ರಾಜ್ಯ

ಜುಲೈ 8 ರಿಂದ ಗೋವಾಕ್ಕೆ ಸರ್ಕಾರಿ ಬಸ್ ಕಾರ್ಯಾಚರಣೆ ಪುನಾರಾರಂಭ

ರಾಜ್ಯಾದಂತ ಅನ್ ಲಾಕ್ ಆಗಿರುವುದರಿಂದ ಇದೇ 8 ರಿಂದ ಗೋವಾ ರಾಜ್ಯಕ್ಕೆ ಹಾವೇರಿ ವಿಭಾಗದ ಹಿರೇಕೆರೂರು ರಾಣೇಬೆನ್ನೂರು, ಬ್ಯಾಡಗಿ ಹಾಗೂ ಸವಣೂರ ಘಟಕದಿಂದ ಸಾರಿಗೆ ಕಾರ್ಯಾಚರಣೆ ಪುನರಾರಂಭವಾಗಲಿದೆ ಎಂದು ವಾಕರಸಾಸಂ ಹಾವೇರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

ಜುಲೈ 8 ರಿಂದ ಗೋವಾಕ್ಕೆ ಸರ್ಕಾರಿ ಬಸ್ ಕಾರ್ಯಾಚರಣೆ ಪುನಾರಾರಂಭ
ವಾಕರಸಾಸಂ ಬಸ್
Published On :

ಹಾವೇರಿ: ರಾಜ್ಯಾದಂತ ಅನ್ಲಾಕ್ ಆಗಿರುವುದರಿಂದ ಇದೇ 8 ರಿಂದ ಗೋವಾ ರಾಜ್ಯಕ್ಕೆ ಹಾವೇರಿ ವಿಭಾಗದ ಹಿರೇಕೆರೂರು ರಾಣೇಬೆನ್ನೂರು, ಬ್ಯಾಡಗಿ ಹಾಗೂ  ಸವಣೂರ ಘಟಕದಿಂದ ಸಾರಿಗೆ ಕಾರ್ಯಾಚರಣೆ ಪುನರಾರಂಭವಾಗಲಿದೆ ಎಂದು ವಾಕರಸಾಸಂ ಹಾವೇರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ. 

ಹಿರೇಕೆರೂರು-ಪಣಜಿ, ರಾಣೇಬೆನ್ನೂರು-ಪಣಜಿ, ಬ್ಯಾಡಗಿ-ಪಣಜಿ-ಮಡಗಾಂ, ಸವಣೂರ- ವಾಸ್ಕೋ, ಮಡಗಾಂ, ಪಣಜಿ,ವಾಸ್ಕೋಕ್ಕೆ ಸಾರಿಗೆ ಕಾರ್ಯಾಚರಣೆ ಆರಂಭವಾಗಲಿದೆ.

ಪ್ರಯಾಣಿಕರು ಕಡ್ಡಾಯವಾಗಿ ಕಳೆದ ಮೂರು ದಿನದೊಳಗಾಗಿ ಪಡೆದ ಕೋವಿಡ್ ಆರ್.ಟಿ.ಪಿ.ಸಿ.ಆರ್. ರಿಪೋರ್ಟ್, ಕನಿಷ್ಠ ಒಂದು ಡೋಸ್ ಕೋವಿಡ್-19 ಲಸಿಕೆ ಹಾಕಿಸಿಕೊಂಡಿರಬೇಕು. ಪ್ರಯಾಣದ ಸಮಯದಲ್ಲಿ ನಿರ್ವಾಹಕರಿಗೆ ಈ ದಾಖಲೆಗಳನ್ನು ತೋರಿಸುವುದು ಕಡ್ಡಾಯವಾಗಿದೆ.

ಪ್ರಯಾಣಿಕರು ಆನ್‍ಲೈನ್ ಮುಖಾಂತರ ತಮ್ಮ ಆಸನಗಳನ್ನು ಮುಂಗಡವಾಗಿ ಕಾಯ್ದಿರಿಸಿಕೊಳ್ಳಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.