ಬೆಂಗಳೂರಿನಲ್ಲಿ ಕೇಳಿಬಂದ ಭಾರೀ ಶಬ್ಧ: ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನತೆ!
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಮಧ್ಯಾಹ್ನ 12.30ರ ಆಸುಪಾಸಿನಲ್ಲಿ ಭಾರೀ ಶಬ್ಧವೊಂದು ಕೇಳಿ ಬಂದಿದ್ದು, ಶಬ್ಧಕ್ಕೆ ಸಿಲಿಕಾನ್ ಸಿಟಿ ಜನತೆ ಬೆಚ್ಚಿಬಿದ್ದಿದ್ದಾರೆ.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಮಧ್ಯಾಹ್ನ 12.30ರ ಆಸುಪಾಸಿನಲ್ಲಿ ಭಾರೀ ಶಬ್ಧವೊಂದು ಕೇಳಿ ಬಂದಿದ್ದು, ಶಬ್ಧಕ್ಕೆ ಸಿಲಿಕಾನ್ ಸಿಟಿ ಜನತೆ ಬೆಚ್ಚಿಬಿದ್ದಿದ್ದಾರೆ.
ಬಿಡದಿ, ಬನಶಂಕರಿ, ಬ್ಯಾಟರಾಯನಪುರ, ಆರ್ ಆರ್ ನಗರ, ನಾಗರಭಾವಿ, ಚಂದ್ರಾ ಲೇಔಟ್, ಮಾಗಡಿ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಕೆಲವೆಡೆ ಶಬ್ಧ ಕೇಳಿಸಿದ ಅನುಭವ ಆಗಿದೆ ಎಂದು ಹೇಳಲಾಗುತ್ತಿದೆ.
ಈ ಭಾರೀ ಶಬ್ಧಕ್ಕೆ ಎರಡು ಸೆಕೆಂಡುಗಳ ಕಾಲ ಕಿಟಕಿ, ಬಾಗಿಲು ಅಲುಗಾಡಿದ ಅನುಭವವೂ ಆಗಿದೆ. ಈ ಬಗ್ಗೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳಲಾರಂಭಿಸಿದ್ದು, ಅನೇಕ ಮಂದಿ ತಮಗೂ ಅನುಭವ ಆಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ಕೆಲವರು ಹೇಳುವ ಪ್ರಕಾರ 12.23ರ ಸುಮಾರಿಗೆ ಸ್ಪೋಟದ ಸದ್ದು ಕೇಳಿದೆ. ಬಂಡೆ ಒಡೆದಾಗ ಬರುವ ಸದ್ದಿನಂತೆ ಕೇಳಿಸಿದ್ದು, ಈ ವೇಳೆ ಆಗಸದಲ್ಲಿ ಹಾರಾಡುತ್ತಿದ್ದ ಪಕ್ಷಿಗಳು ಆತಂಕಗೊಂಡು ಚೆಲ್ಲಾಪಿಲ್ಲಿಯಾಗಿ ಹಾರಿದ್ದು ಕಂಡಿ ಬಂದಿದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


