ಹೊಟ್ಟೆಯೊಳಗೆ 1.2 ಕೆ.ಜಿ ಕೊಕೈನ್ ಸಾಗಿಸುತ್ತಿದ್ದವ ಬೆಂಗಳೂರು ಏರ್ ಪೋರ್ಟಲ್ಲಿ ಸೆರೆ
ವಿಚಾರಣೆ ಪ್ರಾರಂಭದಲ್ಲಿ ಆತ ತಾನು ಮಾದಕ ವಸ್ತು ಸಾಗಿಸುತ್ತಿದ್ದುದ್ದನ್ನು ನಿರಾಕರಿಸಿದರೂ ಸ್ವಲ್ಪ ಹೊತ್ತಿನಲ್ಲಿ ಆತ ಅಸ್ವಸ್ಥಗೊಂಡಿದ್ದ.

ಬೆಂಗಳೂರು: ಹೊಟ್ಟೆಯೊಳಗೆ 1.25 ಕೆ.ಜಿ ಕೊಕೈನ್ ಸಾಗಿಸುತ್ತಿದ್ದ ಆಫ್ರಿಕಾ ಮೂಲದ ವ್ಯಕ್ತಿಯನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಬಂಧಿಸಿರುವ ಘಟನೆ ನಡೆದಿದೆ. ಇದುವರೆಗೂ ಹೊಟ್ಟೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತು ಸಾಗಣೆಗೆ ಯತ್ನಿಸಿದ್ದು ಇದೇ ಮೊದಲು ಎಂದು ಅಧಿಕಾರಿಗಳು ಅಚ್ಚರಿಪಟ್ಟಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಕಂಡುಬಂದ ಪರಿಣಾಮ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದರು. ವಿಚಾರಣೆ ಪ್ರಾರಂಭದಲ್ಲಿ ಆತ ತಾನು ಮಾದಕ ವಸ್ತು ಸಾಗಿಸುತ್ತಿದ್ದುದ್ದನ್ನು ನಿರಾಕರಿಸಿದರೂ ಸ್ವಲ್ಪ ಹೊತ್ತಿನಲ್ಲಿ ಆತ ಅಸ್ವಸ್ಥಗೊಂಡಿದ್ದ. ಅತನಿಗೆ ಚಿಕಿತ್ಸೆ ನೀಡಬೇಕಾಗಿ ಬಂದಿತ್ತು. ಈ ಸಂದರ್ಭದಲ್ಲಿ ಆತ ತನ್ನ ಹೊಟ್ತೆ ಒಳಗೆ ಮಾದಕ ವಸ್ತು ಇರುವುದನ್ನು ಒಪ್ಪಿಕೊಂಡಿದ್ದ.
1.25 ಕೆ.ಜಿ ಕೊಕೈನ್ ಅನ್ನು ದೊಡ್ಡ ದೊಡ್ಡ ಕ್ಯಾಪ್ಸೂಲ್ ಗಳಲ್ಲಿ ತುಂಬಿಡಲಾಗಿತ್ತು. ಈ ಕ್ಯಾಪ್ಸೂಲ್ ಗಳನ್ನು ಆತ ನುಂಗಿದ್ದ. ಆತನಿಗೆ ಈ ಕ್ಯಾಪ್ಸೂಲ್ ಗಳನ್ನು ನೀಡಿದ್ದು ಯಾರು ಎಂಬುದರ ಬಗ್ಗೆ ಆರೋಪಿ ಬಾಯಿ ಬಿಟ್ಟಿಲ್ಲ. ವಿಮಾನ ನಿಲ್ದಾಣದಿಂದ ನೇರವಾಗಿ ಆತನಿಗೆ ಹೊಟೇಲೊಂದರಲ್ಲಿ ರೂಮ್ ಬುಕ್ ಮಾಡಲು ಸೂಚನೆ ನೀಡಲಾಗಿತ್ತು. ಅಲ್ಲಿಗೇ ವ್ಯಕ್ತಿಯೊಬ್ಬ ಬಂದು ಈ ಕ್ಯಾಪ್ಸೂಲ್ ಗಳನ್ನು ಪಡೆದುಕೊಳ್ಳುವುದಾಗಿ ಆರೋಪಿಗೆ ನಿರ್ದೇಶನ ನೀಡಲಾಗಿತ್ತು.
ಆರೋಪಿ ಬಳಿ ಪತ್ತೆಯಾಗಿರುವ ಕೊಕೈನ್ ಬೆಲೆ 11 ಕೋಟಿ ರೂ ಎಂದು ತಿಳಿದುಬಂದಿದೆ. ಆರೋಪಿಯನ್ನು ಎನ್ ಡಿ ಪಿ ಎಸ್ ಕಾಯ್ದೆಯಡಿ ಬಂಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


