ಕುಮಾರಸ್ವಾಮಿಯ ಕ್ರಾಂತಿಕಾರಿ ಮಾತುಗಳೆಲ್ಲ 'ನಾನ್ ಸೆನ್ಸ್' ಎಂದ ನಟ ಚೇತನ್
ರಾಜ್ಯದಲ್ಲಿ ಐದು ವರ್ಷ ಸರ್ಕಾರ ನಡೆಸುವ ಅವಕಾಶ ಸಿಕ್ಕರೆ ಕ್ರಾಂತಿಕಾರಿ ಬದಲಾವಣೆ ತರುತ್ತೇನೆ ಎಂಬ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ ಅವರ ಮಾತುಗಳು ನಾನ್ ಸೆನ್ಸ್ ಎಂದು ನಟ ಚೇತನ್ ಹೇಳಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಐದು ವರ್ಷ ಸರ್ಕಾರ ನಡೆಸುವ ಅವಕಾಶ ಸಿಕ್ಕರೆ ಕ್ರಾಂತಿಕಾರಿ ಬದಲಾವಣೆ ತರುತ್ತೇನೆ ಎಂಬ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ ಅವರ ಮಾತುಗಳು ನಾನ್ ಸೆನ್ಸ್ ಎಂದು ನಟ ಚೇತನ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಚೇತನ್, ಕರ್ನಾಟಕವನ್ನು 5 ವರ್ಷಗಳ ಮುನ್ನಡೆಸುವ ಸ್ವಾತಂತ್ರ್ಯವಿದ್ದಿದ್ದರೆ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತೇನೆಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಮೊದಲಿಗೆ, 2 ಬಾರಿ ಅವರು ಸಿಎಂ ಆಗಿದ್ದಾಗಲೂ ಕೂಡಾ ನಮ್ಮ ರಾಜ್ಯಕ್ಕೆ ಅಂತಹದೇನೂ ಕ್ರಾಂತಿಕಾರಿ ಮಾಡಲಿಲ್ಲ, ಪ್ರಯತ್ನವನ್ನು ಮಾಡಲಿಲ್ಲ. ಮುಖ್ಯವಾಗಿ ಅವರಿಗೆ ಕ್ರಾಂತಿಕಾರಿ ದೃಷ್ಟಿ ಇಲ್ಲ ಮತ್ತು ಯಥಾಸ್ಥಿತಿ ಚಿಂತನೆ ಪ್ರಕ್ರಿಯೆಯು ಅಧಿಕಾರಕ್ಕೆ ಮುಂಚಿತವಾಗಿರಬೇಕು ಇವುಗಳೆಲ್ಲಾ ನಾನ್ ಸೆನ್ಸ್ ಪದಗಳು ಎಂದು ಚೇತನ್ ಹೇಳಿದ್ದಾರೆ.
ಚೇತನ್ ಅವರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿರುವ ಜೆಡಿಎಸ್ ಮಾಹಿತಿ ತಂತ್ರಜ್ಞಾನ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಪ್ರತಾಪ್ ಕಣಗಾಲ್, ತಾವೊಬ್ಬ ಹೋರಾಟಗಾರ ಎಂದು ಬಿಂಬಿಸಿಕೊಳ್ಳುವ ಚೇತನ್, ರಾಷ್ಟ್ರವಾದಿ ನಟಿಯರಂತೆ ಕೇವಲ ಗಮನ ಸೆಳೆಯುವ ಪ್ರಯತ್ನ ಮಾಡಿ ವಿಫಲ ನಟನಾಗಿ ಉಳಿದಿದ್ದಾರೆ. ಯಾವ ವಿಷಯವನ್ನು ಅರಿಯದೆ ಎಲ್ಲದರಲ್ಲೂ ಮೂಗು ತೂರಿಸುತ್ತಾರೆ ಎಂದು ಟೀಕಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


