ಬಾಡಿಗೆ ಪಡೆದ ಮನೆಯಲ್ಲೇ ದರೋಡೆ: ಸಹೋದರರ ಬಂಧನ
ಮನೆ ಬಾಡಿಗೆ ಪಡೆದ ಮಾಲೀಕರ ಮನೆಯಲ್ಲೇ ದರೋಡೆ ಮಾಡಿದ್ದ ಸಹೋದರರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಅರವಿಂದ್ ಹಾಗೂ ಅವಿನಾಶ್ ಬಂಧಿತ ಆರೋಪಿಗಳು

ಬೆಂಗಳೂರು: ಮನೆ ಬಾಡಿಗೆ ಪಡೆದ ಮಾಲೀಕರ ಮನೆಯಲ್ಲೇ ದರೋಡೆ ಮಾಡಿದ್ದ ಸಹೋದರರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಅರವಿಂದ್ ಹಾಗೂ ಅವಿನಾಶ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 123.77 ಗ್ರಾಂ ಚಿನ್ನಾಭರಣ,3 ಕೆ.ಜಿ ಬೆಳ್ಳಿ ಆಭರಣ ಹಾಗೂ 40 ಸಾವಿರ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅವಿನಾಶ್ ಮತ್ತು ಅರವಿಂದ್ ಎಂಬ ಅಣ್ಣ-ತಮ್ಮರಿಬ್ಬರು ತಮ್ಮದೇ ಪುಟ್ಟದಾದ ಬಟ್ಟೆ ವ್ಯಾಪಾರ ನಡೆಸುತ್ತಿದ್ದರು. ಆದರೆ, ಕೋವಿಡ್ ಲಾಕ್ ಡೌನ್ ನಿಂದ ಅವರ ವ್ಯಾಪಾರ ಕುಗ್ಗಿತು. ಹೀಗಾಗಿ ಅವರು ಮನೆ ಬಾಡಿಗೆ ಕಟ್ಟುವ ಸ್ಥಿತಿಯಲ್ಲಿಯೂ ಇರಲಿಲ್ಲ.
ಇದೇ ಸಮಯದಲ್ಲಿ ಮನೆ ಮಾಲೀಕ ಸುಭಾಷ್ ಚಂದ್ರ ತಮ್ಮ ಮಗನ ಮದುವೆ ನಿಶ್ಚಯ ಮಾಡಿದ್ದರು. ಇದನ್ನು ಅರಿತ ಅರವಿಂದ್ ತನ್ನ ಸಹೋದರ ಅವಿನಾಶ್ ಜೊತೆ ಮಾತನಾಡಿ ಮನೆ ಮಾಲೀಕರ ಮನೆಯಲ್ಲಿಯೇ ದರೋಡೆ ನಡೆಸಲು ಸಂಚು ರೂಪಿಸಿದರು. ಅದರಂತೆ ಮಾಲೀಕರ ಕೈ ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕು ದರೋಡೆ ನಡೆಸಿದ್ದರು.
ಘಟನೆಗೆ ಸಂಬಂಧಿಸಿದಂತೆ ಮನೆ ಮಾಲೀಕರು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಜಾಡು ಹಿಡಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


