ಕೊರೊನಾ ಮೃತ್ಯು ಪ್ರಮಾಣ 90-99ರ ವಯೋಮಾನದವರಲ್ಲಿ ಹೆಚ್ಚು: ರಾಜ್ಯದ ಕೋವಿಡ್ ವಾರ್ ರೂಮ್ ಮಾಹಿತಿ
ಕೊರೊನಾದಿಂದ ಮೃತಪಟ್ಟವರಲ್ಲಿ 90-99ರ ವಯೋಮಾನದ ಸೋಂಕಿತರೇ ಹೆಚ್ಚಾಗಿರುವುದು ಕಂಡುಬಂದಿದೆ. ಶೇ. 12 ಪ್ರತಿಶತ ಮೃತ್ಯು ಈ ವಯೋಮಾನದವರಲ್ಲಿ ಸಂಭವಿಸಿದೆ.

ಬೆಂಗಳೂರು: ರಾಜ್ಯದ ಕೊರೊನಾ ಮಾಧ್ಯಮ ಕೊಠಡಿಯ(ವಾರ್ ರೂಮ್) ಮಾಹಿತಿಯನ್ನು ಪರಿಶೀಲನೆಗೆ ಒಳಪಡಿಸಿದಾಗ ಇದುವರೆಗೂ ಕೊರೊನಾದಿಂದ ಮೃತಪಟ್ಟವರಲ್ಲಿ 90- 99ರ ವಯೋಮಾನದ ಸೋಂಕಿತರೇ ಹೆಚ್ಚಾಗಿರುವುದು ಕಂಡುಬಂದಿದೆ. ಶೇ. 12 ಪ್ರತಿಶತ ಮೃತ್ಯು ಈ ವಯೋಮಾನದವರಲ್ಲಿ ಸಂಭವಿಸಿದೆ. ಅದನ್ನು ಹೊರತು ಪಡಿಸಿದರೆ ಶೇ. 7.7 ಪ್ರತಿಶತ ಮಂದಿ 80- 89ರ ವಯೋಮಾನದವರಾಗಿದ್ದಾರೆ. ಶೇ.6 ಪ್ರತಿಶತ ಮಂದಿ 70- 79 ವಯೋಮಾನದವರಾಗಿದ್ದಾರೆ. ಇದು ಶೇಖಡಾವಾರು ಆಧಾರದಲ್ಲಿ ಸಿಕ್ಕ ಮಾಹಿತಿ.
ಆದರೆ ಸಂಖ್ಯಾವಾರು ಮಾಹಿತಿಯನ್ನು ಪರಿಗಣಿಸಿದರೆ ಅತಿ ಹೆಚ್ಚು ಮಂದಿ ಮೃತರು 60- 69 ವಯೋಮಾನಕ್ಕೆ ಸೇರಿದವರಾಗಿದ್ದಾರೆ. ಈ ವರ್ಗದಲ್ಲಿ 10,692 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. 50- 59ರ ವಯೋಮಾನದ 8,181 ಮಂದಿ ಇದುವರೆಗೂ ಸಾವನ್ನಪ್ಪಿದ್ದಾರೆ. 70- 79ರ ವಯೋಮಾನದ 7,236 ಮಂದಿ ಸಾವನ್ನಪ್ಪಿದ್ದಾರೆ. 80- 89ರ ವಯೋಮಾನದ 2,668 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 90- 99ರ ವಯೋಮಾನದವರ ವರ್ಗದಲ್ಲಿ 540 ಮೃತ್ಯು ಸಂಭವಿಸಿದೆ.
ರಾಜ್ಯಾದ್ಯಂತ ಭಾನುವಾರ ಒಟ್ಟು 1,189 ಸೋಂಕು ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ರಾಜ್ಯದ ಒಟ್ಟು ಸೋಂಕು ಪ್ರಕರನಗಳ ಸಂಖ್ಯೆ 29,38,616 ಕ್ಕೆ ಏರಿಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


