ಕ್ಷಯ ರೋಗ ಪತ್ತೆಗಾಗಿ ಆರೋಗ್ಯ ಇಲಾಖೆಯಿಂದ ಮನೆ ಮನೆ ಸಮೀಕ್ಷೆ
ಕೋವಿಡ್ನಿಂದ ಚೇತರಿಸಿಕೊಂಡ ವ್ಯಕ್ತಿಗಳಲ್ಲಿ ಮತ್ತು ಅವರ ಮನೆಯ ಸಂಪರ್ಕದಲ್ಲಿರುವವರ ಮನೆ ಮನೆ ಭೇಟಿ ಮಾಡಿ ಕ್ಷಯರೋಗ ಪತ್ತೆಗಾಗಿ ಆರೋಗ್ಯ ಇಲಾಖೆ ಸಮೀಕ್ಷೆ ನಡೆಸಿದೆ.

ಬೆಂಗಳೂರು: ಕೋವಿಡ್ನಿಂದ ಚೇತರಿಸಿಕೊಂಡ ವ್ಯಕ್ತಿಗಳಲ್ಲಿ ಮತ್ತು ಅವರ ಮನೆಯ ಸಂಪರ್ಕದಲ್ಲಿರುವವರ ಮನೆ ಮನೆ ಭೇಟಿ ಮಾಡಿ ಕ್ಷಯರೋಗ ಪತ್ತೆಗಾಗಿ ಆರೋಗ್ಯ ಇಲಾಖೆ ಸಮೀಕ್ಷೆ ನಡೆಸಿದೆ.
ಕೊವಿಡ್ -19 ಮತ್ತು ಕ್ಷಯರೋಗವು ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಯ ಲಕ್ಷಣಗಳುಳ್ಳ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಾಗಿದ್ದು, ಕ್ಷಯರೋಗವು ಕೋವಿಡ್ -19 ಸೋಂಕಿನ ಅಪಾಯವನ್ನು ಹೆಚ್ಚಿಸುತ್ತಿವೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಕ್ಷಯ ಮತ್ತು ಕೋವಿಡ್ -19 ಸೋಂಕು ತ್ವರಿತ ಮತ್ತು ತೀವ್ರ ರೋಗ ಲಕ್ಷಣಗಳ ಬೆಳವಣಿಗೆ ಹಾಗೂ ರೋಗದ ಪ್ರಗತಿಯು ಎರಡೂ ರೋಗಿಗಳ ಕಳಪೆ ಫಲಿತಾಂಶದೊಂದಿಗೆ ಸಂಬಂಧಿಸಿದ್ದು, ರೋಗಿಗಳ ಫಲಿತಾಂಶಗಳನ್ನು ಸುಧಾರಿಸಲು, ಸಂಪರ್ಕಗಳ ಮತ್ತು ಸಮುದಾಯದಲ್ಲಿ ಪ್ರಕರಣವನ್ನು ಕಡಿಮೆ ಮಾಡಲು ಈ ಎರಡು ರೋಗಗಳ ಆರಂಭಿಕ ಪತ್ತೆ ಮತ್ತು ಚಿಕಿತ್ಸೆ ಅಗತ್ಯವಿದೆ.
ಹೀಗಾಗಿ ಆರೋಗ್ಯ ಇಲಾಖೆಯು ಆಗಸ್ಟ್ 16 ರಿಂದ ಆಗಸ್ಟ್ 31 ರವರೆಗೆ ವಿಶೇಷವಾಗಿ ಕೋವಿಡ್ ನಿಂದ ಚೇತರಿಸಿಕೊಂಡ ವ್ಯಕ್ತಿಗಳಲ್ಲಿ ಮತ್ತು ಅವರ ಸಂಪರ್ಕದಲ್ಲಿರುವವರ ಮನೆ - ಮನೆ ಭೇಟಿ ಮಾಡಿ ಕ್ಷಯರೋಗ ಪತ್ತೆಗಾಗಿ ಸಕ್ರಿಯ ಅಭಿಯಾನವನ್ನು ಹಮ್ಮಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


