಬ್ಬ ಪ್ರಧಾನಿ ಮೋದಿಗೆ ಹಾಕಿದ ಹಾರವನ್ನು ಪರೀಕ್ಷೆಗಾಗಿ ಎಫ್ಎಸ್ಎಲ್ಗೆ ರವಾನೆ
ನಿಯಮಾವಳಿ ಪ್ರಕಾರ, ವಿವರವಾದ ವಿಶ್ಲೇಷಣೆಗಾಗಿ ಹಾರವನ್ನು ಎಫ್ಎಸ್ಎಲ್ ಹುಬ್ಬಳ್ಳಿಗೆ ಕಳುಹಿಸಲಾಗಿದೆ. ಆದರೆ, ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ. ಹುಬ್ಬಳ್ಳಿಯ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮತ್ತು ಮೋದಿ ಜೊತೆಗಿದ್ದ ಎಸ್ಪಿಜಿ ತಂಡಕ್ಕೆ ವರದಿ ಸಲ್ಲಿಸಲಾಗಿದೆ.

ಕಾಂಜಾವಾಲಾ ಪ್ರಕರಣ: ಕಾರಿನೊಳಗೆ ಮಹಿಳೆಯಿದ್ದ ಯಾವುದೇ ಚಿಹ್ನೆಗಳು ಕಂಡು ಬಂದಿಲ್ಲ- ಎಫ್ಎಸ್ಎಲ್
ದೆಹಲಿಯ ಕಾಂಜಾವಾಲಾ ಮಹಿಳೆ ಸಾವು ಪ್ರಕರಣದಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವ ಮಾತುಗಳು ಕೇಳಿಬರುತ್ತಿರುವ ನಡುವಲ್ಲೇ ಕಾರಿನೊಳಗೆ ಮಹಿಳೆಯಿಂದ್ದ ಯಾವುದೇ ಚಿಹ್ನೆಗಳು ಕಂಡುಬಂದಿಲ್ಲ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ಬುಧವಾರ ಸ್ಪಷ್ಟಪಡಿಸಿದೆ.

ಲವ್ ಜಿಹಾದ್ ತಡೆಗೆ ಪ್ರತ್ಯೇಕ ಕಾನೂನು ಅಗತ್ಯವಿಲ್ಲ, ರಾಜ್ಯದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪನೆಗೆ ಕೇಂದ್ರ ಅನುಮತಿ: ಆರಗ ಜ್ಞಾನೇಂದ್ರ
ರಾಜ್ಯದಲ್ಲಿ ಮೊಟ್ಟಮೊದಲ ಅಂತಾರಾಷ್ಟ್ರೀಯ ಮಟ್ಟದ ವಿಧಿವಿಜ್ಞಾನ ಪ್ರಯೋಗಾಲಯ(FSL) ತಲೆಯೆತ್ತಲಿದೆ. ಪ್ರಯೋಗಾಲಯ ಸ್ಥಾಪನೆಗೆ ಕೇಂದ್ರ ಗೃಹ ಸಚಿವಾಲಯ ಸಂಬಂಧಪಟ್ಟ ಅನುಮತಿ ನೀಡಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ಚಿತ್ರದುರ್ಗದಲ್ಲಿ ತಿಳಿಸಿದ್ದಾರೆ.

ಚಂದ್ರಶೇಖರ್ ಸಾವು ಪ್ರಕರಣ: 2-3 ದಿನಗಳಲ್ಲಿ ಮರಣೋತ್ತರ ಪರೀಕ್ಷಾ ವರದಿ ನಮ್ಮ ಕೈ ಸೇರಲಿದೆ: ಎಡಿಜಿಪಿ
ಶಾಸಕ ರೇಣುಕಾಚಾರ್ಯ ಸಹೋದರ ಪುತ್ರ ಚಂದ್ರಶೇಖರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು, ಮರಣೋತ್ತರ ಪರೀಕ್ಷಾ ವರದಿ ಒಂದೆರೆಡು ದಿನಗಳಲ್ಲಿ ನಮ್ಮ ಕೈಸೇರಲಿದೆ, ನಂತರ ತನಿಖೆ ತೀವ್ರಗೊಳಿಸಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ಅವರು ಹೇಳಿದ್ದಾರೆ.

ಕರ್ನಾಟಕ ಪೊಲೀಸರ ಕಾರ್ಯ ಶ್ಲಾಘನೀಯ; ವಿಧಿ ವಿಜ್ಞಾನ ಪ್ರಯೋಗಾಲಯ ಉನ್ನತೀಕರಿಸಲು ಆದ್ಯತೆ: ಆರಗ ಜ್ಞಾನೇಂದ್ರ
ಸರ್ಕಾರವು ವಿಧಿ ವಿಜ್ಞಾನ ಪ್ರಯೋಗಾಲಯಗಳನ್ನು (ಎಫ್ಎಸ್ಎಲ್) ಮತ್ತಷ್ಟು ಸಮರ್ಥಗೊಳಿಸಲು ಮತ್ತು ಮೇಲ್ದರ್ಜೆಗೇರಿಸಲು ಯೋಜಿಸುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

