ಕೆಂಗೇರಿ ಮಾರ್ಗ ನಿರ್ಮಿಸಿದ ಅಪ್ರತಿಮ ವೀರರ ಪಾತ್ರವನ್ನು ಗೌರವಿಸಿದ ಬೆಂಗಳೂರು ಮೆಟ್ರೋ!
ಕಳೆದ ಭಾನುವಾರ ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಲಾಗಿದ್ದು, ಈ ಮಾರ್ಗ ಪೂರ್ಣಗೊಳಿಸಲು ಅದರ ಗುತ್ತಿಗೆದಾರರು ಮತ್ತು ಇತರ ಸಹಾಯಕ ಸಿಬ್ಬಂದಿ ನಿರ್ವಹಿಸಿದ ಅದ್ಭುತ...

ಬೆಂಗಳೂರು: ಕಳೆದ ಭಾನುವಾರ ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಲಾಗಿದ್ದು, ಈ ಮಾರ್ಗ ಪೂರ್ಣಗೊಳಿಸಲು ಅದರ ಗುತ್ತಿಗೆದಾರರು ಮತ್ತು ಇತರ ಸಹಾಯಕ ಸಿಬ್ಬಂದಿ ನಿರ್ವಹಿಸಿದ ಅದ್ಭುತ ಕೆಲಸಕ್ಕೆ ನಮ್ಮ ಮೆಟ್ರೋ ಒಂದು ಸೆಲ್ಯೂಟ್ ಸಲ್ಲಿಸಿದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್(ಬಿಎಂಆರ್‌ಸಿಎಲ್) ಉದ್ಘಾಟನಾ ದಿನದಂದು ಮಾರ್ಗ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ 88 ವ್ಯಕ್ತಿಗಳನ್ನು, ಹೆಚ್ಚಿನವರು ಗುತ್ತಿಗೆ ಕೆಲಸಗಾರರಾಗಿದ್ದು, ಅವರಿಗೆ ನಾಯಂಡಹಳ್ಳಿಯಲ್ಲಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರು ಫ್ಲ್ಯಾಗ್ ಮಾಡಿದ ಮೊದಲ ರೈಲಿನಲ್ಲಿ ಪ್ರಯಾಣಿಸಲು ಅನುಮತಿ ನೀಡುವ ಮೂಲಕ ಗೌರವಿಸಲಾಯಿತು.
ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರು ಮೆಟ್ರೋ ರೈಲಿಗೆ ಚಾಲನೆ ನೀಡಿದ ಬಳಿಕ ಭಾಷಣ ಮಾಡಿ, ನಾಯಂಡಹಳ್ಳಿಯಿಂದ ಹೊರಟ ಎರಡನೇ ರೈಲಿನಲ್ಲಿ ತೆರಳಿದರು.
ಮಹಿಳಾ ರೈಲು ನಿರ್ವಾಹಕರಾದ ಬಿ ಗೌತಮಿ ಮತ್ತು ಸ್ಮಿತಾ ಎಂ ರೇವಣಕರ್ ನೇತೃತ್ವದಲ್ಲಿ ಉದ್ಘಾಟನಾ ರೈಲು 10.30 ಕ್ಕೆ ಹೊರಟುಹೋಯಿತು. ಈ ರೈಲಿನಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 88 ಸಿಬ್ಬಂದಿಗಳಿಗೆ ಪ್ರಯಾಣಿಸಲು ಅವಕಾಶ ನೀಡುವ ಮೂಲಕ ಗೌರವಿಸಲಾಯಿತು. ಅವರೊಂದಿಗೆ ಕೆಲವು ಭದ್ರತಾ ಸಿಬ್ಬಂದಿ ಸಹ ಸೇರಿಕೊಂಡರು.
'ಇದು ನಮಗೆಲ್ಲರಿಗೂ ಒಂದು ದೊಡ್ಡ ದಿನವಾಗಿತ್ತು. ವೈಯಕ್ತಿಕವಾಗಿ, ನಾನು ಕಳೆದ ಐದು ವರ್ಷಗಳಿಂದ ಈ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೆ. ಮೊದಲ ರೈಲಿನಲ್ಲಿ ಪ್ರಯಾಣಿಸುವುದು ನನಗೆ ಮತ್ತು ನನ್ನ ತಂಡಕ್ಕೆ ಬಹಳ ರೋಮಾಂಚಕಾರಿ ಮತ್ತು ಅವಿಸ್ಮರಣೀಯವಾಗಿತ್ತು' ಎಂದು ಬಿಎಂಆರ್‌ಸಿಎಲ್‌ಗಾಗಿ ಸಿವಿಲ್ ಕೆಲಸಗಳನ್ನು ನಿರ್ವಹಿಸಿದ ಸೋಮ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ಸುರಕ್ಷಾ ವ್ಯವಸ್ಥಾಪಕ ಎ ಸುರೇಶ್ ಕುಮಾರ್ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
"ನಾವು ಕೆಂಗೇರಿಯಲ್ಲಿ ಟರ್ಮಿನೇಟಿಂಗ್ ಸ್ಟೇಷನ್ ವರೆಗೆ ಪ್ರಯಾಣ ಮಾಡಿದೆವು. ಸಿಎಂ ಸ್ವತಃ ಈ ರೈಲನ್ನು ಫ್ಲ್ಯಾಗ್‌ಆಫ್ ಮಾಡಿದ್ದರಿಂದ ನಮಗೆಲ್ಲರಿಗೂ ಇದು ಒಂದು ಅದ್ಭುತ ಕ್ಷಣವಾಗಿತ್ತು. ಲೈನ್ ಆರಂಭಿಸಲು ನಾವು ಕಾತರದಿಂದ ಕಾಯುತ್ತಿದ್ದೆವು ಮತ್ತು ಆದ್ದರಿಂದ ಇದು ನಮಗೆ ವಿಶೇಷ ದಿನವಾಗಿತ್ತು. ನಮ್ಮಲ್ಲಿ ಹೆಚ್ಚಿನವರು ಪ್ರಯಾಣದುದ್ದಕ್ಕೂ ಸೆಲ್ಫಿ ತೆಗೆದುಕೊಳ್ಳುತ್ತಲೇ ಇದ್ದರು" ಎಂದು ಇನ್ನೊಬ್ಬ ಸಿವಿಲ್ ಗುತ್ತಿಗೆದಾರ , ಸ್ಟಾರ್ವರ್ತ್ ಇನ್ಫ್ರಾಸ್ಟ್ರಕ್ಚರ್ ಕಾರ್ಪೊರೇಷನ್ ಲಿಮಿಟೆಡ್ ನ ಗುಣಮಟ್ಟದ ಎಂಜಿನಿಯರ್ ಸಿವಿ ಅಲ್ಜೊ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


