ನಗರದಲ್ಲಿ ವಾಸಿಸುತ್ತಿರುವ ಆಫ್ರಿಕಾ ಪ್ರಜೆಗಳ ಜೊತೆ ಬೆಂಗಳೂರು ಪೊಲೀಸರ 'ಹಲೋ ಆಫ್ರಿಕನ್' ಸಂವಾದ
ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ಸಂಭವಿಸಿದ ಆಫ್ರಿಕನ್ ಪ್ರಜೆ ಲಾಕಪ್ ಡೆತ್ ನಂತರ ನಗರದಲ್ಲಿರುವ ಆಫ್ರಿಕಾದ ವಿವಿಧ ಪ್ರಜೆಗಳೊಂದಿಗೆ ಪೂರ್ವ ವಿಭಾಗದ ಪೊಲೀಸರು ಸೌಹಾರ್ದಯುತ ಸಂವಾದ ನಡೆಸಿದ್ದಾರೆ.

ಬೆಂಗಳೂರು: ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ಸಂಭವಿಸಿದ ಆಫ್ರಿಕನ್ ಪ್ರಜೆ ಲಾಕಪ್ ಡೆತ್ ನಂತರ ನಗರದಲ್ಲಿರುವ ಆಫ್ರಿಕಾದ ವಿವಿಧ ಪ್ರಜೆಗಳೊಂದಿಗೆ ಪೂರ್ವ ವಿಭಾಗದ ಪೊಲೀಸರು ಸೌಹಾರ್ದಯುತ ಸಂವಾದ ನಡೆಸಿದ್ದಾರೆ.
ಪೂರ್ವ ವಿಭಾಗದ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ನೇತೃತ್ವದಲ್ಲಿ ನಡೆದ 'ಹಲೋ ಆಫ್ರಿಕಾ' ಹೆಸರಿನ ಮಾತುಕತೆಯಲ್ಲಿ ನೈಜೀರಿಯಾ, ಉಗಾಂಡ, ಐವರಿ ಕೊಸ್ಟ್, ಕಾಂಗೋ, ಸುಡಾನ್ ಸೇರಿದಂತೆ ಆಫ್ರಿಕಾ ಖಂಡದ ವಿವಿಧ ರಾಷ್ಟ್ರಗಳ ಪ್ರಜೆಗಳು ಭಾಗಿಯಾಗಿ ಮಾತುಕತೆ ನಡೆಸಿದ್ದಾರೆ.
ಪಾಸ್‌ಪೋರ್ಟ್, ವೀಸಾ ಸರಿಯಾಗಿದ್ದರೆ ಯಾವುದೇ ತೊಂದರೆ ನೀಡುವುದಿಲ್ಲ. ನಿಮ್ಮ ನಿಮ್ಮ ಉದ್ಯಮ, ಶಿಕ್ಷಣಕ್ಕೆ ಇಲ್ಲಿ ಯಾವುದೇ ತೊಂದರೆಯಿಲ್ಲ. ಆದರೆ ಅನಧಿಕೃತ ವಾಸ, ಅಪರಾಧ ಕೃತ್ಯದಲ್ಲಿ ಭಾಗಿಯಾದರೆ ಶಿಕ್ಷಾರ್ಹವಾಗಿದ್ದು, ಈ ನೆಲದ ಕಾನೂನಿನಂತೆ ನಡೆದುಕೊಳ್ಳುವುದು ಕಡ್ಡಾಯವೆಂದು ಸೂಚಿಸಲಾಗಿದೆ.
ಇದೇ ವೇಳೆ ಪೊಲೀಸರ ಮುಂದೆ ಅಳಲು ತೋಡಿಕೊಂಡ ಕೆಲ ಆಫ್ರಿಕನ್ ಪ್ರಜೆಗಳು ಕೋವಿಡ್ ಸಂದರ್ಭದಲ್ಲಿ ತಾವು ಸಾಕಷ್ಟು ತೊಂದರೆ ಎದುರಿಸಿದ್ದು, ಅನೇಕರು ತಮ್ಮದೇ ಸಮುದಾಯದ ಮುಖಂಡರ ಮಾತು ಕೇಳದೆ ಅಡ್ಡದಾರಿ ಹಿಡಿದಿದ್ದಾರೆ ಎಂದು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ..
ಏತನ್ಮಧ್ಯೆ, ಪೊಲೀಸರು, ಸಭೆಯ ಮೂಲಕ, ತಾವು ಯಾರ ವಿರುದ್ಧವೂ ಇಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಆದಾಗ್ಯೂ, ಡ್ರಗ್ ಪೆಡ್ಲರ್‌ಗಳ ವಿರುದ್ಧ ಮತ್ತು ನಗರದ ಸುತ್ತಮುತ್ತ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ನಮ್ಮ ಸಮರ ಮುಂದುವರಿಯುತ್ತದೆ. ಇಂತಹ ಸಭೆಗಳನ್ನು ನಿಯಮಿತವಾಗಿ ನಡೆಸುವ ಅಗತ್ಯವಿದೆ ಎಂದು ಉತ್ತರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


