ಬೆಂಗಳೂರು: ಸರಗಳ್ಳನ ಹಿಡಿಯಲು ಹೋದ ಪೋಲೀಸ್ ವಾಹನ ಅಪಘಾತ, ನಾಲ್ವರಿಗೆ ಗಾಯ
ಸರಗಳ್ಳತನದ ಆರೋಪಿಯನ್ನು ಪೋಲೀಸರು ಬೆನ್ನಟ್ಟಿವಾಗ ಎರಡು ಅಪಘಾತಗಳು ಸಂಭವಿಸಿದ ಘಟನೆ ಬೆಂಗಳುರಿನಲ್ಲಿ ನಡೆದಿದೆ. ಅಪಘಾತದಿಂದ ನಾಲ್ವರು ಗಾಯಗೊಂಡಿದ್ದಾರೆ.

ಬೆಂಗಳೂರು: ಸರಗಳ್ಳತನದ ಆರೋಪಿಯನ್ನು ಪೋಲೀಸರು ಬೆನ್ನಟ್ಟಿವಾಗ ಎರಡು ಅಪಘಾತಗಳು ಸಂಭವಿಸಿದ ಘಟನೆ ಬೆಂಗಳುರಿನಲ್ಲಿ ನಡೆದಿದೆ. ಅಪಘಾತದಿಂದ ನಾಲ್ವರು ಗಾಯಗೊಂಡಿದ್ದಾರೆ.
ಬೆಳಿಗ್ಗೆ 9 ಗಂಟೆ ಸುಮಾರಿಗೆ ಸರ್ಜಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಮಂಜುಳಾ ಎಂಬ ಮಹಿಳೆಯ ಸರವನ್ನು ದ್ವಿಚಕ್ರ ವಾಹನ ಸವಾರರಿಬ್ಬರು ಕಸಿದಿದ್ದಾರೆ. 112 ಪೆಟ್ರೋಲಿಂಗ್ ವಾಹನವು ದುಷ್ಕರ್ಮಿಗಳನ್ನು ಬೆನ್ನಟ್ಟಿದೆ. ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ, ವೇಗವಾಗಿ ಬಂದ ದುಷ್ಕರ್ಮಿಗಳು ಬುರಗುಂಟೆಯಲ್ಲಿ ಭದ್ರತಾ ಸಿಬ್ಬಂದಿಯಾದ ಕಮಲ್ ಮೌತ್ ಎನ್ನುವವರನ್ನು ಬೈಕ್ ಗುದ್ದಿಸಿ ಬೀಳಿಸಿದ್ದಾರೆ. ಆ ವೇಳೆ ಮೌತ್ ಗಾಯಗೊಂಡರೂ ದುಷ್ಕರ್ಮಿಗಳು ಓಡಿಹೋದರು. ಪೋಲೀಸರು ಮೌತ್ ಅವರನ್ನು ಸ್ಪತ್ರೆಗೆ ಕರೆದೊಯ್ಯುತ್ತಿರುವಾಗ, ಅತ್ತಿಬೆಲೆ -ಸರ್ಜಾಪುರ ರಸ್ತೆಯಲ್ಲಿ ಸ್ಕೂಟರ್ ಸವಾರನೊಬ್ಬ ಯಾವುದೇ ಸೂಚನೆ ಇಲ್ಲದೆ ಡಿಕ್ಕಿ ಹೊಡೆಯುವಂತೆ ನುಗ್ಗಿದ್ದಾನೆ.
ಸ್ಕೂಟರ್ ಗೆ ವಾಹನ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಪ್ರಯತ್ನದಲ್ಲಿದ್ದಾಗ ವಾಹನ ಅವನ ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿಯಾಗಿದೆ ಆ ಕಂಬ ಸರಕುಗಳ ಸಾಗಿಸುತ್ತಿದ್ದ ಆಟೋದ ಮೇಲೆ ಬಿದ್ದಿದೆ. ಅದರಲ್ಲಿದ್ದ ಒಬ್ಬ ಗಾಯಗೊಂಡಿದ್ದಾನೆ. ಅಲ್ಲದೆ ಪೋಲೀಸ್ ವಾಹನ ಚಾಲಕ ಮಲ್ಲಿಕಾರ್ಜುನ ಸಹ ಗಾಯಾಳುವಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


