ನಿವೃತ್ತ ಯೋಧ ಶ್ರೀನಾಥ್‍ಗೆ ಜಮೀನು ನೀಡುವಂತೆ ಮುನಿರತ್ನ ಶಿಫಾರಸು
ಭಾರತೀಯ ಸೇನೆಯ ನಿವೃತ್ತ ಯೋಧ ವಿ. ಶ್ರೀನಾಥ್ ಅವರಿಗೆ ಕೋಲಾರದಲ್ಲಿ ಮಿಲಿಟರಿ `ಜಿ’ ಕೆಟಗರಿಯಲ್ಲಿ ಜಮೀನು ಮಂಜೂರು ಮಾಡುವಂತೆ ತೋಟಗಾರಿಕೆ ಸಚಿವ ಮುನಿರತ್ನ ಅವರು ಕೋಲಾರ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ.

ಬೆಂಗಳೂರು: ಭಾರತೀಯ ಸೇನೆಯ ನಿವೃತ್ತ ಯೋಧ ವಿ. ಶ್ರೀನಾಥ್ ಅವರಿಗೆ ಕೋಲಾರದಲ್ಲಿ ಮಿಲಿಟರಿ `ಜಿ’ ಕೆಟಗರಿಯಲ್ಲಿ ಜಮೀನು ಮಂಜೂರು ಮಾಡುವಂತೆ ತೋಟಗಾರಿಕೆ ಸಚಿವ ಮುನಿರತ್ನ ಅವರು ಕೋಲಾರ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ.
ಕೋಲಾರ ಜಿಲ್ಲೆ ಹುತ್ತೂರು ಹೋಬಳಿ ನಡುಪಳ್ಳಿ ನಿವಾಸಿ ವಿ. ಶ್ರೀನಾಥ್ ಭಾರತೀಯ ಸೇನೆಯಲ್ಲಿ ದೇಶದ ನಾನಾ ಸ್ಥಗಳಲ್ಲಿ 19 ವರ್ಷಗಳ ಸುದೀರ್ಘ ಸೇವೆಯನ್ನು ಪೂರೈಸಿ ನಿವೃತ್ತರಾಗಿದ್ದಾರೆ. ಇವರಿಗೆ ಮಿಲಿಟರಿ ಜಿ ವರ್ಗದಡಿ ಜಮೀನು ಮಂಜೂರು ಮಾಡುವಂತೆ ಕೋಲಾರ ಜಿಲ್ಲಾಧಿಕಾರಿಗಳಿಗೆ ಸಚಿವ ಮುನಿರತ್ನ ಪತ್ರ ಬರೆದಿದ್ದಾರೆ. ಈ ಮೂಲಕ ನಿವೃತ್ತ ಸೈನಿಕನ ನೆರವಿಗೆ ಸಚಿವರು ಮುಂದಾಗಿದ್ದಾರೆ.
ಶ್ರೀನಾಥ್ ಅವರು ಸೇನೆಯಲ್ಲಿರುವಾಗಲೇ ಹಲವು ವರ್ಷಗಳ ಹಿಂದೆ ವಿಶೇಷ `ಜಿ’ ಕೆಟಗರಿಯಲ್ಲಿ ತಮ್ಮ ನಿವೃತ್ತಿಯ ನಂತರ ತಮ್ಮ ಜೀವನಾಂಶಕ್ಕಾಗಿ ತಮಗೆ ಸರಕಾರದ ವತಿಯಿಂದ ಮಂಜೂರಾಗಬೇಕಾದ ಭೂಮಿಯನ್ನು ಗುರುತಿಸಿ, ಮಂಜೂರು ಮಾಡಿಕೊಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದು, ನಾಲ್ಕೈದು ವರ್ಷ ಕಳೆದರೂ ಯಾವುದೇ ಭೂಮಿ ಮಂಜೂರಾಗದ ಕಾರಣ 2016ರಲ್ಲಿ ಹೈಕೋರ್ಟ್‍ನಲ್ಲಿ ಧಾವೆ ಹೂಡಿದ್ದು, 2016ರ ಏ.4ರಂದು ಹೈಕೋರ್ಟ್ ಸದರಿ ಯೋಧನ ಮನವಿಯನ್ನು ಪುರಸ್ಕರಿಸಿ 2 ತಿಂಗಳೊಳಗೆ ಸರಕಾರಿ ಭೂಮಿ ಮಂಜೂರು ಮಾಡುವಂತೆ ನಿರ್ದೇಶನ ನೀಡಿತ್ತು.
ಅದರಂತೆ ಸದರ ಯೋಧ 2016ರ ಮೇ 5ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು 5 ವರ್ಷ ಕಳೆದರೂ ಇವರಿಗೆ ಒಂದು ಇಮಚು ಭೂಮಿ ಮಂಜೂರು ಮಾಡಿರಲಿಲ್ಲ ಇದರಿಂದ ಬೇಸತ್ತಿದ್ದರು. ಇದೀಗ ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಮುನಿರತ್ನ ಅವರು ನಿವೃತ್ತ ಯೋಧ ಶ್ರೀನಾಥ್‍ಗೆ ಕೂಡಲೇ ಭೂಮಿ ಮಂಜೂರು ಮಾಡುವಂತೆ ಶಿಫಾರಸು ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


